ಪುಟ:Ekaan'gini.pdf/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ೮೩ ಜೀವನ ನೀಡಿದ್ದ ಹೊಚ್ಚ ಹೊಸದಾದ ಕಹಿಯನ್ನು ಮರೆಯಲೆಂದು, ಗೆಳತಿಯರು ಬಲು ಹಳೆಯ ನೆನಪುಗಳ ಬುತ್ತಿಯನ್ನು ಬಿಚ್ಚಿ, ಆ ಸಂಗ್ರಹದಿ೦ದ ಒಂದೊಂದನ್ನೆ ಮೆಲ್ಲನೆ ಸವಿದರು. ಆದರೂ ಒಗರು ತೇಗಿನಂತೆ ಈಗಿನ ಇರುವಿಕೆ ಆಗಾಗ್ಗೆ ಬಿಸು ಸುಯ್ಯುತ್ತಿತ್ತು. ಚಂಪಾ ಅಂದಳು: “ನಿನ್ನ ವಿಷಯ ನನಗೆ ಗೊತ್ತಾದ್ದು ಮೊನ್ನೆ ಮೊನ್ನೆ. ಕೇಳಿ ಎಷ್ಟು ಸಂಕಟವಾಯ್ತೂಂತ." ಸುನಂದಾ ನಗಲು ಯತ್ನಿಸಿದಳು. “ಇಲ್ಲವಮ್ಮ, ಸಂಕಟಪಡೋದರಲ್ಲಿ ಅರ್ಥವಿಲ್ಲ. ಈ ಪ್ರಪಂಚದಲ್ಲಿ ದುಃಖಿಗಳು ನಾವು ಮಾತ್ರ ಅಲ್ಲವಲಾ-ಅಂತ ಸಮಾಧಾನ ಪಡ್ಬೇಕು.” ಸುನಂದೆಯ ಗೆಳತಿ ಸರಸ್ವತಿಯನ್ನೆತ್ತಿಕೊಂಡು ಮುದ್ದಿಟ್ಟಳು. “ನಿನ್ನತ್ತೆ ಕಣೋ” ಎಂದು, ಬಂದವಳನ್ನು ಸರಸ್ವತಿಗೆ ಸುನಂದಾ ಪರಿಚಯಮಾಡಿ ಕೊಟ್ಟಳು ಸಜಲನಯನೆಯಾಗಿ ಆ ಅತ್ತೆ ಅಂದಳು: “ಒಳ್ಳೆಯವರಮ್ಮ. ಚಿನ್ನದಂಥ ಮನುಷ್ಯ. ನನಗೆ ಭಾಗ್ಯ ಇರಲಿಲ್ಲ." "ಅಯ್ಯೋ, ಎಲ್ಲಾ ಸುಮ್ನೆ ಅನ್ನೋದು ಕಣೇ, ಭಾಗ್ಯ-ಭಾಗ್ಯ ಅಂತ ಬಡಕೋತೀವಿ. ಆಗೋದು ಆಗುತ್ತೆ ಹೋಗೋದುಹೋಗುತ್ತೆ.” “ಮೊನ್ನೆ ನಮ್ಮ ಆಚೆ ಮನೆ ಲಂಕಿಣಿ-ಜಯಮ್ಮನ ತಾಯಿ ಕಣೇ-ನಿನ್ನ ವಿಷಯ ಎಂಧ ಕೆಟ್ಟು ಮಾತು ಆಡಿದಳೂಂತೀ” "ಸುನಂದಾ ಕೆಟ್ಟು ಹೋದ್ಲು ಅಂದ್ಲೇನು?” ಆ ಪ್ರಶ್ನೆಯೊಡನೆ ಬೆರೆತಿತ್ತು ವ್ಯಂಗ್ಯವಾದ ನಗು, ಚಂಪಾಗೆ ಕಸಿವಿಸಿಯಾಯಿತು. " ನಿನ್ನ ನಡತೆ ಸರಿಯಾಗಿಲ್ಲಾಂತ ಗಂಡ ಬಿಟ್ಟಿಟ್ಟದ್ದಾನೆ ಅಂದ್ಲು." “ಅಷ್ಟೆ ತಾನೆ? "ನಾನು ಸಿಟ್ಟು ತಡೆಯೋಕಾಗದೆ ದಬಾಯಿಸ್ದೆ. ನಿಮ್ಮ ಜಯಾನೂ ಯಾವತ್ತಾದರೂ ಮನೆಗೆ ವಾಪಸು ಬಂದಾಳು, ಹುಷಾರಿ--ಅಂದೆ, ನನ್ನ ಜಯಾನಾ ಮುಂಡೆಯಾಗು ಅಂತಿಯೇನೇ ಪಾಪೀ-ಅಂತ ಎಷ್ಟೊಂದು