ಪುಟ:Ekaan'gini.pdf/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬ ಏಕಾಂಗಿನಿ ನಿ೦ತಿದಾಳೆ.” ಕೇಳುತಿದ್ದಾಕೆಯ ಹುಬ್ಬುಗಳು ಮೇಲಕ್ಕೆ ಚಲಿಸಿ ಮುಖ ಪ್ರಶ್ನಾರ್ಧಕ ಚಿಹ್ನೆಯಾಯಿತು. ವಿಷಯವನ್ನು ಬಚ್ಚಿಡುವುದರಲ್ಲಿ ಅರ್ಥವಿಲ್ಲವೆನ್ನುತ್ತ ಕೃಷ್ಣಪ್ಪನವರು ಹೇಳಿದರು : “ಏನೋ ವಿರಸ. ಇದ್ದೇ ಇರುತ್ತಲ್ಲ. ಅಳಿಯನನ್ನ ನೋಡ್ಕೋಂಡು ಮಾತಾಡಿಸ್ಕೊಂಡು ಹೋಗೋಣಾಂತ್ಲೇ ಬಂದೆ.” ಇದು ತನ್ನೊಬ್ಬಳದೇ ವಿವೇಚನೆಗೆ ಮೀರಿದ ವಿಷಯವೆಂದು ಮನೆಯೊಡತಿ ಮರುಮಾತಾಡಲಿಲ್ಲ. ಬೇಸರವನ್ನು ತನ್ನೊಳಗೇ ಇರಿಸಿಕೊಂಡು ಅವರು ಒಳ ಹೋದರು. ಕೃಷ್ಣಪ್ಪನವರ ಆಗಮನದಿ೦ದ ಮನೆ ಹುಡುಗರ ಆಟಕ್ಕೆ ಭಂಗ ಬಂದಿತ್ತು. ಆದರೆ, ಮತ್ತೆರಡು ನಿಮಿಷಗಳಲ್ಲೆ, ಮನೆಗೆ ಬಂದ ಮುದಕನನ್ನು ಮರೆತು ಹುಡುಗರು ತಮ್ಮ ಆಟಗಳಲ್ಲಿ ತಲ್ಲೀನರಾದರು. ಮನೆಯಾಕೆ ಪುನಃ ಹೊರಬಂದು ಕೇಳಿದರು , “ಈಗ ಊಟ ಮಾಡ್ತೀರಾ? ತಿ೦ಡಿ ತಗೋತೀರಾ? “ ನನಗೇನೂ ಹಸಿವಿಲ್ಲ.” “ಹಾಗಾದರೆ ಒಂದಿಷ್ಟು ಕಾಫಿ ಮಾಡ್ತೀನಿ ಕತ್ತಲಾಗೋದರೊಳಗೆ ಅವರು ಬಂದ್ದಿಡ್ತಾರೆ. ಊಟಕ್ಕೆ ಬೇರೆಲ್ಲಿಗೂ ಹೋದ್ಬಾರದು.” ಸಂಕಟಕ್ಕೊಳಗಾಗಿದ್ದ ಸುನಂದೆಯ ತಂದೆಯ ನೋವನ್ನು ಉಪಚಾರದ ಮಾತುಗಳಿಂದ ಸ್ವಲ್ಪಮಟ್ಟಿಗಾದರೂ ಶಮನ ಮಾಡಲು ಹಲವು ಮಕ್ಕಳ ಆ ತಾಯಿ ಯತ್ನಿಸಿದಂತಿತ್ತು. ಕೃಷ್ಣಪ್ಪನವರು ಆಕ್ಷೇಪಿಸಲಿಲ್ಲ ಮಂಚದ ಮೇಲೆ ಮೈ ನೀಡಿಕೊಂಡು ವಿಶ್ರಾಂತಿ ಪಡೆದರು. ಕಾಫಿ ತಿ೦ಡಿಯ ಅನಂತರ ಸ್ವಲ್ಪ ಜೊಂಪು ಹತ್ತಿತ್ತು. ಸದ್ದುಗದ್ದಲ ಒಂದನ್ನೂ ಲೆಕ್ಕಿಸದೆ ನಿದ್ದೆ ಹೋಗುವ ಅವರ ಅಭ್ಯಾಸ ಅಸಾ ಧಾರಣವಾದದು.. ಆಯಾಸದ ಪರಿಣಾಮವಾದ ನಿದ್ದೆ ಮುಗಿದು ಎಚ್ಚರ ವಾದಾಗ ಮುಚ್ಚಂಜೆಯಾಗಿತ್ತು. ರಾಮಕೃಷ್ಣಯ್ಯ ಇನ್ನೂ ಮನೆಗೆ ಬಂದಿರಲಿಲ್ಲ. ಅವರು ಎಚ್ಚತ್ತುದನ್ನು ಗಮನಿಸಿ ಹೊರಬಂದ ಮನೆಯೊಡತಿಯನ್ನು ನೋಡಿ