ಪುಟ:Ekaan'gini.pdf/೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


"ವಿಜಯಾ.... ಲೇ ವಿಜಯಾ.... ಏಳೇ." ತೋಳಿನ ಕೆಳಗೆ ಮುಖ ಮರೆಸಿಕೊಂಡಿದ್ದ ವಿಜಯಾಗೆ ಆಗಲೇ ಎಚ್ಚರವಾಗಿತ್ತು. ಆದರೂ ಪದ್ಡತಿಯಂತೆ, ಎಬ್ಬಿಸಲೆನ್ದು ಬರುವ ಅಕ್ಕನನ್ನೋ ಅಮ್ಮನನ್ನೋ ಇದಿರು ನೋಡುತ್ತ ಆಕೆ ಮಲಗಿಯೇ ಇದ್ದಳು. ಈಗ ಅಕ್ಕನ ಸ್ವರ ಕೇಳಿಸಿತೆನ್ದು ಸಮಾಡಾನ್ವಯಿತು ಆಕೆಗೆ. "ಇದೇನೇ ಇದು. ಇವತ್ತೂ ಮಲಗಿಕೊಂಡೇ ಇದೀಯಾ!" ಇವತ್ತು? ಲೋಕದ ದೃ‌ಷ್ಟಿಯಲ್ಲಿ ತನ್ನ ಪಾಲಿಗೊಂದು ಶುಭದಿನ ಕೈಹಿಡಿದ ಗಂಡನು ತನ್ನನ್ನು ಕರೆದೊಯ್ಯಲು ಬರುವ ದಿನ, ಆದರೆ ತನ್ನ ದೃಷ್ಟಿಯಲ್ಲಿ? "ಏಳೋಲ್ವೆನೇ? ಲೇ ವ್ಜೀ.." ಪ್ರೀತಿಯ ಅಕ್ಕನ ಸ್ವರ. ಇವತ್ತು ಮತ್ತು ನಾಳೆ, ಹೆಚ್ಚೆಂದರೆ ಮತ್ತೊಂದು ದಿವಸ. ಬಳಿಕ, ಅಕ್ಕನ ಈ ಕರೆ ಕೇಳಿಸದಂತಹ ದೋರ್ದೋರಿಗೆ ತಾನು ಹೋಗಬೇಕು. "ಏಳೇ ವಿಜಯಾ, ಏನಮ್ಮ ಇದೌ-ಥೂ!" ಇದು ನಾಲ್ಕನೆಯ ಸಾರೆ, ಇನ್ನು ಪದಗಳು ನಡೆದು ತನ್ನೆಡೆಗೆ ಬರುವುವು. ಅಕ್ಕ ಮಂಡಿಯೂರುವಳು. ಆಕೆಯ ಕೈ ತನ್ನ್ದನ್ನೆತ್ತುವುದು. ಆ ಕಣ್ಣುಗಳು ನಗುವುವು. ಹಾಗೆ ಮುಕ್ತಾಯವಗುವುದು ನಿದ್ದೆಯ ನಟನೆ....

"ಥೂ ಕಳ್ಳೀ!"