ಪುಟ:Ekaan'gini.pdf/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೨ ಏಕಾಂಗಿನಿ ಸುನಂದೆಯ ತಾಯಿಗೆ. ಒಂದು ವಾರದ ಬಳಿಕ ಅವರೊಂದು ಸಂಜೆ ನಿರ್ಧಾರದ ಸ್ವರದಲ್ಲಿ ಅಂದರು:"ಸಾಕು ವುರಾಣ ಕೇಳಿದ್ದು! ಇನ್ನು ನಾನು ಹೋಗಲ್ಲ !” ಆ ತೀರ್ಮಾನದ ಹಿನ್ನೆಲೆಯನ್ನು ಸುನಂದಾ ಆಗಲೇ ಊಹಿಸಿಕೊಂಡಿದ್ದಳು. ಆದರೂ ಮಾತನಾಡದಿರುವುದು ಸರಿಯಲ್ಲವೆಂದು ಕೇಳಿದಳಾಕೆ: “ಯಾಕಮ್ಮ ?” “ನನಗಿಷ್ಟವಿಲ್ಲ.ಆ ವುರಾಣವೂ ಸಾಕು, ಹರಕುಬಾಯಿಗಳ ಮಾತೂಸಾಕು” “ಹೋಗಲಿಬಿಡು, ಸುಮ್ನೆ ಅದನ್ನೆಲ್ಲಾ ಮನಸ್ಸಿಗೆ ಹಚ್ಕೋಬೇಡ. ಮನೇಲೆ ಇದ್ದರಾಯ್ತು.” ಕೃಷ್ಣಪ್ಪನವರೂ ಅಂಥದೇ ಮಾತು ಅಂದರು :

“ಆಡೋ ನಾಲಿಗೆ ಸಾವಿರ ಅನ್ನುತ್ತೆ.ನಮ್ಮ ಪಾಡಿಗೆ ನಾವು ಇದ್ದರಾಯ್ತು”. ಅಂದಿನಿಂದ ಸುನಂದೆಯ ತಾಯಿಯು ಪುರಾಣ ಶ್ರವಣ ನಿಂತಿತು. 

ಪ್ರತಿಸಂಜೆಯೂ ರಾಮಮಂದಿರಕ್ಕೆ ಹೋಗಿಬರುವುದು, ಪುರಾಣ ಕೇಳುವುದು, ಆ ವೃದ್ಧೆಗೆ ಒಂದು ರೀತಿಯ ವಿಹಾರವಾಗಿತ್ತು. ತನ್ನಿಂದಾಗಿ ಆ ಸುಖಕ್ಕೆ ಕಲ್ಲು ಬಿತ್ತೆಂದು ಸುನಂದಾ ದುಃಖಿಸಿದಳು. ಆದರೆ ಹೆಚ್ಚಿನ ದುಃಖಕ್ಕೆ ಬೇರೊಂದು ಕಾರಣವಿತ್ತು. ಅದು ತನ್ನ ವಿಷಯದಲ್ಲಿ ಇತರ ಹೆಂಗಸರು ಮಾತನಾಡಿಕೊಳ್ಳುತ್ತಿದ್ದ ರೀತಿ.

 ಕಾಲೇಜಿನಲ್ಲಿ ಸುನಂದೆಯ ಸಹಪಾಠಿಯಾಗಿದ್ದವಳು ಒಂದು ದಿನ ಗೆಳತಿಯನ್ನು ನೋಡಲು ಬಂದಳು. ಆಕೆ, ಮದುವೆಯಾದ ಒಂದು ವರ್ಷದಲ್ಲೇ ಗಂಡನನ್ನು ಕಳೆದುಕೊಂಡಿದ್ದ ಅಭಾಗಿನಿ. ಅವಳ ವಿಷಯದಲ್ಲಿ ಅತ್ತೆಮನೆಯವರು ಅತಿ ಕ್ರೂರವಾಗಿ ವರ್ತಿಸಿದ್ದರು. ಕೊನೆಗೆ,ಬರಿಗೈಯಲ್ಲಿ ಬರಿ ಹಣೆಯಲ್ಲಿ ಆ ನಿಧವೆ ತವರು ಮನಿಗೆ ಬಂದಿದ್ದಳು.

ಸುನಂದೆ ಒಂದು ರೀತಿಯಲ್ಲಾದರೆ ; ಇನ್ನೊಂದು ರೀತಿಯಲ್ಲಿ ಆ ಸಕೇಶಿಯೂ ಕೆಲ ಹೆಂಗಸರ ಕುಹಕ ನುಹಗಳಿಗೆ ಗುರಿಯಾಗಿದ್ದ ಜೀವ. “ಬಾಮ, ಚಂಪಾ, ಹೋದ ಯುಗದಲ್ಲಿ ನಿನ್ನನ್ನು ಕಂಡಿದ್ದೇಂತ ತೋಗುತ್ತೆ” ಎಂದಳು ಸುನಂದಾ “ನಮ್ಮಮ್ಮ ಎಲ್ಲಿಗೂ ಹೋಗಬೇಡ ಲಂತಾಳೆ. ಬೇಜಾರು ಕಣೇ. ಅಂತೂ ಇವತ್ತು ಅಮ್ಮನನ್ನ ಒಪ್ಪಿಸಿ ಬಂದ್ಟಿಟ್ಟೆ”, ಎಂದು ಆ ಗೆಳತಿ ಅಂದಳು.