ಪುಟ:Ekaan'gini.pdf/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾ೦ಗಿನಿ ೬೯

"ಹ್ಯಾಗೆ ತೋಚುತ್ತೋ ಹಾಗ್ಮಾಡು.” ಸುತ್ತಲೂ ದೃಷ್ಟಿ ಹರಿಸುತ್ತ ರಾಮಕೃಷ್ಣಯ್ಯ,'ಅ೦ತೂ ಒ೦ಟಿ ಜೀವನ ಚೆನ್ನಾಗಿ ಒಗ್ಗಿದೆ ಈ ಮಹಾರಾಯನಿಗೆ,"ಎಂದರು. ಆಷ್ಟರಲ್ಲೆ ಪುಟ್ಟಣ್ಣ ಹಿಂತಿರುಗಿದ ಮುಖಕಿಷ್ಟು ನೀರನ್ನಷ್ಟು ಹನಿಸಿ, ಬಂದಿದ್ದವರನ್ನು ಬೇಗನೆ ದೂರಹಾಕುವ ನಿರ್ಧಾರದಿ೦ದಲೇ ಆತ ಒಳಬ೦ಡ. ತೆರವಾಗಿದ್ದ ಕುರ್ಚಿಯ ಮೇಲೆ ಕುಳಿತು ಆ ಇಬ್ಬರನ್ನೂ ಪುಟ್ಟಣ್ಣ ದಿಟ್ಟಸಿದ. ಮಾವನ ಜತೆಯಲ್ಲಿ ಬ೦ದಿದ್ದಾತನ ಉದ್ಢಟತನಿದ ನೋಟ ಆಸಹ ನೀಯವಾಗಿ ಅಕ್ಷಮ್ಯವಾಗಿ ಆತನಿಗೆ ತೋರಿತು "ನನಗೆ ತುಂಬಾ ಕೆಲಸವಿದೆ ವಿಷಯವೇನಿದಯೋ ಚುಟುಕಾಗಿ ತಿಳಿಸಿ ದರೆ ನಿಮಗೇ ಅನುಕೂಲ,"ಎಂದ ಪುಟ್ಟಣ್ಣ. "ಹಾಗೇ ಆಗಲಿ," ಎಂದರು ರಾಮಕೃಷ್ಣಯ್ಯ ಕೃಷ್ಣಪ್ಪನವರು ಕಡೆಗೊಮ್ಮೆ ನೋಡಿ ಅವರು ಮುಂದುವರಿದರು:"ನಿನ್ನನ್ನು ಒ೦ದು ವಿಷಯದಲ್ಲಿ ಸಲಹೆ ಕೇಳೋಣಾಂತ ಬಂದಿದೀನಿ ಪುಟ್ಟಣ್ಣನವರೆ ನನಗೊಬ್ಬಳು ಮಗಳದ್ದಾಳೆ. ಸುಂದರಿ,ವಿದ್ಯಾವತಿ--ಎಲ್ಲಾ ಗುಣಗಳೊ ಇವೆ.ನನ್ನ ಆಳಿಯ ನಿನಾ ಕಾರಣ ಆಕೆಯನ್ನೂ ಆಕೆಯಲ್ಲಿ ಹುಟ್ಟದ ಮಗುವನ್ನೂ ಬಿಟ್ಟು ಬಿಟ್ಟಿದ್ದಾನೆ. ಸಮಾಜ ಆ ಹುಡುಗಿಯ ವಿಷಯದಲ್ಲಿ ಇಲ್ಲಸಲ್ಲದ ಮಾತು ಆಡುತೆ ನಾನೋ ಮುದುಕ ಎದೆಯೊಡೆದು ಸಾಯೋದಕ್ಕೆ ಈ ಸಂಕಟಕವೇ ಸಾಕು. ಆದರೆ ಹೀಗಾಗೋದು ನ್ಯಾಯ ಸಮ್ಮತವೆ? ತಿಳಿದವರಾದ ನೀವು--” "ನಿಲ್ಲಿಸಿ!” ಎ೦ದು ಸ್ವರವೇರಿಸಿ ಕೂಗಿದ ಪುಟ್ಟಣ್ಣ, ಈ ಆಸಾಮಿ ಉದ್ಧಟ ನಷ್ಟೇ ಅಲ್ಲ, ನೀಚ ಕೂಡಾ---ಎನಿಸಿತು ಆತನಿಗೆ. ರಾಮಕೃಷ್ಣಯ್ಯ ಒಂದು ಕ್ಷಣ ಸುಮ್ಮಸಿದ್ದು ಕೇಳಿದರು. “ಯಾಕೆ, ಈ ವಿಷಯ ನಾನು ಪ್ರಸ್ತಾಪಿಸಬಾರದಾಗಿತ್ತೆ? ನಾನು ನಿಮ್ಮ ಸಲಹೆ ಕೇಳೋದು ತಪ್ಪೆ?” ಪುಟ್ಟಣ್ಣ ಮುಖ ಕೆಂಪೇರಿ ಕಿರಿಚಿದ: “ಇಲ್ಲಿ ಮುಂದುಗದೆ, ವಕೀಲರು ಅಂತ ಬೋರ್ಡು ನೋಡಿದಿರೇನು ನೀವು? ನಿಮಗೆ ಬೇಕಾದ ಸಲಹೆ ವಕೀಲರು ಕೊಡ್ತಾರೆ, ಇಲ್ಲಿಂದ ಹೊರಡಿ!" ಕೃಷ್ಣಪ್ಪನವರು, ತಮ್ಮ ಮಗಳ ಕತೆ ಮುಗಿದಂತೆಯೇ ಎಂದು ನಿರಾಶೆಯಿಂದ