ಪುಟ:Ekaan'gini.pdf/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ೨೯

ವಿಜಯಾ ಗಂಡನ ಮನೆಗೆ ಹೊರಟುಹೋದ ಮಾರನೆಯ ದಿನ ಆಕೆಯ ತಂದೆ ಕೃಷ್ಣಪ್ಪನವರು ಏಳುವುದು ತಡವಾಯಿತು. ಎಚ್ಚರವಾದರೂ ಮೈ ಕೈ ನೋಯುತ್ತಿತ್ತೆಂದು ಮುಸುಕೆಳೆದು ಹಾಗೆಯೇ ಮಲಗಿದರು.

ನಡುಮನೆಯಲ್ಲಿ ಕಸಗುಡಿಸಿದ ಬಳಿಕ ಕೊರಡಿಯತ್ತ ಇಣಿಕಿನೋಡಿ ಸುನಂದಾ ಅಂದಳು:

'ಅಪ್ಪಾ ಬೆಳಗಾಯ್ತಾ ಏಳಲ್ವೇ?" ಕೃಷ್ಣವ್ವ ಈಗ ಎದ್ದರು, ತೂರಿ ಒಳಕ್ಕೆ ಬರುತ್ತಿದ್ದ ಬೆಳಕನ್ನು ನೋಡುತ್ತಾ ಕಣ್ಣು ಕಿರಿದುಗೊಳಿಸಿದರು. ಬಳಿಕ,ತಮ್ಮ ನರನಾದಿಗಳನ್ನು ಕತ್ತು ಹಣೆಗಳನ್ನು ತಾವೇ ಮುಟ್ಟ ನೋಡಿದರು.

"ಸುಂದಾ, ಮೈ ಬೆಚ್ಚಗಿದೆಯಲ್ಲೇ", ಎಂದರು. ಎಷ್ಟೋ ದಿನಗಳಾಗಿದ್ದುವು 'ಸುಂದಾ' ಎಂದು ತಂದೆ ಕೆರೆಯದೆ. ಅದು,ತೀರಾ ಆತ್ಮೀಯವಾದ ಘಳಿಗೆಯಲ್ಲಿ ಅವರು ಬಳಸುತ್ತಿದ್ದ ಪದ.

ಒಲವಿನ ಆ ಸಂಬೋಧನೆ ಕೇಳಿ ಸುನಂದೆಯ ಹೃದಯ ಹಿಗ್ಗಿತ್ತು. ಆದರೆ, ಅದರ ಬೆನ್ನಲ್ಲೆ ಬಂದ ಮಾತಿನಿಂದ ಮುಖ ಮುದುಡಿತು. ಕೈಯಲ್ಲಿದ್ದ ಪೊರಕೆಯನ್ನು ಕೆಳಕ್ಕೆಸೆದು, ಆಕೆ ಕೊರಡಿಯೊಳಕ್ಕೆ ಕಾಲಿಟ್ಟಳು.ತಂದೆಯ ಹಣೆಯನ್ನು ಮುಟ್ಟನೋಡಿವಳು.

"ಎಲ್ಲೋ ಸ್ವಲ್ಪ ಬಿಸಿ ಇದೆ", ಎಂದಳು. "ಮೂರು ನಾಲ್ಕು ದಿವಸವೆಲ್ಲ ಓಡಾಡ್ತಾನೇ ಇದ್ದೆ. ಆ ಆಯಾಸಕ್ಕೆ ಹಾಗಾಗಿದೆ”, ಎಂದು ತನ್ನ ಆಭಿಪ್ರಾಯವನ್ನೂ ಕೊಟ್ಟಳು.

ಕೃಷ್ಣಪ್ಪ ಕಂಬಳಿಯನ್ನು ಕೆಳಕ್ಕೆ ಸರಿಸಿ ಎದ್ದು ನಿಂತರು "ನಿಮ್ಮಮ್ಮನಿಗೆ ಹೇಳ್ಬೇಡ. ಗಾಬರಿ ಬೀಳ್ತಾಳೆ," ಎಂದರು.