ಪುಟ:Ekaan'gini.pdf/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೦ ಏಕಾಂಗಿನಿ ದ್ದಾಗ, ಸಾಲ ವ್ಯವಹಾರದ ಕಾಗದ ಪತ್ರಗಳನ್ನು ಹೊರ ತೆಗೆದು ಸುನಂದೆಯ ಮುಂದಿರಿಸಿ ಪ್ರತಿಯೊಂದನ್ನೂ ವಿವರಿಸಿದರು. “ಇನ್ನು ತಿರುಗಿ ಕೆಲಸಕ್ಕೆ ಹೋಗೋದು ಕಷ್ಟವಾಗಲ್ವಾ? ಎಂದು ಸುನಂದಾ ಕೇಳಿದರು. “ಒ೦ದೆರಡು ಗಂಟೆ ಕೆಲಸ ಏನು ಮಹಾ?” “ಇನ್ನೂ ಸ್ವಲ್ಪ ದಿವಸ ಹೋಗಲಿ, ಆಗದಾ?” ನಿನ್ನ ಪ್ರಶ್ನೆ ಇತ್ಯರ್ಥವಾಗಲೆಂದೇ ಇಷ್ಟು ದಿನ ಕಾದುದು ಎಂದು ಮನಸ್ಸಿನಲ್ಲಿದ್ದುದನ್ನು ಬಾಯಿ ಬಿಚ್ಚಿ ಕೃಷ್ಣಪ್ಪನವರು ಹೇಳಲಿಲ್ಲ. ಬದಲು “ಹೂಂ,” ಎಂದರು. ಕಾಗದ ಪತ್ರಗಳನ್ನು ಸರಸ್ವತಿಗೆ ಸಿಗದಂತೆ ಎತ್ತಿಡುತ್ತಾ ಕೃಷ್ಣಪ್ಪನವರು ಹೇಳಿದರು: “ನೀನು ಗಂಡಾಗಿ ಹುಟ್ಬೇಕಾಗಿತ್ತು ಸುನ೦ದಾ. ನಮ್ಮ ದುರದೃಷ್ಟದಿಂದ ಹೆಣ್ಣಾದೆ.” ಆ ಮಾತಿಗೆ ಸುನಂದೆ ಉತ್ತರ ಕೊಡಲಿಲ್ಲ.

                                ೧೦

ಹಿರಿಯ ಮಗಳ ಗುಡ ಬೆಂಗಳೂರಲ್ಲಿಲ್ಲ, ಪ್ರವಾಸ ಹೋಗಿದ್ದಾನೆ; ಆದುಕ್ಕೋಸ್ಕರ ಮಗಳು ತವರು ಮನೆಗೆ ಬಂದಿದ್ದಾಳೆ... ಎಂದು ಕೃಷ್ಣಪ್ಪನವರ ಆ ಕುರಿತು ಸಂತು ಬಂದಾಗ ಮೊದಲು ಹೇಳಿದ್ದರು. ಆದರೆ ಸದಾ ಕುಲವೂ ಪ್ರವಾಸಗ ಮೇಲೇಯೇ ಇರುವುದು ಸಾಧ್ಯವೆ? ಹೀಗಾಗಿ ಉತ್ತರ ಕ್ರಮೇಣ ರೂವಾಂತರ ತಳೆಯಿತು. ಅಳಿಯನ ಆಫ಼ೀಸಿನವರು ಆತನನ್ನು ಬೊಂಬಾಯಿಯ ಪ್ರತಿನಿಧಿಯಾಗಿ ನೇಮಿಸಿದ್ದಾರೆ, ఆ ಊರಿನ ಅವಸ್ಥೆ ಗೊತ್ತೇ ಇದೆಯಲ್ಲ, ... ಮನೆ ಸಿಗದೆ ತೊಂದರೆಯಾಗಿದೆ.ಈಗ ಸುನಂದೆಯೂ ಆಕೆಯ ಮಗುವೂ ನಮ್ಮಲ್ಲೇ ಇದ್ದಾರೆ--ಹೀಗೆ.