ಪುಟ:Ekaan'gini.pdf/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುನಂದೆಯ ಗಂಡ ಪುಟ್ಟಣ್ಣ, ಮಾವನ ಆಗಮನವನ್ನು ನಿರೀಕ್ಷಿಸಿಯೆ ಇರಲಿಲ್ಲ ಎಂದಲ್ಲ, ಆದರೆ ಅದು ಆ ದಿನವೇ ಆಗುವುದೆಂದು ಆತ 'ಭಾವಿಸಿರಲಿಲ್ಲ. ಆಫ಼ೀಸಿಗೆ ಬಂದು ಕಡತಗಳಿಗೆ ಕೈಹಾಕಿದಾಗ,ನಕಾಶೆಗಳನ್ನು ನೋಡಿದಾಗ,ಆತನ ಮನಸ್ಸಿನಲ್ಲಿ ಸುನಂದೆಯನ್ನು ಕುರಿತು ಯಾವ ಯೋಚನೆಯ ಸುಳಿವೂ ఇరలిల్ల.

  ಪುಟ್ಟಣ್ಣ ಮನೆಯನ್ನು ಖಾಲಿಮಾಡಿದ್ದ---ಮುಂದೆಂದೂ ಅದರ ಅಗತ್ಯ ವಿಲ್ಲವೆಂದ.. ಆತ ಒಯಸಿದುದು ಸಂಸಾರ ಸಂಬಂಧದಿಂದ ವಿಮೋಚನೆ. ಆತ ಬಯಸಿದ್ದುದು ಸಂಸಾರ ಸಂಬಂಧದಿಂದ ವಿಮೋಛನೆ. ಅದು ತಾನಾಗಿಯೇ ದೊರೆಯುವಂತಿರಲಿಲ್ಲ. ಅದಕ್ಕೋಸ್ಟರ, ಸ್ವತಃ ಆತನೇ ಮುಂದುವರಿದು ಆ ಬಂಧನದ ಬಳ್ಳಿಗಳನ್ನು ಕಡಿಯಲು ತೊರಟದ್ದ.
  ಆಫೀಸಿನ ಕೆಲಸಕಾರ್ಯಗಳಲ್ಲಿ ನಿಷ್ಟಾತವಂತನಾದ ಸಮರ್ಧನಾದ ಮನುಷ್ಯ, ಕೃಕೆಳಗಿನವರು ಆತನಿಗ ಹೆದರುತ್ತಿದ್ದರು. ಕಛೇರಿಯ ಮುಖ್ಯಸ್ಥನೂ ಕಾರಖಾನೆಯ ಒಡೆಯರೂ ಆತನಲ್ಲಿ ವಿಸ್ವಾಸವಿಟ್ಟಿದರು ಅದೇ ನಿಜವಾದ ಯಶಸ್ಸು ಎಮ್ದು ಭಾವಿಸುವವರು ಎಷ್ಟು ಜನರಿಲ್ಲ?
 ಅದರೆ ದುಡಿಯುವ ಆ ಜಾಗದಲ್ಲಿ ಯಾರೂ ಪುಟ್ಟಣ್ಣನಿಗೆ ಸ್ನೇಹಿತರಿರಲಿಲ್ಲ. ಮುಖ್ಯತಃ ಯಾರ ಸ್ನೇಹವನ್ನೂ ಬಯಸಿರಲಿಲ್ಲ ಆತ. ಅಲ್ಲಿಯೇ ಗೆಳೆಯರಾದರೆ ತನ್ನ ವ್ಯಕ್ತಿತ್ವದ ಬಿಗುಪಿಗೆ ಕುಂದು ಉಂಟಾಗಬಹುದೆಂಬುದು ಅವನ ಅಭಿಪ್ರಾಯವಾಗಿತ್ತು.
 ಒಮ್ಮೆ ಆತನ ವಿಭಾಗದ ಮಾತುಗಾರನೊಬ್ಬ ಧೈರ್ಯ ತಂದುಕೊಂಡು ಕೇಳಿದ್ದ:
   "ಮನೆ ಬದಲಾಯಿಸಿದಿರಂತೆ, ಹೌದೆ ಸಾರ್?'

ಆಗ ಪುಟ್ಟಣ್ಣ ಹಾಗೆ ಪ್ರಶ್ನೆ ಕೇಳಿದವನನ್ನೆ ದುರುಗುಟ್ಟಕೊಂಡು ನೋಡಿ, ನಯವಲ್ಲದ ಸ್ವರದಲ್ಲಿ ಹೇಳಿದ :

   "ನಿಮ್ಮ ಕೆಲಸದ ಕಡೆ ಗಮನ ಕೊಡಿ!"
   ಸಾಮಾನ್ಯರ ದೃಷ್ಠಿಯಲ್ಲಿ ವಿಛಿತ್ರ ಎನಿಸುವಂತಹ ಆ ವ್ಯಕ್ತಿತ್ವವನ್ನು