ಪುಟ:Ekaan'gini.pdf/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೨ ಎಕಾಂಗಿನಿ ಕುಳಿತರು. ಅಲ್ಲಿಂದ ಎದ್ದು ಮುಂದೆಹೋಗುವುದು ತಮ್ಮಿಂದ ಸಾಧ್ಯವಾಗ ದೆನ್ನುವಷ್ಟು ಅವರಿಗೆ ನಿತ್ರಾಣವೆನಿಸಿತು.

  ಸ್ವಲ್ಪ ಹೊತ್ತಾದ ಬಳಿಕ, ಅವರು ಮೂಗಿಗೆ ನಶ್ಯವೇರಿಸಿದರು. ಊರಿ

ನಲ್ಲಿ ತುಂಬಿಸಿದ್ದ ಡಬ್ಬ ಖಾಲಿಯಾಗುತ್ತ ಬಂದಿತ್ತು. ಇನ್ನು ಹೊಸದಾಗಿ ಕೊಳ್ಳಬೇಕು ಆದರೆ ಅದಕ್ಕೋಸ್ಕರ ಅ೦ಗಡಿ ಹುಡುಕುವ ಚೈತನ್ಯ ಅವರಿಗಿರ ಲಿಲ್ಲ.

  ಬಲುದೇರ್ಘವೆನಿಸಿದ್ದ ಅರ್ಧ ಘಂಟೆಯ ಕಾಲ ಅಲ್ಲಿ ಕುಳಿತಿದ್ದು, ಅನಂ

ತನ ಕ್ಯೂನಲ್ಲಿ ಸ್ವಲ್ಪ ಹೊತ್ತು ನಿಂತು, ಬಸ್ಸನ್ನೇರಿ ಅವರು ಶೇಷಾದ್ರಿಪುರ ತಲುಪಿದರು.

  ....ಸ್ನೇಹಿತನ ಹಾದಿ ನೋಡುತ್ತಲೇ ಇದ್ದ ರಾಮಕೃಷ್ಣಯ್ಯ, ಕೃಷ್ಣಪ್ಪ

ನವರಿಂದ ವಿವರ ತಿಳಿದಾಗ ఒಮ್ಮೆಲೇ ಏನನ್ನೂ ಹೇಳಲಿಲ್ಲ.

  ಸ್ವಲ್ಪ ಹೊತ್ತಾದ ಬಳಿಕ, ಎತ್ತರದಿಂದ ವಿದುದ್ದೀಪ ಬೀರುತಿದ್ದ ಮಂದ

ಬೆಳಕಿನಲ್ಲಿ ಕೃಷ್ಣಪ್ಪನವರ ಮುಖವನ್ನು ದಿಟ್ಟಿಸುತ್ತ ಅವರೆಂದರು:

  “ಮಹಾರಾಯ ಬೇರೆಯಾರನ್ನಾದರೂ ಇಟ್ಟೊಂಡು ಸಂಸಾರ ನಡೆಸಿ
ದಾನೋ ಎನೋ"
  ಇಷ್ಟರವರೆಗೆ ಆಸಂದೇಹ ತಮ್ಮನ್ನು ಭಾಧಿಸಿಯೇ ಇರಲಿಲ್ಲವೆನ್ನುವುದು
ಕೃಷ್ಣಪ್ಪನವರಿಗೆ ಆಶ್ಚರ್ಯದ ಮಾಕಾಗಿತು. అంತಹ ಭಾವನೆಯುಂಟಾಗು
ವಂತೆ ಸುನಂದೆಯೂ ಶಂಕೆ ವ್ಯಕ್ತಡಿಸರಲಿಲ್ಲ.
  ಈಗಲೂ ಅವರು, ಆಂತಹ ಸಂಶಯಕ್ಕೆ ತಮ್ಮಲ್ಲಿ ಎಡೆಕೊಡಲು ಇಷ್ಟ

ಪಡದೆ ಅಂದರು :

  "ಇರಲಾರದು”
  “ಏನೋಪ್ಪ.”
  “ನಾಳೆ ಹ್ಯಾಗಾದರೊ ಮಾಡಿ ಆತ ವಾಸವಾಗಿರೋ ಜಾಗ ಪತ್ತೇ
ಹಚ್ಚೀನಿ.”
  “ಅಷ್ಟು ಮಾಡು. ಸಾಯಂಕಾಲದ ಹೊತ್ತಿಗೆ ಇಬ್ಬರೂ ಅಲ್ಲಿಗೆ
ಹೋಗೊಣ'.
  “ಹೊಂ”