ಪುಟ:Ekaan'gini.pdf/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ಊಟಮುಗಿಸಿ ಕೈತೊಳೆದು ಬ೦ದರು. ವ್ಯಥೆಪಡುತ್ತ ಆಕೆ ಕೇಳಿದುದು ಕಹಿಯಾದ ಕಥೆಯನ್ನೇ. ರಾಧಮ್ಮನವರು ಕೊಟ್ಟುದೊಂದೇ ಸಲಹೆ. “ನೀವು ಸುನಂದೇನ ಕರಕೊಂಡ್ಬನ್ನಿ, ಸನಂದ.-ಮಗು ಇಬ್ಬರನ್ನು ಕರಕೊಂಡ್ಬನ್ನಿ, ಆತಯಾಕೆ ಹಾದಿಗೆ ಬರಲ್ವೊ ನೋಡೋಣ". “ಸ್ವಲ್ಪ ಸಮಯ ಬಿಟ್ಕೊಂಡು ಹಾಗೇ ಮಾಡ್ತೀನಿ ತಾಯಿ,” ಎಂದರು ಕೃಷ್ಣಪ್ಪ. .. ರಾತ್ರೆ ಇದ್ದು ಹೋಗಲು ಒಪ್ಪದೆ ಸಂಜೆಯ ರೈಲಿಗೇ ಅವರು ಊರಿಗೆ ಹೊರಟರು. ಬೇಡಬೇಡವೆಂದರೂ ಕೇಳದೆ ರಾಧಮ್ಮ, ಸುನಂಧೆಗಾಗಿ ಚಕ್ಕುಲಿ ಕೋಡುಬಳೆಯ ಪೊಟ್ಟಣ ಕಟ್ಟಿಕೊಟ್ಟರು. ಅಲ್ಲಿಂದ ಹೊರಬೀಳುತಿದ್ದಂತೆ ಕೃಷ್ಣಪ್ಪನವರು ಪಕ್ಕದಲ್ಲೆ ಅಳಿಯನೂ ಮಗಳೂ ವಾಸವಾಗಿದ್ದ ಮನೆಯನ್ನೊಮ್ಮೆ, ನೋವು ತುಂಬಿದ ನೋಟದಿಂದ ನೋಡಿದರು.

ತಮ್ಮ ಗಂಡನ ಕಾಗದ ಬಂದೊಡನೆ ಸುನಂದೆಯ ತಾಯಿ ಕೇಳಿದ್ದರು: "ಏನು ಬರೆದಿದ್ದಾರೆ ಸುನಂದಾ." "ಏನೂ ಇಲ್ಲಮ್ಮ," ಏಂದು ಸುನಂದಾ, ಮುಖ್ಯವೆಂದು ತೋರಿದ್ದ ನಾಲ್ಕು ವಾಕ್ಯಗಳನ್ನು ಓದಿ ಹೇಳಿದ್ದಳು: 'ನಿನ್ನ ಯಜಮಾನರನ್ನು ಕಂಡಿದ್ದೆ, ಆರೋಗ್ಯವಾಗಿದ್ದಾರೆ. ಇವತ್ತೂ ನೋಡುತ್ತೇನೆ. ಒರೆದು ತಿಳಿಸುವಂಥಾದ್ವೇನೂ ಇಲ್ಲ....' ತಾನೊಬ್ಬಳೇ ಆ ವಾಕ್ಯವನ್ನು ಹಲವು ಸಾರೆ ಸುನಂದಾ ಓದಿದ್ದಳು. ಕಾತರದಿಂದ, ಶುಭ ಸೂಚಕವಾದ ಅಂಶವೇನಾದರೂ ಅಲ್ಲಿರಬಹುದೆಂಬ ಆಸೆಯಿಂದ, ಓದಿದಳು, ಆದರೆ, ತಂದೆ ಒಳ್ಳೆಯ ಸುದ್ದಿಯೊಡನೆ ಹಿಂತಿರುಗುವರೆಂಬುದಕ್ಕೆ ಅಲ್ಲಿ ಯಾವ ಆಧಾರವಿತ್ತು? ಇದೆಯೇನೋ ಎಂಬ ಭ್ರಮೆ ತನಗೆ