ಪುಟ:Ekaan'gini.pdf/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦ ಏಕಾಂಗಿನಿ ತಾಯಿಯ ಸ್ವಭಾವವನ್ನ ಚೆನ್ನಾಗಿಯೇ ತಿಳಿದಿದ್ದ ಸುನಂದೆಗೆ ತಂದೆಯ ಮಾತಿನಿಂದ ಆಶ್ಚರ್ಯವೇನೂ ಆಗಲಿಲ್ಲ. "ಇವತ್ತು ಮನೇಲೇ ಇದ್ದು ವಿಶ್ರಾಂತಿ ತಗೋಪ್ಪಾ," ಎನ್ನುತ್ತ ಆಕೆ ಹಾಸಿಗೆ ಸುತ್ತಿದಳು... ...ಮುಂದೆ ಆ ದಿನ ಕಾತರಕ್ಕೆ ಕಾರಣವಾದುದು ತಂದೆಯ ಜ್ವರವಲ್ಲ,--ತಾಯಿಯ ಕಾಹಿಲೆ ಸೂರ್ಯ ಮೇಲಕ್ಕೇರಿದಂತೆಯೆ ಆಕೆ ನರಳುವುದು ಹೆಚ್ಚಿತು. ಕೆಟ್ಟನೆಗಡಿ, ಮೂಗಿನಿಂದ ಒಂದೇ ಸಮನೆ ನೀರು ಸೋರುತ್ತಿತ್ತು. ಸಾಲದುದಕ್ಕೆ ವಿಜಯಳನ್ನು ಕುರಿತು ಏನಾದರೂ ಮಾತನಾಡುತ್ತಾ ಅವರು ಅಳುತ್ತಿದ್ದರು. ಮಧ್ಯಾಹ್ನದ ಅಡುಗೆಯೇನೋ ಆಯಿತು ಆದರೆ ಸುನಂದೆಯ ತಾಯಿ ಊಟಕ್ಕೇಳಲಿಲ್ಲ. "ಯಾಕೋ ಮೈಯೆಲ್ಲಾ ಛಳಿ ಛಳಿ. ಸ್ವಲ್ಪ ಬೆಚ್ಚಗೆ ಮುಸುಕು ಹಾಕ್ಕೊಂಡು ಮಲಕ್ಕೋತೀನಿ," ಎನ್ನುತ್ತ ಅವರು ಹಾಸಿಗೆಯ ಆಶ್ರಯ ವಡೆದರು. ಸದ್ಯ ತಾಯಿಯ ಪರಿಸ್ಥಿತಿಯನ್ನು ತಂದೆಯಿಂದ ಬಚ್ಚಿಡುವ ಅಗತ್ಯ ಸುನಂದೆಗಿರಲಿಲ್ಲ. ತನ್ನಾಕೆಯ ಆರೋಗ್ಯ ಸರಿಯಾಗಿಲ್ಲವೆಂದು ತಿಳಿಯುವುದು ಕೃಷ್ಣಪ್ಪನವರಿಗೆ ಕಷ್ಟವಾಗಲಿಲ್ಲ. ಅದನ್ನು ಗಂಡನಿಂದ ಬಚ್ಚಿಡಲು ಆ ಸಾಧ್ವೀರಣಿ ಯತ್ನಿಸಿದ್ದರೆ ತಾನೆ? ಅವರು ಕೈಹಿಡಿದವಳಿಗಾಗಿ ಕಷಾಯ ಸಿದ್ಧಗೊಳಿಸಿದರು. ತಾವೇ ಕೈಯಾರ ಅದನ್ನು ಕುಡಿಸಿದರು. "ಸ್ವಸ್ಥ ನಿದ್ದೆ ಹೋಗು. ಸಾಯಂಕಾಲದೊಳಗೆ ವಾಸಿಯಾಗುತ್ತೆ,"ಎಂದರು. ನಿದ್ದೆಯೇನೋ ಬಂತು. ಆದರೆ ಸಂಜೆಯ ಹೊತ್ತಿಗೆ ಜ್ವರ ಇಳಿಯಲಿಲ್ಲ. ತಮಗೆ ಏನು ಬೇಕಾದರೂ "ವಿಜಯಾ" ಎಂದು ಕರೆಯುತ್ತಿದ್ದರು ಆ ತಾಯಿ. ಸುನಂನೆ, "ಬಂದೆ ಅಮ್ಮಾ" ಎಂದು ತಾನೇ ಉತ್ತರಿಸುತ್ತಿದ್ದಳು. ಸಂಜೆ ಒಲೆ ಹಚ್ಚಿ ಸಬ್ಬಕ್ಕಿ ಗಂಜಿಯನ್ನಿಷ್ಟು ಬೇಯಿಸಿ ಸುನಂದಾ ತಾಯಿಗೆ ಕುಡಿಸಿದಳು. ತಮ್ಮ ಹಳೆಯ ಶಾಲು ಹೊದೆದು ಆರಾಮ ಕುರ್ಚಿಯ ಮೇಲೆ ಜಗಲಿಯಲ್ಲಿ ಕುಳಿತಿದ್ದರು ತಂದೆ. ಕೈಯಲ್ಲಿ ನಶ್ರದ ಡಬ್ಬವಿತ್ತು. ಸರಸ್ವತಿ ತೊಡೆಯ ಮೇಲಿದ್ದಳು. ಸುನಂದಾ ಅವರ ಬಳಿಗೆ ಬಂದು ಹಣೆಯನ್ನು ಮುಟ್ಟಿ ನೋಡಿದಳು. ಕೃಷ್ಣಪ್ಪ ಮುಗುಳು ನಕ್ಕರು