ಪುಟ:Ekaan'gini.pdf/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ಎಂದು-ಕೊನೆಯಲ್ಲಿ ಸುನಂದಾ ನಿರಾಸೆಯ ನಿಟ್ಟುಸಿರು ಬಿಟ್ಟಳು. ಶನಿವಾರ ರಾತ್ರೆಯೇ ಕೃಷ್ಣಪ್ಪನವರು ಮನೆ ಸೇರಿದರು, ನೋಡಿದರೆ, ಕಾಹಿಲೆ ಮನುಷ್ಯನೇನೋ ಎನ್ನುವಂತಿತ್ತು. ಪ್ರಯಾಣದ ಬಳಿಕ ಅವರು ಯಾವಾಗಲೂ ಇಷ್ಟಪಡುತ್ತಿದ್ದುದು ಹಿತವಾದ ಬಿಸಿ ನೀರಿನ ಸ್ನಾನವನ್ನು, ಸುನಂದಾ ತಂದೆ ಬರಬಹುದೆಂಬ ನಂಬಿಕೆಯಿಂದ ಆ ಮೊದಲೇ ಸ್ಥಾನದ ಒಲೆಗೆ ಸಣ್ಣನೆ ಉರಿ ಹಾಕಿದ್ದಳು. ತಮ್ಮ ಪ್ರವಾಸದ ವಿಷಯವಾಗಿ ಏನು ಹೇಳಬೇಕು, ಹೇಗೆ ಮೊದಲು ಮಾಡಬೇಕು, ಎನ್ನುವುದೇ ಕೃಷ್ಣಪ್ಪನವರಿಗೆ ಸ್ಪಷ್ಟವಾಗಿರಲಿಲ್ಲ. ಆದರೂ ಸ್ನಾನದ ಮನೆಗೆ ಹೊರಡುತ್ತ, ಮಗಳನ್ನೂ ತಮ್ಮಾಕೆಯನ್ನೂ ಉದ್ದೇಶಿಸಿ ಅವರೆಂದರು; “ಮಹಾರಾಯನನ್ನು ನೋಡಿ ಬಂದಿದ್ದೆಷ್ಟೋ ಅಷ್ಟೆ. ಹೆಚ್ಚೇನೂ ಪ್ರಯೋಜನವಾಗ್ಲಿಲ್ಲ, ಇನ್ನೊಂದ್ಸಾರೆ ಹೋಗ್ವೇಕು. ಅಂತೂ ಬೆಂಗಳೂರಲ್ಲೇ ಇದಾನೆ.” ಸುನಂದಾ ತುಟಿ ಪಿಟಕ್ಕನ್ನಲಿಲ್ಲ. ಆಕೆಯ ತಾಯಿ ಮಾತ್ರ, ತಮ್ಮಷ್ಟಕ್ಕೆ ಅಸ್ಪಷ್ಟವಾಗಿ ಏನನ್ನೋ ಗೊಣಗಿದರು. ಹೀಗೆ ಗೊಣಗುವ ಪ್ರವೃತ್ತಿ ದಿನ ಕಳೆದಂತೆ ಅವರಲ್ಲಿ ಹೆಚ್ಚುತ್ತ ಬಂದಿತ್ತು. ಸುನಂದಾ ಸರಸ್ವತಿಯನ್ನು ಮಲಗಿಸಿದಳು. ಊಟಕ್ಕೆ ತಟ್ಟೆ ಇಟ್ಟಳೆು. ತಾಯಿ ತಂದೆಯರಿಗೆ ಹಾಸಿಗೆ ಹಾಸಿದಳು. ಒಳಗೆ ಹೃದಯ ತುಡಿದುಕೊಳ್ಳುತ್ತಲೇ ಇತ್ತು, ಈ ನಿರಾಸೆಯ ಬದುಕು ಇನ್ನು ತನಗೆ ಅಭ್ಯಾಸವಾಗಬೇಕು, ತಾನು ಧೈರ್ಯಗೆಡಬಾರದು, ಹೆತ್ತವರ ಸಂಕಟವನ್ನು ಹೆಚ್ಚಿಸಬಾರದು-ಎಂದು ಸುನಂದಾ ತನಗೆ ತಾನೆ ಬುದ್ದೀವಾದದ ಮಾತನಾಡಿದಳು. ಊಟಕ್ಕೆ ಕುಳಿತ ಕೃಷ್ಣಪ್ಪನವರು ವಿವರವಾಗಿ ಎಲ್ಲವನ್ನೂ ಹೇಳಿದರು. ವಾಸ ಮಾಡುತ್ತಿದ್ದ ಮನೆಯನ್ನು ಆತ ಬಿಟ್ಟುಕೊಟ್ಟ ವಿಷಯವನ್ನೂ ಈ ದಿನ ಸುನಂದೆಯ ತಾಯಿಗೆ ತಿಳಿಸಿದುದಾಯಿತು. ಸುನಂದಾ ಸುಮ್ಮನಿದ್ದರೂ ಆಕೆಯ ತಾಯಿ ನಡು ನಡುವೆ ಶಪಿಸುತ್ತಾ ಗೊಣಗುತ್ತಾ ಗಂಡನ ವರದಿಗೆ ಕಿವಿಗೊಟ್ಟರು. ಮಧಾಹ್ನ ರಾಧಮ್ಮನ ಮನೆಯಲ್ಲಿ ಊಟ ಮಾಡಿದ ವಿಷಯವನ್ನು ಹೇಳುತಿದ್ದಂತೆ, ಮರೆತು ಹೋಗಿದ್ದುದೊಂದು ನೆನಪಾಗಿ ಕೃಷ್ಣಪ್ಪನವರೆಂದರು;