ಪುಟ:Ekaan'gini.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

“ನಾನು ನಿನ್ನೇ ಬಂದವನೇ ನಿಮ್ಮ ಮನೆ ಕಡೆ ಹೋದೆ. ಆದರೆ ನೀವು ಮನೆ ಖಾಲಿ ಮಾಡಿರೀಂತ ತಿಳೀತು." ರಾಧಮ್ಮನ ಕಾಗದದ ಪ್ರಸ್ತಾವಿಲ್ಲದೆಯೇ ಮಾತನಾಡುವುದು. ಹೆಚ್ಚು ಪರಿಣಾಮಕಾರಿ ಎಂದು ಭಾವಿಸಿದರು. ಮುಂದಿನ ಮಾತು ಹೊರಟತು, “ಮನೆ ಬದಲಾಯಿಸಿದ ವಿಷಯ ನೀವು ಸುನಂದೆಗೆ ಬರದೇ ಇಲ್ಲಿಲ್ಲ, ಎಲ್ಲಿ ಮಾಡಿದಿರಾ ವುನೆ?' ಪ್ರಶ್ನೆಯ ರೂಪದಲ್ಲಿ ಮಾತು ನಿ೦ತಿತೆಂದು ಪುಟ್ಟಣ್ಣ ಉತ್ತರ ಕೊಡಲೇ ಬೇಕಾಯಿತು. “ಇಲ್ನೋಡಿ! ನವುರು ನವುರಾದ ಈ ಮಾತುಕತೆಯೆಲ್ಲಿ ನನಗೆ ಬೇಕಿಲ್ಲ. ನೀವು ಬಂದಿರೋ ಉದ್ದೇಶ ಏನೂಂತ ಸ್ಪಷ್ಟವಾಗಿ ಹೇಳಿ, ನಾನೂ ಸ್ಪಷ್ಟವಾದ ಉತ್ತರ ಕೊಡ್ರೀನಿ.. ಅರ್ಧವಾಯ್ತೆ?'

ಅಳಿಯನ ಮನೋವೃತ್ತಿಯನ್ನು ಚೆನ್ನಾಗಿ ತಿಳಿದಿದ್ದ ಕೃಷ್ಣಪ್ಪನವರಿಗೆ ಆತನ ಮಾತಿನಿಂದೇನೂ ಆಶ್ಛರ್ಯವಾಗಲಿಲ್ಲ. ಅವರು ಎದೆಗುಂದದೆ ಶಾಂತವಾದ ಧ್ವನಿಯಲ್ಲಿ ತಮ್ಮ ಸರಣಿಯಲ್ಲೆ ಮುಂದುವರಿದರು:

“ಸುನಂದಾ ನಿಮ್ಮ ವಿಷಯವೇ ಯೋಚಿಸಿ ಯೋಚಿಸಿ ಸೊರಗಿದಾಳೆ. ಮಗು ಅಪ್ಪನನ್ನ ಕೇಳುತ್ತಿರತ್ತೆ.” ಸತ್ಯ-ಸುಳ್ಳು ಎರಡೂ ಸೇರಿದ ಗುಟುಕು ಪುಟ್ಟಣ್ಣನ ಕಣ್ಣೂಗಳು, ದಪ್ಪನೆಯ ತಣ್ಣನೆಯ ಗಾಜಿನಂತೆ ಕ್ಷಣಕಾಲ ಚಲಿಸದೆ ನಿಂತುವು.ಆತ ಎರಡೂ ತುಟಿಗಳನೊಮ್ಮೆ ಸಂಕುಚಿತಗೊಳಿಸಿ ಪ್ರಯತ್ನಪೂರ್ವಕವಾಗಿ ಬಾಯಿ ತೆರೆದ. “ನಾನು ಹೇಳೋದು ಕೇಳಿ. ನಮ್ಮ ನಿಮ್ಮ ಸಂಬಂಧ ಕಡಿದ್ದೋಯ್ತಾಂತ ಭಾವಿಸ್ಕೊಳ್ಳಿ!” ಕೃಷ್ಣಪ್ಪನವರ ವಯಸ್ಸಾದ ಮುಖದ ಮೇಲೂ ರಕ್ತ ಸಂಚಾರವಾಯಿತು. ತಾನು ಮುಳುಗುತ್ತಿದ್ದಂತೆ ಅನಿಸಿತು.ಆಸರೆಯಾಗಿ ಏನನ್ನು ಹಿಡಿಯಲೆಂದು ಅವರು ಕಾತರರಾದರು. “ಏನು ಹಾಗೆಂದರೆ? ఆగ్ని ಸಾಕ್ಷಿಯಾಗಿ ಮದುವೆಯಾದ ... ” “ಬಿಚ್ಛೇಡಿ ಪುರಾಣಾನ!ನಾನು ಯಾವತ್ತೋ ತೀರ್ಮಾನಮಾಡ್ಡಿಟ್ಟಿದೀನಿ!”