ಪುಟ:Ekaan'gini.pdf/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ಅಂದರೆ ಹಾಗಿರ್ತಾಳೆ, ಆಕೆ ಮತ್ತು ಆ ಮಗುವಿನ ಪ್ರಾಣರಕ್ಷಣೆ ನಿಮ್ಮ ಕೈಲಿದೆ,”... ಕುಳಿತಿದ್ದ ಪುಟ್ಟಣ್ಣ, ಕುರ್ಚಿಯನ್ನು ಸರ್ರನೆ ಹಿಂದೆ ದೂಡಿ ಎದ್ದು ನಿಂತ. ಬಾಗಿಲನ್ನು ಹಾದು ಹೊಟೆಲಿನ ಇತರ ನಿವಾಸಿಗಳೂ ಹುಡುಗರೂ ಅತ್ತಿತ್ತ ಹೋದ ಹಾಗಾಯಿತು. ಒರಟು ಧ್ವನಿಯಲ್ಲಿ ಪುಟ್ಟಣ್ಣನೆಂದ : “ನೀವು ಈಕ್ಷಣ ಇಲ್ಲಿಂದ ಹೊರಡ್ಬೇಕು. ಇಲ್ದೇ ಇದ್ರೆ ಹೊಟೆಲಿನವರಿಗೆ ಹೇಳಿ ಆಳುಗಳನ್ನು ಕರಿಸ್ತೀನಿ, ಕೇಳಿಸ್ತೆ?" “ಕೇಳಿಸ್ತು, ಇನ್ನು ಏಳು ಕೃಷ್ಣಪ್ಪ," ಎಂದರು ರಾಮಕೃಷ್ಣಯ್ಯ. ಕೃಷ್ಣಪ್ಪನವರೆದ್ದು ತಾವೂ ಅಂದರು : "ಪುಟ್ಟಣ್ಣ.. ಪುಟ್ಟಣ್ಣ.. ಹೀಗೆ ಮಾಡ್ಬೇಡ್ವಪ್ಪ,." ರಾಮಕೃಷ್ಣಯ್ಯ ಕೈಮುಗಿದರು : “ಹೋಗಿ ಬರ್ತೀವಿ ಪುಟ್ಟಣ್ಣನವರೆ. ನನ್ನ ಹೆಸರು ಸಿಮಗೆ ಗೊತ್ತಿರಲಾರದು. ರಾಮಕೃಷ್ಣಯ್ಯ ಅಂತ ಶೇಷಾದ್ರಿಪುರದಲ್ಲಿದೀನಿ. ನಿಮ್ಮ ಮಾವನ ಹಾಗೆ ನನಗೂ ರಿಟೈರಾಗಿದೆ. ಇವತ್ತೇನೋ ಹೀಗೆಂದಿರಿ, ಆದರೆ ಒಂದು ತಿಂಗಳಾದ್ಮೇಲೂ ಇದೇ ಮಾತು ಹೇಳ್ತಿರೀಂತ ನಾನು ಭಾವಿಸೋದಿಲ್ಲ, ఆ ಪರಮಾತ್ಮ ನಿಮಗೆ ಒಳ್ಳೇ ಬುದ್ಧಿ ಕರುಣಿಸ್ದೆ ಇರ್ತಾನ್ಯೆ?... ಆಗಲಿ... ಇನ್ನೊಮ್ಮೆ ಯಾವತ್ತಾದರೂ ಬೇಟಿಯಾಗೋಣ.” ಮೈಯೆಲ್ಲಾ ಉರಿಯುತ್ತಿದ್ದ ಪುಟ್ಟಣ್ಣನನ್ನು ಅಲ್ಲೆ ಬಿಟ್ಟು ಬಂದವರಿಬ್ಬರೂ ಮೆಟ್ಟಲುಗಳನ್ನಿಳಿದು ಬೀದಿ ಸೇರಿದರು... ರಾಮಕೃಷ್ಣಯ್ಯ ಹೊದೆದಿದ್ದ ಶಾಲನ್ನು ಸರಿ ಪಡಿಸಿಕೊ೦ಡರು. ಹೆಚ್ಚು ಕಡಿಮೆ ನುಣ್ಣಗಾಗಿದ್ದ ತಲೆಯ ಮೇಲೊಮ್ಮೆ ಕೈಯಾಡಿಸಿದರು. ಅಸ್ಪಷ್ಟವಾಗಿ ಏನನ್ನೋ ಗೊಣಗಿದರು. ಖಿನ್ನವಾಗಿತ್ತು ಕೃಷ್ಣಪ್ಪನವರ ಮನಸ್ಸು. ಇನ್ನೇನೂ ಆಸೆ ಉಳಿಯದಂತೆ ಅವರಿಗೆ ತೋರಲಿಲ್ಲ. ತಮ್ಮ ದೇಹ ಅರ್ಧಕ್ಕರ್ಧ ಕುಗ್ಗಿಹೋದಂತೆ, ತಾವು ಭೂಮಿಗೆ ಕುಸಿದಂತೆ, ಅವರಿಗೆ ಅನಿಸಿತು. ದಪ್ಪನೆಯ ಗಂಟಲಿನಲ್ಲಿ ರಾಮಕೃಷ್ಣಯ್ಯ ಬಡಬಡಿಸಿದರು :