ಪುಟ:Ekaan'gini.pdf/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ೪೬ “ಈಗ ನಾನೇನು ಮಾಡ್ಬೇಕೂಂತ ಹೇಳ್ತೀರಿ ತಾಯಿ?” ಕೃಷ್ಣಪ್ಪನವರು ಕೇಳಿದ ಪ್ರಶ್ನೆಗೆ ರಾಧಮ್ಮನವರಲ್ಲಿ ಉತ್ತರ ಸಿದ್ಧವಿರಲಿಲ್ಲ. ಅವರು ತಮ್ಮ ಗಂಡನ ಮುಖ ನೋಡಿದರು. ಸುಮ ನೆ ಪಿಳಿಪಿಳಿ ಕಣ್ಣು ಬಿಟ್ಟರು ರಾಮಯ್ಯ.

ಉತ್ತರ ಬರದೆ ಇದ್ದುದನ್ನು ಕಂಡು ಕೃಷ್ಣ ಪ್ಪನವರು ಒ೦ದೆರಡು ಕ್ಷಣ ಸುಮ್ಮನಿದ್ದು ಮತ್ತೆ ಅ೦ದರು:
"ನಾನೊಂದು ಪ್ರಶ್ನೆ ಕೇಳ್ತೀನಿ ನನ್ನ ಮಗಳ ಹಿತಕ್ಕಾಗಿಯೇ ನಾನು ಹೀಗೆ ಕೇಳೋದು. ಯಾವ ಸಂಕೋಚವೂ ಇಲ್ದೆ ನೀವು ಉತ್ತರ ಕೊಡ್ಬೇಕು. ನನ್ನ ಆಳಿಯನಿಗೆ ಬೇಸರ ಬರೋ ರೀತೀಲಿ ಸುನಂದಾ ನಡ್ಕೋಳ್ತಾಇದ್ದೆ?"

“ ಛೆ! ಛೆ!” ಎಂದರು ರಾಧಮ್ಮ. ನೊ೦ದ ಧ್ವನಿಯಲ್ಲಿ ಈ ಆರೋಪ ಸರಿ ಯಲ್ಲವೆಂಬ ಆಕ್ರೋಶವೂ ಬೆರೆತಿತ್ತು. ಮುಂದುವರಿಯುತ್ತ ಆಯೆಂದರು. "ನೀವು ಆ ರೀತಿ ಖಂಡಿತ ಭಾವಿಸ್ಬಾರ್ದು. ಸುನಂದೆಯೆಂಧ ಹೆಂಡತಿ ಸಿಗಬೇಕಾದರೆ ಜನ್ಮಾಂತನದ ಪುಣ್ಯ ಬೇಕು. ನಾನು ನೋಡಿದ್ದೆ? ಆತ ಅಯೋಗ್ಯ ಮನುಷ್ಯ. ಆದೇನು ಬಂತೋ ಕಾಲ. ಹ್ಯಾಗಿದ್ದೋನು ಹ್ಯಾಗಾಗಿ ಹೋದ!”

 ಗೆಳತಿಯನ್ನು ಸಮರ್ಧಿಸುವ ಆತುರದಲ್ಲಿ ಆಕೆಯ ಗಂಡನನ್ನು ಕುರಿತು ಸಂಬೋಧನೆ ಅನಿರೀಕ್ಷಿತವಾಗಿ ಏಕವಚನಕ್ಕಿಳಿದಿತ್ತು. ಕೃಷ್ಣಪ್ಪನವರಿಗೆ ಅದರಿಂದ ಬೇಸರವಾಗಲಿಲ್ಲ. ರಾಮಯ್ಯನವರೂ ಹೆಂಡತಿಯ ಉದ್ವೇಗವನ್ನು ಟೀಕಿಸುವ ಮುಖಭಾವ ತೋರಲಿಲ್ಲ. ಆದರು ರಾಧಮ್ಮನೇ ತುಟಿಮೀರಿದ ಮಾತಿಗಾಗಿ ತವಕಗೊಂಡರು.
"ನಿಮ್ಮ ಅಳಿಯನ ವಿಷಯದಲ್ಲಿ ಚಾಡಿ ಹೇಳಿದೇಂತ ದಯವಿಟ್ಟು ಭಾವಿಸ್ಬೇಡಿ. ಆತ ಸುಧಾರಿಸ್ಕೊಂಡು ಸುನಂದಾ ಸುಖವಾಗಿರ್ಬೇಕು ಅನ್ನೋದಷ್ಟೇ ನನ್ನ ಅಪೇಕ್ಷೆ," ಎಂದರು.
ಕೃಷ್ಣಪ್ಪನವರು ಹಾಗೆ ಭಾವಿಸಿದ್ದರೆ ತಾನೆ?

"ಇಲ್ಲವಮ್ಮ. ತಪ್ಪು ತಿಳಕೊಂಡೇನೇ ನಾನು? ನನ್ನ ಮಗಳ ವಿಷಯದಲ್ಲಿ ನನಗೇನೂ ಅಪನಂಬಿಕೆ ಇಲ್ಲ. ಆದರೆ ಸಿಮ್ಮಂಥವರ ಬಾಯಿಂದಲೇ ಅಂಥ ಮಾತು ಕೇಳಿದಾಗ ಹೆಚ್ಚು ಸಮಾಧಾನವಾಗುತ್ತೆ." "ಯಾರ ಕೈಲಾದರೂ ನಿಮ್ಮ ಅಳಿಯನಿಗೆ ಹೇಳಿಸೋಕಾಗಲ್ವ?” ಎಂದು ೪