ಪುಟ:Ekaan'gini.pdf/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ೮೧ ಸುನಂದೆಗೂ ನೇರವಾದ ಉತ್ತರ ಕೂಡಬೇಕಾದ ಪ್ರಮೇಯಗಳು ಒದಗುತ್ತಿದ್ದವು. ಸ್ವತಃ ಆಕೆ ಗೆಳತಿಯರನ್ನು ಹುಡುಕಿಕೊಂಡು ಹೋಗುತ್ತಿರಲಿಲ್ಲ. ಆದರೂ ಒಮ್ಮೊಮ್ಮೆ ಬಾಲ್ಯದ ಒಡನಾಡಿಗಳ ಭೇಟಿಯಾಗುತ್ತಿತ್ತು. “ಯಾವತ್ತು ಬಂದೆ?” ಎಂದು ನಗುತ್ತ ಚೇಷ್ಟೆ ಮಾಡುವವರಿದ್ದರು. "ವಿಜಯಾ ಮದುವೆಗೆ ಬಂದವಳು ಹೋಗೇ ಇಲ್ವೇನೆ ?” ಎಂದು ಕೇಳುವವರಿದ್ದರು. ಆಗ ಬಲು ಕಷ್ಟಪಟ್ಟು ಒಣನಗೆ ಬೀರುತ್ತ ಸುನಂದಾ ಉತ್ತರ ಕೊಡುತ್ತಿದ್ದಳು. ತನ್ನ ತಂದೆ ಇತರರಿಗೆ ಕೊಡುತ್ತಿದ್ದ ಉತ್ತರವೇ. ಆದರೆ ಹಾಗೆ ಸುಳ್ಳಾಡುವುದು ತಾಯಿಯಿಂದ ಮಾತ್ರ ಸಾಧ್ಯವಿರಲಿಲ್ಲ. ಈ ವಾರ ಬರಬಹುದು, ಈ ತಿಂಗಳು ಬರಬಹುದು, ಹಬ್ಬಕ್ಕೆ ಬರಬಹುದು-- ಎಂದೆಲ್ಲ ಆಕೆ ಉತ್ತರ ಕೊಡುತ್ತಿದ್ದರು. “ಅಳಿಯ ಬೊಂಬಾಯಿಲ್ಲಿದ್ದಾನೇಂತ ಹೆಳ್ಭಾರ್ದೇನೋ” ಎಂದು ಗoಡ ನುಡಿದಾಗ, "ಸುಳ್ಳು ಹೇಳೋದೆಲ್ಲ ನಂಕೈಲಾಗಲ್ಲ” ಎಂದು ಆಕೆ ರೇಗಾಡುತ್ತಿದ್ದರು. ಸುನಂದೆಯ ತಾಯಿ ಪುರಾಣಶ್ರವಣಕ್ಕೆ ಹೋಗತೊಡಗಿದ ಮೇಲೆ ಹೆಚ್ಚು ಪೀಕಲಾಟಕ್ಕಿಟ್ಟುಕೊಂಡಿತು. “ಪುರಾಣಕ್ಕೆ ಬರೋದೇ ನಿಲ್ಲಿಸ್ಬಿಟ್ಟಿದ್ರಿ", ಎಂದರು ಒಬ್ಬಾಕೆ. “ಎರಡನೆ ಮಗಳ ಮದುವೇನೂ ಅದ್ದೂರಿಯಿಂದ್ಲೆ ಮಾಡ್ಬಿಟ್ರು.ಅವರಿಗೆ ಇನ್ಯಾವ ಯೋಚ್ನ ಇದೆ ಹೇಳಿ?” ಎಂದರು ಮತ್ತೊಬ್ಯಾಕೆ. ಮೂರನೆಯ ಸ್ವರ 'ಬಲು ಗುಟ್ಟು' ಎನ್ನುವಂತೆ ಅವರನ್ನು ಸಮೀಪಿಸಿತು. "ಸುನಂದೇನ ಗಂಡನ ಮನೆಗೆ ಕಳಿಸ್ಕೊಟ್ರಾ ? ಯಾಕೆ-ವಿರಸ ಇನ್ನೂ ಸರಿಹೋಗ್ಲಿಲ್ವೇ ?" “ಅಂಧಾದೇನೂ ಇಲ್ಲ. ಸರಿಹೋಗುತ್ತೆ-ಸರಿಹೋಗುತ್ತೆ,” ಎನ್ನುವುದು ಸುನಂದೆಯ ತಾಯಿಯ ಉತ್ತರ. ಆದರೆ ಅವರಿಗೆ ಗೊತ್ತಿತ್ತು, ಆ ಪಿಸುಧ್ವನಿಯು ಬರಿಯ ನಟನೆಯ ಎಂಬುದು. ಅತ್ತಕಡೆಗೆ ಮುಖ ತಿರುಗಿಸಿ ಆ ಹೆಂಗಸರೇ ఆ ವಿಷಯವನ್ನೇ ಎತ್ತಿಕೊಂಡು ಗಟ್ಟಿಯಾಗಿ ಮಾತನಾಡುತ್ತಿದ್ದರೆಂಬುದನ್ನು ಅವರು ತಿಳಿದಿದ್ದರು. ಪುರಾಣಕ್ಕೆ ಹೋದ ನಾಲ್ಕಾರು ದಿನಗಳಲ್ಲೂ ಇದೇ ಅನುಭವವಾಯಿತು 6