ಪುಟ:Ekaan'gini.pdf/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ೬೭

"ಅವರಿಗೇನಾದರೂ ಹೇಳ್ಭೇಕೆ ?” ಎಂದ ಹುಡುಗ. “ಏನೂ ಬೇಡ. ನಾಳೆ ನಾವೇ ಬಂದು ನೋಡ್ತೀವಿ”. ಎಂದು ರಾಮ ಕೃಷ್ಣಯ್ಯ ಎದ್ದು, ಕೃಷ್ಣಪ್ಪನವರನ್ನೂ ಎಬ್ಬಿಸಿದರು. ಅಲ್ಲಿ ಬಿಲ್ಲನ್ನು ರಾಮಕೃಷ್ಣಯ್ಯ ತೆತ್ತರು. ಬೀದಿಗಿಳಿಯುತ್ತಿದ್ದಂತೆ ಕೃಷ್ಣಪ್ಪ ನವರೆಂದರು : “ನಾವು ಬಂದಿದ್ದು ಗೊತ್ತಾದರೆ ನಾಳೆ ತಪ್ಪಿಸ್ಕೊತಾನೋ ಏನೋ.” “ಬೆಳಗ್ಗೆ ಆತ ಏಳೋಕ್ಮುಂಚೇನೇ ಬಂದುಬಿಡೋಣ....ಅಲ್ದೆ, ತಪ್ಪಿಸಿ ಕೊಳ್ಳೋ ಪ್ರಯತ್ನ ಆತ ಮಾಡಲಾರ ಅನ್ನಿಸುತ್ತೆ. ಎಷ್ಟು ದಿನಾಂತ ತಪಿ ಸ್ಕೋಬಹುದು ?” ಎ೦ದು ರಾಮಕೃಷ್ಣಯ್ಯನವರು ಸಮಾಧಾನ ಹೇಳಿದರು. ....ಅವರು ಹೇಳಿದುದೇ ನಿಜವಾಗಿತ್ತು. ಪುಟ್ಟಣ್ಣ, 'ಯಾರೋ ಇಬ್ಬರು ಬಂದಿದ್ದರೆ'೦ಬುದನ್ನು ರಾತ್ರಿಯೇ ತಿಳಿದ, ವಯಸ್ಸಾದವರು ಎಂದ ಮೇಲೆ, ಒಬ್ಬಾತ ತನ್ನ ಮಾವನೇ ಇರಬಹುದೆಂದು ಊಹಿಸಿದ ಇನ್ನೊಬ್ಬ....,? ಸರಿ- ಬಂದಾಗ ನೋಡಿಕೊಂಡರಾಯ್ತು, ಎಂದು ಸುಮ್ಮನಾದ. ಆತ ಏಳುವುದಕ್ಕೆ ಮುಂಚೆಯೇ ಆವರು ಬಂದರು. ಪುಟ್ಟಣ್ಣನಿಗೆ ಸಣ್ಣನೆ ತಲೆ ಸಿಡಿಯುತ್ತಿತ್ತು.'ಈಗ ಪುರಸೊತ್ತಿಲ್ಲ' ಎಂದು ಹೇಳಬೇಕೆಂದು ಯೋಚಿ ಸುತ್ತ ಆತ ಕದ ತೆರೆದ. ರಾಮಕೃಷ್ಣಯ್ಯ ಹಲ್ಲು ಕಿರಿದು “ನಮಸ್ಕಾರ” ಎಂದರು. ಈ ಹೊಸ ವ್ಯಕ್ತಿಯನ್ನು ಕಂಡು ಕುತೂಹಲವೆನಿಸಿ ಪುಟ್ಟಣ್ಣ, ತಾನು ಹೇಳಬೇಕೆಂದಿದ್ದು ದನ್ನು ಮರೆತ. ರಾಮಕೃಷ್ಣಯ್ಯ ಮುಂದುವರಿದರು. " ನಿಮಗೆ ನನ್ನ ಜ್ಞಾಪಕವಿದೆಯೋ ಇಲ್ಲವೋ. ನಿಮ್ಮ ಮದುವೇಲೇ ಮೊದಲು ನೋಡಿದ್ದು. ಆಮೇಲೆ ಸುನಂದಾ ಮತ್ತು ನೀವು ಜತೇಲೇ ಒಮ್ಮೆ ಮಾರ್ಕೆಟಿಗೆ ಬಂದಿದ್ದಾಗ ಅಲ್ಲಿ ಅಕಸ್ಮಾತ್ ಭೇಟಿಯಾಗಿತ್ತು, ನಿಮ್ಮ ಮಾವನೂ ನಾನಾ ಹಳೇ ಸ್ನೇಹಿತರು.” ಪುಟ್ಟಣ್ಣ ಮಾವನ ಮುಖ ನೋಡಿದ. ಅಲ್ಲಿ ಕುರುಚಲು ಗಡ್ಡವಿರಲಿಲ್ಲ ಗಲ್ಲದ ಮೂಳೆಗಳೀಗ ಕಂಡುಬರುತಿದ್ದುವು. ಪುಟ್ಟಣ್ಣನಿಗೆ ಅದು ಮತ್ತಷ್ಟು ಅಸಹ್ಯವೆನಿಸಿತು. ಇಬ್ಬರನ್ನೂ ನೋಡುತ್ತ ಆತ ಕೇಳಿದ;