ಪುಟ:Ekaan'gini.pdf/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪ ಎಕಾಂಗಿನಿ

  ಇನ್ನು ವಿಜಯಳಿಗೆ ತನ್ನೊಲವಿನ ಅಗತ್ಯವಿಲ್ಲವೆಂದೇ ಆಕ ಬಗೆದಳು. ಆಯೋಚನೆಯಿಂದ ದುಃಖವೆನಿಸಿತು. ಆದರೆ ಮರುಕ್ಷಣವೆ, ಇದರಿಂದ ತನಗೆ ಬೇಸರವಾಗಬಾರದು, ತಂಗಿ ಸಖಿಯಾದುದನ್ನು ಕಂಡು ತಾನು ಸಂತೋಷಪಡಬೇಕು, ಎಂದುಕೊಂಡಳು.
  ಅಕ್ಕನ ಹಾಸಿಗೆಯ ಕಡೆಗೆ ಮಗ್ಗಲು ಹೊರಳಿದಳು ವಿಜಯಾ. ಒಲವು ತುಂಬಿದ ದೃಷ್ಟಿಯಿಂದ ತಂಗಿ ತನ್ನನ್ನೆ ನೋಡುತ್ತಿದ್ದುದ್ದನ್ನು ಸುನಂದಾ ಕಂಡಳು.
  ಆಕೆಯ ಕೈ ವಿಜಯಳದನ್ನು ಹುಡುಕಿತು. ಬೆರಳುಗಳು ಪರಸ್ಪರ ಹೆಣೆದುಕೊಂಡವು.
 ಆದರೂ ಮಾತು ಹೊರಡಲಿಲ್ಲ. ಕೊನೆಗೆ ಆ ಮೌನ ದುಸ್ಸಹವಾಯಿತೆಂದು ಸುನಂದಾ ಅಂದಳು:
 "ಪದ್ಮಾ, ಅಂತ ನಿನ್ನನ್ನು ಕೂಗಿದ್ದಕ್ಕೆ ಅವರೇನಂದರು?"
 "ಪದ್ಮ ಅನ್ನೋದು ನನ್ನ ಹೆಸರೇ ಇರಬಹುದೂಂತ ತಿಳಿಕೊಂಡಿದ್ರು.
 ತಮಾಷಿ! ಅಂಥದೊಂದು ಹುಡೀದೇಂತ ಅವರಿಗೆ ಗೊತ್ತೇ ಇರಿ.
 "ಹೇಳ್ಕೊಟ್ಟೆ ತಾನೆ?"
  "ಶಿವಮೊಗ್ಗೆಗೆ ಹೋದ್ಮೇಲೆ ಮೈಸೂರು ಮಲ್ಲಿಗೆ ಪುಸ್ತಕ ಕೊಂಡ್ಕೊಳ್ಳೋಣಾಂದ್ರು."
  ಸುನಂದೆಗೂ ಹಿಂದೆ ಅಂತಹ ಆಸೆಗಳಿದ್ದುವು. ಗತಕಾಲದೊಂದು ಸಂಭಾಷಣೆಯ ತುಣುಕು ಆಕೆಯ ಕಿವಿಗಳಲ್ಲಿ ಮೊರೆಯುತ್ತಿತ್ತು.
 'ನಾವು ಕಲ್ಚರಾ ಆಗಿರ್ಬೇಕು ಅಲ್ವಾ?'
  'ಅದೇನೆ ಕಲ್ಚರ್ಡ್ ಅಂದ್ರೆ?'
  ಹಸುಳೆಯ ಮರುಪ್ರಶ್ನೆಯಲ್ಲ--ತಿರಸ್ಕಾ, ಬೆರೆತ ವ್ಯಂಗ್ಯೋಕ್ತಿ, ಆಸೆಯ ಎಳೆಯ ಕುಡಿ ಕುಡಿದು ಹೋಗಿತ್ತು ಅಲ್ಲಿಗೇ.
  ಅಕ್ಕ ಮರುಮಾತನಾಡವೆಂದು ಕಾತರ ಧ್ವನಿಯಲ್ಲಿ ವಿಜಯಾ ಕೇಳಿದಳು.
  "ಯಾಕಕ್ಕ ಸುಮ್ನಿದೀಯಾ?"
  ತೂಕಡಿಸುತ್ತಿದ್ದವಳನ್ನು ಎಚ್ಚರಿಸಿದ ಹಾಗಾಯಿತು ಸುನಂದೆಗೆ
  "ಏನೂ ಇಲ್ಲ ವಿಜಯಾ. ಸುಮ್ನೆ ಯೋಚಿಸ್ತಿದ್ದೆ."