ಪುಟ:Ekaan'gini.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦ ಏಕಾಂಗಿನಿ ತ್ತಿದೆ, ಕೆಳಗಿರುವ ಬಂಡೆಕಲ್ಲಿಗೆ ಬಡೆದು ಅದು ಪುಡಿಪುಡಿಯಾಗುವುದೇ ನಿಶ್ಚಯ– ಎಂದು ಸುನಂದೆಗೆ ಈಗ ಭಾಸವಾಗುತ್ತಿತ್ತು. “ಹಣೆಯಲ್ಲಿ ಏನು ಬರೆದಿದೆಯೋ ಹಾಗಾಗಲಿ”, ಎನು ವುದೊಂದೇ ಆಕೆಯ ಪಾಲಿಗಿದ ಸಮಾಧಾನದ ತ‌‍ತ್ವಗ್ನಾನ ವಿಧಿಲಿಕಿತ ಎನ್ನುವ ಮಾತಿನಲ್ಲಿ ಆಕೆಯ ನಂಬುಗ ಇತ್ತೆಂದಲ್ಲ.ನಂಬುಗೆಗಿಂತಲು ಹೆಚ್ಚಾಗಿ, ಆ ರೀತಿಯ ಭಾವನೆಯಿಂದ ಒಂದು ತೆರನಾದ ನೆಮ್ಮದಿ ಸಿಗುತ್ತಿತ್ತು. ಯಾವುದೋ ಗನಿಯ ಆಳದಿಂದ ಬಂದಂತೆ ಕೃಷ್ಣಪ್ಪನವರು ಸ್ವರಕೇಳಿಸಿತು "ನಾನು ಯಾವತ್ತು ಹೊರಡಲಿ?" ಪೂರ್ಣಬೋಧಯಿಲ್ಲದೆ ಪ್ರಷ್ನೆ ಅಸ್ಪಷ್ಟವಾಗಿ ಕೇಳಿಸಿದವಳಂತೆ ಸುನಂದಾ ಅಂದಳು: "ಏನಂದೆ,ಅಪ್ಪಾ?" “ನಾನು ಯಾವತ್ತು ಹೊರಟರಾದೀತೂಂತ ?" "ಹೂಂ" "ಬುಧವಾರ ಹೊರಡ್ತೀನಿ, ಆಗದೇ ?' ಸುನಂದ ನಕ್ಕಳು. " ಮಂಗಳವಾರ ಹೂರಟು ಆಶುಭ ಫಲ ಪ್ರಾಪ್ತಿಯಾಗೋದು ಬೇಡ. ಬುಧವಾರವೇ ಹೊರಡು." ಕೃಷ್ಣಪ್ಪನವರು ಏನ್ನನ್ನೋ ಹೇಳಲಾರದೆ ನೀಳವಾಗಿ ಉಸಿರುಬಿಟ್ಟರು . ಮಗಳೊಡನೆ ವಿಚಾರವಿನಿಮಯವಾದ ಬಳಿಕ,ಹೆಂಡತಿಯೊಡನೆ ಪ್ರಸ್ತಾಪ.ಆಕೆ ಇತ್ತೀಚಗೆ ಎಷ್ಟೋ ಸಾರೆ ಗಂಡನೊಡನೆ ತಮ್ಮ ಹಿರಿಯ ಅಳಿಯನ ವಿಷಯ ಕೇಳಿದ್ದರು ದೊಡ್ಡ ಮಗಳ ಅದೃಷ್ಟ ಹೀಗಾಯಿತೇ ಎಂದು ಮರುಗಿ ಕಣ್ಣೀರು ಮಿಡಿದಿದ್ದರು.ವಿಜಯಳ ಮದುವೆಯ ಮತ್ತು ಅನಂತರದ ಸಂಭ್ರಮದಲ್ಲಿ ಅವರ ಮನಸ್ಸಿನೊಳಗಿನ ಕೊರಗು ತನ್ನ ಸರದಿ ಕಾಯುತ್ತ ಮರೆಯಲ್ಲಿ ನಿಂತಿತ್ತು.ಆನಂತರವು ತಕ್ಷಣವೇ ಮುಖ ತೋರಿಸುವುದು ಅದಕ್ಕೆ ಸಾಧ್ಯವಾಗಲಿಲ್ಲ. ಎಷ್ಟೋ ಕಾಲದ ಬಳಿಕ ಮಕ್ಕಳನ್ನು ಜತೆಯಾಗಿ ಕಾಣುತಿದ್ದ ತಾಯಿ, ತಮ್ಮ ವಯಸ್ಸಾದ ಕಣ್ಣಗಳು ಅನುಭವಿಸುತಿದ್ದ ಆ ಹಬ್ಬ