ಪುಟ:Ekaan'gini.pdf/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ೪೫ ಯರೂ ಬೆಂಗಳೂರಲ್ಲಿದ್ದರು. ರಾಮಕೃಷ್ಣಯ್ಯನ ಮನೆಯಲ್ಲೆ ಇಳಿದುಕೊಂಡ ರಾಯಿತೆಂದು ತೀರ್ಮಾನಿಸಿದರು. ಅದಕ್ಕೆ ಕಾರಣವಿತ್ತು. ಅವರಿಬ್ಬರ ವಯ ಸ್ಸಿನಲ್ಲಿ ಎರಡು ಮೂರು ವರ್ಷಗಳ ಅಂತರವಿದ್ದರೂ ಆ ಇಬ್ಬರು ನೌಕರಿ ಯಿಂದ ನಿವೃತ್ತರಾದುದು ಒಂದೇ ವರ್ಷ. ಕೃಷ್ಣಪ್ಪನವರ ಸಂಸಾರಕ್ಕಿಂತಲೂ ದೊಡ್ಡದು ರಾಮಕೃಷ್ಣಯ್ಯನವರದು. ದೊಡ್ಡ ಸಂಸಾರದ ಸುಖದುಃಖಗಳ ಸವಿಯುಂಡು ರಾಮಕೃಷ್ಣಯ್ಯ ಅನುಭವಿಯಾಗಿದ್ದರು. ತಮ್ಮ ಆಥವಾ ಇನ್ನೊಬ್ಬರ ಕಷ್ಟವನ್ನು ಕಂಡು ಸುಮ್ಮನಿರುವ ಪ್ರವೃತ್ತಿ ಅವರದಲ್ಲ. ಎಂದೆಂದು ಬರಿದಂತಾಗದಂತಹ ಸಹಾನುಭೂತಿಯ ಆಗರ ಅವರ ಹೃದಯ. ಹಿಂದೆ ಸಾಮಾನ್ಯವಾಗಿ ಕೃಷ್ಣಪ್ಪನವರು ತನುಗಿಂತ ಚಿಕ್ಕವನೊಬ್ಬನ ಮನೆ ಯಲ್ಲಿ ಇಳಿಯುತ್ತಿದ್ದರೂ ಈ ಸಾರೆ ರಾಮಕೃಷ್ಣಯ್ಯನ ನಾಮಾವ್ಯವನ್ನೇ ಬಯಸಿದರು. ಒಂದಾಣೆಯ ಮೋಟಾರು ಪ್ರವಾಸ ಶೆಷಾದ್ರಿಪುರಕ್ಕೆ ಅವರನ್ನು ತಂದು ಬಿಟ್ಟಿತು. ಅಲ್ಲಿ ಐದು ನಿಮಿಷ ಕಾಲ್ನಡಿಗೆ ರಾಮಕೃಷ್ಣಯ್ಯ ಮನೆಯಲ್ಲಿರಲಿಲ್ಲ " ಬನ್ನಿ, ಕೂತ್ಕೋಳ್ಳಿ, ಆಪರೂಪವಾಗಿ ಬಂದಿರಿ ಮನೇಲಿ ಎಲ್ಲರೂ ಸೌಖ್ಯವಾ? ವಿಜಯಾ ಮದುವೆ ಚೆನ್ನಗಿಯೀ ಆಯ್ತಂತೆ" ಎಂದೆಲ್ಲ ರಾಮಕೃಷ್ಣಯ್ಯ ನವರ ಹೆಂಡತಿ ಮಾತಿಗೆ ಆರ೦ಭಿಸಿದರು. ಸ್ನೇಹಿತ ಊರಲ್ಲೇ ಇರುವನೆಂಬುದು ಖಚಿತವಾದ ಬಿಳಿಕ ಕೃಷ್ಣಪ್ಪನವರು ಜಗಲಿಯ ಮೇಲಿದ್ದ ಮಂಚದ ಮೇಲೆ ಕುಳಿತು, ಉತ್ತರ ಕೊಟ್ಟರು “ ಸ್ಟೇಷನ್ನಿಂದ ಇಲ್ಲಿಗೇ ಬಂದೆ-ಅಂದಿರಾ? ಹಾಗಾದರೆ ಸುನಂದೆಯನ್ನು ನೀವು ನೋಡೇ ಇಲ್ಲ-ಅಲ್ಲವೆ ?" ಸುನಂದಾ ಇಲ್ಲೇ ಗಂಡನ ಮನೆಯಲ್ಲೇ ಇರಬೇಕೆಂದು ಭಾವಿಸಿದ್ದಳು. "ಸುನ೦ದಾ ಈಗ ತವರ್ಮನೇಲೇ ಇದಾಳೆ.' “ಹಾಗೇನು? ಓ! ನನಗೆ ಗೊತ್ತೇ ಇರ್ಲ್ಲಿಲ್ಲ. ಎಷ್ಟು ತಿಂಗಳು? ಕೃಷ್ಣಪ್ಪನವರ ಮುಖದ ಮೇಲೆ ಕರಿಮೋಡ ಕವಿಯಿತು. ಅವರು ನುಂಗಿದರು. “ಅಂಥಾದೇನೂ ಇಲ್ಲ, ತಂಗಿಯ ಮದುವೆಗೇಂತ ಬಂದೋಳು ಅಲ್ಲಿಯೇ