ಪುಟ:Ekaan'gini.pdf/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ವಿಜಯಾ ನಕ್ಕಳು. ನಕ್ಕು ಅಕ್ಕನ ಮುಖವನ್ನೇ ನೋಡಿದಳು.ನೋಡುತ್ತಲಿದ್ದಂತೆ ನಗೆ ಮಾಯವಾಯಿತು.

      ತಂಗಿಯ ಮುಖಭಾವ ಬದಲಾದುದನ್ನು ಗಮನಿಸಿದ ಸುನಂದಾ ಅಂದಳು :
     "ನಗು ನಗ್ತಾ ಏಳು ವಿಜೀ. ರೈಲು ಬರೋ ಹೊತ್ತಾಯ್ತು. ಅಪ್ಪ ಆಗಲೇ ಸ್ಟೇಷನ್ನಿಗೆ ಹೋದ. ಏಳಮ್ಮ."
      ವಿಜಯಾ ಅಕ್ಕನ ಅಂಗೈಗಳನ್ನು ಮುಟ್ಟಿ ನೋಡಿದಳು. ಹೃದಯದೊಳಗಿನ ಸಂಕಟವನ್ನೆಲ್ಲ ಅದುಮಿ ಹಿಡಿದು ನಗೆಯ ಮುಖವಾಡ ಧರಿಸಿದ್ದಳು ತನ್ನ ಅಕ್ಕ. ಆ ನೋವಿನ ಆಳ ಎಷ್ಟೆಂಬುದು ತನಗೆ ತಿಳಿಯದೇ?____

ಒಡಹುಟ್ಟಿದವಳಾದ ತನಗೆ ತಿಳಿಯದೆ?

     "ಅಕ್ಕಾ!"
     "ಏನು ವಿಜಯಾ?"
     ಏನೆಂದು ಹೇಳಬೇಕು ತಾನು?
     "ಏನೂ ಇಲ್ಲ ಅಕ್ಕಾ"
     "ಹುಚ್ಚಿ! ಏಳು."
     ಸುನಂದಾ ತನ್ನ ತಂಗಿಯ ಮನೋಸ್ಥಿತಿಯನ್ನು ಚೆನ್ನಾಗಿ ತಿಳಿದಿದ್ದಳು. ಅಗಲಬೇಕಾದ ದಿನ ಸಮೀಪಿಸಿದಂತೆ ಅಕ್ಕನ ಇರುವಿಕೆಗಾಗಿ ಕೊರಗುತ್ತ ಹೆಚ್ಛು ಹೆಚ್ಛು ದುಃಖಿನಿಯಾಗಿದ್ದಳು ವಿಜಯಾ. ಆದರೆ ಆ ದುಃಖಕ್ಕೊಂದು ಅರ್ಥವಿತ್ತೇ? ಅದು ಅಗತ್ಯವಿತ್ತೇ? ಅಕ್ಕನ ಬಾಳನ್ನು ಮೋಡ ಕವಿಯಿತೆಂದು ತಂಗಿಯ ಮುಖವೂ ಯಾಕೆ ಬಾಡಬೇಕು? ತಂಗಿ ಹಸನ್ಮುಖಿಯಾಗಿಯೇ ಹಗುರವಾದ ಹೃದಯದಿಂದಲೇ ಗಂಡನ ಮನೆಗೆ ಹೋಗಬೇಕಾದುದು ನ್ಯಾಯ..
     "ಅಕ್ಕಾ...."
     ಕರೆದ ಕಂಠ ಗದ್ಗದಿತವಾಗಿತ್ತೆಂದು ಸುನಂದೆಯ ಕತ್ತು ಬಾಗಿತು. ತಂಗಿಯ ನೀಳವಾದ ಎಳೆಯ ತೋಳು ಆ ಕತ್ತನ್ನು ಆವರಿಸಿತು.
     "ಅಕ್ಕಾ.... ನನಗೆ ಸಂಕಟವಾಗುತ್ತೆ."

ಒತ್ತಾಯಪೂರ್ವಕವಾಗಿ ತುಟಿಗಳ ನಗೆ ಕುಣಿಸುತ್ತಾ