ಪುಟ:Ekaan'gini.pdf/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪ ಎಕಾಂಗಿನಿ

   “ಏಯ್ ಪುಟ್ಟಣ್ಣ ಸಾಹೇಬರು ಇರೋದೆಲ್ಲೋ ಈಗ?”
   “ಅವರ ಮನೆಯೋರಿಗೆ ಕಾಯಿಲೇಂತ ಹೋಟ್ಲಲ್ಲಿ ರೂಂ ಮಾಡೊಂಡವ್ರೆ.”
   ಹೋಟೆಲು ಯಾವುದೆಂದು ತಿಳಿಯುವ ಆತುರದಲ್ಲಿ ಕಾಹಿಲೆಯ ಅಂಶ
  ವನ್ನು ಕೃಷ್ಣಪ್ಪನವರು ಗಮನಿಸಲಿಲ್ಲ
    ಹಿರಿಯ ಜವನನೇ ಕೇಳಿದ:
    “ಯಾವೋಟ್ಲೊ"
    “ಮಲ್ಲೇಶ್ವರ ಬಸ್ ಸ್ಟಾಂಡ್ ಹತ್ರಾನೇ ಕೋಮ್ಲ ವಿಲಾಸ ಆಂತಿಲ್ವಾ?"
    “ಈ ರಾಯಗ್ನ ಅಲ್ಲಿಗೆ ಕರಕೊ೦ಡೊಗಿ ಬುಟ್ಟಿದ್ದೀಯಾ? ನಿನಗೇನಾದರೂ 
 ಕೊಡ್ತಾರೆ.”
   “ಇನ್ನರ್ಧ ಘಂಟೆಯೊಳಗೆ ಅವರೇ ಬರೋದಿಲ್ಲಾ?”
   "ಆರ್ಜೆಂಟಂತೆ ಕಣೋ"
 ಒಂದು ಸಿನಿತವ ಆಶ್ಚಯತೆಯಿಂದ ಮನಸ್ಸು ತೂಗಾಡಿದ ಬಳಿಕ ಹುಡು
  ಗನೆಂದ:
   "ಇಲ್ಲಪ್ಪೋ ಟೇಮೀಲ್ಲ"
    ಕೃಷ್ಣಸ್ಸನವರೆಂದರ,:
  "ಬೇಡ ಬಿಡು. ಮಲ್ಲೇಶ್ವರ ಬಸ್ ಸ್ಟಾಂಡ್ ಹತ್ರ ತಾನೇ? ನಾನೇ
   ಹೋಗ್ತೀನಿ."
  ಹೊರತಟ ಕೃಷ್ಣಪ್ಪನವರಿಗೆ ಹಿರಿಯ ಜವಾನ ನಮಸ್ಕರಿಸಿದ.
  “ನಾನೇ ಹೋಗಿ ಸಾಹೆಬರನ್ನ ನೋಡ್ರೀನಿ. ಯಾರೋ ಹಡುಕೊಂಡು
 ಒಂದಿದ್ರೊಂತ ಹೇಳ್ಬೇಕಾದ್ದಿಲ್ವ," ಎಂದರು ಕೃಷ್ಣಪ್ಪ.
   "ಆಗ್ಲಿ ಸೋನಿ,", ಎಂದ ಜವಾನ ಅಂತಹ ಯೋಚನೆ ಆತನಿಗೆ ಇದ್ದಿ

ದ್ದರೆ ತಾನೆ?

 ಕೃಷ್ಣಪ್ಪನವರು ಆಗಲೇ ಮಲ್ಲೇಶ್ವರಕ್ಕೆ ಹೊರಡಲಿಲ್ಲ, ರಾಮಕೃಷ್ಣಯ್ಯ
ನನ್ನೊ ಕರೆದುಕೂಂಡು ಹೋಗಲು ಸಂಜೆಯೇ ಪ್ರಶಸ್ತವಾದುದೆಂದು ಅವರು
ತಿರ್ಮಾನಿಸಿದ್ರರು ಆ ಭೇಟಿಯು ಫಲಿತಾಂಶವೇನೇ ಆಗಲಿ, ಆ ಸಲದ

ಪ್ರವಾಸದ ಕೆಲಸಾಆಲ್ಲಿಗೆ ಮುಗಿಯುತ್ತಿತ್ತು. ಮಾರನೆಯ ದಿನವೇ ಶನಿವಾರ.

ರಾಧಮ್ಮನವರಲ್ಲಿಗೆ ಹೋಗಿ ಹಾಗೆಯೇ ಊರಿಗೆ ಹೊರಟುಬಿಡಬಹುದು....