ಪುಟ:Ekaan'gini.pdf/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8.6 ಏಕಾಂಗಿನಿ ಮೌನವಾಗಿ ತಲೆಯಾಡಿಸಿದರು. ರಾಮಕೃಷ್ಣಯ್ಯನ ಮುಖ ವಿವರ್ಣವಾಯಿತಾದರೂ ಅದನ್ನು ಅವರು ತೋರಗೊಡಲಿಲ್ಲ. ಪುಟ್ಟಣ್ಣ ಸರಾಗವಾಗಿ ಉಸಿರಾಡುವಂತೆ ಎರಡು ನಿಮಿಷ ಅವಕಾಶ ಕೊಟ್ಟು, ತಗ್ಗಿದ ಸ್ವರದಲ್ಲಿ ಅವರೆಂದರು: “ಅವ್ವಾ, ನೀವು ಹೀಗೆ ಮಾಡೋದು ಯಾರಿಸಮ್ಮತ? ನಿಮ್ಮಷ್ಟು ತಿಳಿದೋರು ವಿದ್ಯಾವಂತರು ಸಾರಾಸಾರ ಯೋಚ್ನೆ ಮಾಡ್ಬೇಡ್ವೆ? ಇದೇನು ಆಸ್ತಿ ಪಾಸ್ತಿಗೆ ಸಂಬಂಧಪಟ್ಟ ವಿಷಯವೆ-ಹೀಗೆ ಕಿತ್ತಾಡೋದಕ್ಕೆ? ಹಿಂದೂಗಳಾಗಿ ಹುಟ್ಟಿ_" " ನಿಮ್ಮ ವ್ಯಾಖ್ಯಾನ ಕೇಳೋದು ನನಗಿಷ್ಟವಿಲ್ಲ!” “ರೇಗ್ಬೇಡಿ ಪುಟ್ಟಣ್ಣ ನನಗೆ ನಿಮ್ಮಷ್ಟೇ ವಯಸ್ಸಿನ ಇಬ್ಬರು ಅಳಿಯಂದಿರಿದಾರೆ. ಕೃಷ್ಣಪ್ಪನವರು ನಾನೂ ತುಮಕೂರಲ್ಲಿ ಜತೇಲಿದ್ದಾಗ, ಎಳೇ ಮಗು ಸುನಂದನ ಏತ್ತಿ ಆಡಿಸ್ದೋನು ನಾನು.ಸಂಭಂದವಿಲ್ದೋನು, ಯಾವನೋ ಬಂದು ತಲೆಹರಟೆ ಆಡ್ತಿದಾನೇಂತ ದಯವಿಟ್ಟ ಭಾವಿಸ್ಬೇಡಿ. ಮಗಳ ಅವಸ್ಥೆ ಹೀಗಾಯಿತಲ್ಲಾಂತ ನನ್ನ ಸ್ನೇಹಿತ ಪಡ್ತಿರೋ ಸಂಕಟ ನೋಡೋಕಾಗ್ದೆ ನಾನೂ ಎರಡು ಮಾತು ಹೇಳೋಣ, ಕೈಯೊಡ್ಡಿ ಭಿಕ್ಷೆಕೇಳೋಣಾಂತ ಬಂದೆ, ಇನ್ನೇನೂ ಭಾವಿಸಬೇಡಿಪ್ಪಾ" ತಾವೂ ಏನನ್ನೋ ಹೇಳಬೇಕೆಂದು ಕೃಷ್ಣಪ್ಪನವರು ಗಂಟಲು ಸರಿಪಡಿಸಿಕೊಂಡರು, ಆದರೆ ಅದಕ್ಕೆ ಅವಕಾಶ ಕೊಡಲಾರೆನೆನ್ನುವಂತೆ ಪುಟ್ಟಣ್ಣ ಮಾತನಾಡಿದ: “ಎಲ್ಲಾ ಮುಗಿಯಿತು ತಾನೆ? ಏನು ಉತ್ತರ ಕೊಡಬೇಕೋ ಅದನ್ನು ನಿನ್ನೆಯೇ ತಿಳಿಸಿದ್ದೇನೆ. ನೀವಿನ್ನು ಹೋಗಬಹುದು.” ಆದರೆ ರಾಮಕೃಷ್ಣಯ್ಯ ಮಿಸುಕಲಿಲ್ಲ. "ಸಂಸಾರ ಅಂದ್ಮೇಲೆ ವಿರಸ ಇದ್ದೇ ಇರುತ್ತೆ ಪುಟ್ಟಣ್ಣ. ಒಮ್ಮೆಯೂ ಜಗಳಾಡದ ಗಂಡ ಹೆಂಡತಿಯರಿದ್ದಾರೆಯೆ ಹೇಳಿ, ಅಂಥದೇನು ಬಂದರೂ ಸರಿಪಡಸಿ ಕೊಂಡು ಹೋಗೋದು ವಾಡಿಕೆ, ಅಲ್ವೆ ? ಸುನಂದಾ ಅನ್ನ ನೀರು ಸೇರದೆ ಕೊರಗ್ತಿದಾಳೆ.. ನಿನ್ಮುನ್ನು ಬಿಟ್ಟರೆ ಬೇರೆ ಯಾರಿದಾರೆ ಆಕೆಗೆ? ತನ್ನದೇನು ತಪ್ಪಿದ್ದರೂ ಕ್ಷಮಿಸ್ಬೇಕೂಂತ ಆಕೆ ಕಳ್ಕೊಂಡಿದಾಳೆ, ನೀವು ಹ್ಯಾಗಿರು