ಪುಟ:Ekaan'gini.pdf/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿಮ್ಮನ್ನು ಕಂಡು ಮಾತನಾಡ್ಬೇಕೂಂತ ಊರಿಂದ ಬಂದೆ.” “ಹಾಗೇನು ? ಸರಿ. ಮಾತಾಡ್ಡಹುದಲ್ಲ!”

“ఇల్లిಯೇ ?" 

ಅನಿರೀಕ್ಷಿತವಾಗಿ ಶನಿ ಗಂಟು ಬಿತ್ತೆಂದು ಪುಟ್ಟಣ್ಣ ಬೆಚ್ಛಲಿಲ್ಲ. ಹೋಟೆಲಿನಲ್ಲಿ ಸತ್ಕಾರ ಮುಗಿಸಿ ಮುಂದಕ್ಕೆ ಹೋದರಾಯ್ತು–ಎನಿಸಿತು. ಆದರೆ ಇಂತಹ ಸತ್ಕಾರ ಇನ್ನು ಸರಿಯಲ್ಲ-ಎಂದು ಒಡನೆಯೆ ಆತ ಮನಸ್ಸು ಬಧ ಲಾಯಿಸಿದ. “ನಡೀರಿ. ಓ ಅಲ್ಲೊಂದು ಶಾಲೆಯಿದೆ.ಅಲ್ಲಿ ಎಲ್ಲಾದರೂ ಕೂತ್ಕೋ ಒಹುದು” ಅಳಿಯನನ್ನು ಅನುಸರಿಸಿ ಮಾವ ನಡೆಸಿದರು, ಶಾಲೆಯ ಆಟದ ಬಯ ಲಲ್ಲಿ ಹುಡುಗರು ಆಡುತ್ತಿದ್ದರು ಒಯಲಿನ ಅಂಚಿನಲ್ಲಿ ಎತ್ತರದ ಜಾಗದಲ್ಲಿ ಹಾಸುಕಲ್ಲುಗಳಿದ್ದುವು. ಕರವಸ್ತ್ರವನ್ನು ಹೊರ ತೆಗೆದು ಬಿಡಿಸಿ, ಅದನ್ನು ಕಲ್ಲಿನ ಮೇಲೆ ಹಾಸಿ ಕೃಷ್ಣಪ್ಪ ಕುಳಿತರು.

ಮಾತಿಲ್ಲದೆ ಎರಡು ನಿಮಿಷಗಳು ಸಂದುವು ಹಿಂದಿನ ರಾತ್ರೆಯೂ ಈ ಹಗಲೂ ಯೋಛಿಸಿದ್ದ ಮಾತುಗಳೊಂದೂ ನೆನಪಿಗೆ ಬಾರದೆ ಕೃಷ್ಣಪ್ಪನವರಿಗೆ ಸಂಕಟವಾಯಿತು.ಈ ಗಂಡಾಂಡತರದ ಘಳಿಗೆಯೊಮ್ಮೆ ಕೊನೆಯಾದರೆ ಸಾಕು ಎಂದು ಪುಟ್ಟಣ್ಣನೂ ಹುಬ್ಬುಗಂಟಕ್ಕಿದ. ಕುಳಿತಲ್ಲಿಂದಲೆ, ಶುಭ್ರವಾಗಿದ್ದ ತನ್ನ ಶೂಗಳನ್ನು ಆತ  ದಿಟ್ಟಿಸಿದ, ಬಳಿಕ ಬಳಿಯಲ್ಲೇ ಇದ್ದ ವ್ಯಕ್ತಿಯ ಮುಖವನ್ನು,
ಎದೆಬಡಿತವನ್ನು ಕೃಷ್ಣಪ್ಪನವರು ಸ್ತ್ರಿಮಿತಕ್ಕೆ ತಂದುಕೊಂಡರು.ಇನ್ನು ಮೌನ ಸಲ್ಲದೆಂದು ಗಂಟಲು ಸರಿಪಡಿಸಿದರು, ಮೊದಲು ಬಲು ಕ್ಷೀಣವಾದ ಧ್ವನಿಯಲ್ಲೇ ಮಾತು ಹೊರಟತು.

“ನಿಮ್ಮ ಕಡೆಯಿಂದ ಕಾಗ್ಧವಿಲ್ವೆ, ಸುನಂದಾ-ನಮಗೆಲ್ಲ ಬಹಳ ಗಾಬರಿ ಯಾಗ್ಬಿಟ್ಟಿತ್ತು." ಪುಟ್ಟಣ್ಣ ಸುಮ್ಮನಿದ್ದ, ಮನಸ್ಸು ವ್ಯಗ್ರವಾಗುತ್ತಿತೆಂಬುದುದನ್ನು ದವಡೆಯ ಮೂಳೆಗಳ ಛಲನ ತೋರಿಸಿತು. ಅಳಿಯನ ಮೌನವನ್ನು ಲೆಕ್ಕಿಸದೆ ಮಾವ ಮುಂದುವರಿದರು: