ಪುಟ:Ekaan'gini.pdf/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಕಾಂಗಿನಿ ೬೧

  "ಎದ್ದೇ ಬಿಟ್ಟೆರಲ್ಲ ಪುಟ್ಟಣ್ಣ!”
  “ನಿಮ್ಮ ಜತೇಲಿ ನಾನು ಮಾತನಾಡಬೇಕಾದ್ದೇನೂ ಇಲ್ಲ”
  “ಅಯ್ಯೊ! ಹಾಗೆ ಮಾಡ್ಬೇಡಿ! ದೇವರ ಭಯವಾದರೂ ಇರ್ಲಿ!”
 ಮುದುಕನ ಧ್ವನಿ ಗದ್ಗದಿತನಾಯಿತು, ದುರ್ಬಲ ಜಂತುವೆಂಬಂತೆ 

ಪುಟ್ಟಣ್ಣ ತುಚ್ಚಿಕಾರದಿಂದ ಕೃಷ್ಣಪ್ಪನವರನ್ನು ನೋಡಿದ.

 ನಡೆಯತೊಡಗಿದ ವುಟ್ಟಣ್ಣನ ಬಾಯಿಂದ ಕೊನೆಯ ಎಚ್ಚರಿಕೆಯ ಮಾತು
ಬಂತು:
 “ಈಗಲೇ ಹೇಳಿದೀನಿ. ಭೇಟಿಗೆ ಆಂತ ಇನ್ನು ಬರಬೇಡಿ, ಬಂದರೆ ಯಾವ 

ಪ್ರಯೋಜನವೂ ఇರೋದಿಲ್ಲ,ನೆನಸಿಕ್ಕೊಳ್ಳಿ."

 ಕೃಷ್ಣಪ್ಪನವರೂ ತವಕಗೊಳ್ಳುತ್ರ ಎದು ಅಳಿಯನನ್ನು ಹಿಂಬಾಲಿಸಿದರು.

ಆತನನ್ನು ಬಿಡಬಾರದು, ಆತ ವಾಸವಾಗಿರುವ ಜಾಗಕ್ಕೆ ಹೋಗಿ ಮಾತು ಮುಂದುವರಿಸಬೇಕು, ಇದಾಗದೆ ಜೋದರೆ ಕೆಲಸ ಕೆಟ್ಟಂತೆಯೇ-ಎಂದು ಕೃಷ್ಣಪ್ಪನವರು ಕಸಿವಿಸಿಪಡುತ್ತ, ವೇಗವಾಗಿ ನಡೆಯುತ್ತಿದ್ದ ಅಳಿಯನ ಹಿಂದೆಯೆ ತಾವೂ ಸಾಗಿದರು. ಆತ ತಿರುಗಿ ನೋಡಲಿಲ್ಲ, ಯುವಕನ ನಡಿ ಗೆಯ ತೀವ್ರತೆ ತಮ್ಮ ಶಕ್ತಿಗೆ ಮಿಾರಿದಾಗ, ಕೃಷ್ಣಪ್ಪನವರು ಸ್ವಲ್ಪ ದೂರ ಓಡುತ್ತ ಸ್ವಲ್ಪ ದೂರ ನಡೆಯುತ್ತ ಹಿಂಬಾಲಿಸಿದರು. ಮತ್ತೆ ಜನಜಂಗುಳಿ. ಆ ಗದ್ದಲದಲ್ಲಿ ಅಳಿಯ ಮರೆಯಾಗದಂತೆ ಕೃಷ್ಣಪ್ಪನವರು ಮತ್ತಷ್ಟು ಹೆಚ್ಚು ಎಚ್ಚರಿಕೆ ವಹಿಸಬೇಕಾಯಿತು. ನಸುಗತ್ತಲಾಗಿ, ವಿದುದ್ದೀಪಗಳು ಮಿನುಗಿ ದುವು. ಆಯಾಸಪಡುತ್ತ ಎಡವುತ್ತ ಕೃಷ್ಣಪ್ಪನವರು ಹಿಂದೆ ಬಂದರು.

  ಪುಟ್ಟಣ್ಣನಿಗೆ ಯಾಕೋ ಸಿಂಬಾದನ ಕೊರಳಿಗೆ ಆತುಬಿದ್ದ ಮುದುಕನ 

ನೆನಪೇ ಆಗುತಿತ್ತು, ಆತ ಅಟೋ ರಿಕ್ಶಾದ ಆಶ್ರಯ ಪಡೆದ ಕೃಷ್ಣಪ್ಪನವರಿಗೆ ಅಪರಿಚಿತವಾಗಿದ್ದ ಆ ನೂತನ ವಾಹನ, ಪುಟ್ಟಣ್ಣನನ್ನು ಹೊತ್ತು ಕೊಂಡು ವೇಗವಾಗಿ ಹೊರಟು ಹೊಯಿತ್ತು. ಆಗಲಾ ಮುದುಕ ತನ್ನನು ಆಟ್ಟಿಸಿ ಕೊಂಡು ಬರಬಹುದೆಂದು ಪುಟ್ಟಣ್ಣ ಭಾವಿಸಿದ್ದನಾದರೂ ಕ್ಲಷ್ಣಪ್ಪನವರಿಗೆ ಅಂತಹ ಸಾಧ್ಯತೆ ಹೇಳೋದೇ ಇರಲಿಲ್ಲ

  ಅವರು ಹತಾಶರಾಗಿ ಮೆಲ್ಲನೆ ಪಾದಗಳನ್ನೆಳೆಯುತ್ತ ಮೆಜೆಸ್ಟಿಕ್ ವೃತ್ತಕ್ಕೆ
ನಡೆದು ಬಂದರು. ಅಲ್ಲಿ ಬಸ್ ನಿಲ್ದಾಣದ ಒರಗು ಬೆಂಚಿನ ಮೇಲೆ ಕುಸಿ