ಪುಟ:Ekaan'gini.pdf/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರ್ಧವಿಲ್ಲದ ಪದಗಳು, ಪ್ರಪಂಚದಲ್ಲಿ ಮುಖ್ಯವಾದುವು ಬಲ ಮತ್ತು ಧನ. ಬಲಶಾಲಿಯೇ ಯಜಮಾನ : ಹಣವಿದ್ದವನೆ ಧರ್ಮಾತ್ಮ

 ಹಿಂದೆ ಈ ತಿಳಿವಳಿಕೆ ಇತ್ತೆ ?-ಇರಲಿಲ್ಲ, ಅದೇ, ತಾನು ಆಗ ಮೋಸ ಹೋಗಲು ಕಾರಣ. ಆದರೆ ತಿಳುವಳಿಕೆ ಉಂಟಾದ ಮೇಲೆ, ಆದ ತಪ್ಪನ್ನು ಆ ಕ್ಷಣವೇ ತಿದ್ದುವುದು ಅಗತ್ಯ...

... ಯಾರಾದರಾ ಈ ವಿಷಯವಾಗಿ ತನ್ನೊಡನೆ ಮಾತನಾಡಬಹುದೆಂಬ ಶಂಕೆ ವುಟ್ಟಣ್ಣನಿಗೆ ಇದ್ದೇ ಇತ್ತು, ಹಾಗೆ ಯಾವನಾದರೂ ಪ್ರಸ್ತಾಪ ಮಾಡಿ ದರೆ, 'ಬಾಯಮ್ಮಚ್ಚು ! ಇದು ವೈಯಕ್ತಿಕ ವಿಷಯ !” ಎಂದು ಗದರಿಸಿ ನುಡಿ ಯಲು ಆತನು ಸಿದ್ಧನಾಗಿದ್ದ. ‘. ..

  ಬೆಂಗಳೂರಿಗೆ ಬಂದ ಮಾರನೆ ದಿನ ಕೃಷ್ಣಪ್ಪನವರು, ಪುಟ್ಟಣ್ಣ ಕೆಲಸ ಮಾಡುತ್ತಿದ್ದ ಆಫ಼್ಹಿಸಿನ ಕಡೆಗೆ ಸುಳಿದರು.ಆವಾರವಾದ ಸಹನೆಯಿಂದ ದೂರದಲ್ಲೆ ಮರೆಯಾಗಿ ಕಾದು ನಿಂತು, ವುಟ್ಟಣ್ಣ ಅಲ್ಲಿಯೆ ಇರುವನೆಂಬು ದನು—ಆ ದಿನವೂ ಬಂದನೆಂಬುದನ್ನು—ಗೊತ್ತು ಹಚ್ಛಿದರು. ತಾನು ಬಂದುದರ ಸುಳಿವು ಬೇಟಿಗೆ ಮುಂಚೆ ಅಳಿಯನಿಗೆ ಸಿಗಬಾರದೆಂದು ತೀರ್ಮಾನಿಸಿದ್ದ ಕೃಷ್ಣಪ್ಪನವರು, ಆಫೀಸಿನ ಜವಾನರನ್ನು ಕೇಳಿ ತಿಳಿದುಕೊಳ್ಳುವ ಗೊಡವೆಗೇ ಹೋಗಲಿಲ್ಲ, ದೂರದಿಂದಲೇ ಸ್ವತಃ ಕಣ್ಣಾರೆ ಪುಟ್ಟಣ್ಣನನ್ನು ಕಂಡಾಗ ಅವರ ಮೈ ಉರಿಯಿತು. ದರ್ವದ ರೀವಿಯ ಆ ನಡಿಗೆಯೋ! ಇಳಿ ವಯಸ್ಸಿನಲ್ಲಿ ತಮಗೂ ತಮ್ಮಾಕೆಗೂ ಅನಗತ್ಯವಾದ ಕಾತರಕ್ಕೆ ಕಾರಣನಾಗಿದ್ದ ಪಾಪಿ!  ಹೆತ್ತ ಹೆಂಡತಿಯನ್ನೂ ಮಗುವನ್ನೂ ದುರ್ಲಕ್ಷಮಾಡಿರುವ ನರಾಧಮ !.... 
  ಆ ಬೆಳಗ್ಗೆ ಕೃಷ್ಣಪ್ಪನವರು ಮನೆ ಬಿತ್ತಾಗಲೇ ರಾಮಕೃಷ್ಣರಾಯರು ಕೇಳಿದ್ದರು:

“ಮಧಾಹ್ನ ಊಟಕ್ಕೆ ಇಲ್ಲಿಗೇ ಬಂದ್ಬಿಡು." ಕೃಷ್ಣಪ್ಪ ಒಪ್ಪಿರಲಿಲ್ಲ. “ಆತನ ದರ್ಶನ ಎಷ್ಟು ಹೊತ್ತಾಗುತ್ತೋ? ನಾನಿನ್ನು ಬರೋದು ರಾತ್ರೇಗೇ ಮಧ್ಯಾಹ್ನ ಅಲ್ಲೇ ಎಲ್ಲಾದರೂ ಊಟಮಾಡ್ತೀನಿ."

 ರಾಮಕೃಷ್ಣಯ್ಯ ಅಂದಿದ್ದರು.