ಪುಟ:Ekaan'gini.pdf/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ "ಪುನಃ ಓದ್ಬೇಕೂಂತಿದೀಯಾ?" “ಆಸೆ ಏನೋ ಇದೆ. ನಮ್ಮಣ್ಣನ್ನ ಹೇಗಾದರೂ ಮಾಡಿ ಒಪ್ಪಿಸ್ಬೇಕು. ಬಿ.ಎ.ಮುಗಿಸೋದು ಸುಲಭ. ಯಾವುದಾದರೂ ಹೈಸ್ಕೂಲ್ ನಲ್ಲಿ ಕೆಲಸ ಸಿಕ್ಕಿಯೇ ಸಿಗುತ್ತೆ. ಆಮೇಲೆ ಬಿ.ಟಿ. ನೂ ಮಾಡ್ಕೊಂಡ್ರಾಯ್ತು.” “ಹೌದು ಚಂಪಾ, ಸರಿಯಾಗಿಯೇ ಯೋಚ್ನೆ ಮಾಡಿದೀಯಾ. ಏನಾ ದರೂ ಮಾಡಿ ಮನೆಯವ‍ರ್‍ನ ನೀನು ಒಪ್ಪಿಸ್ಲೇ ಬೇಕು.” ಗೆಳತಿಯ ಬೆಂಬಲದ ಪ್ರೋತ್ಸಾಹದ ನುಡಿಯಿಂದ ಚಂನಾಗೆ ಸಂತೋಷ ವಾಯಿತು. ಅನಂತರವೂ ಸ್ವಲ್ಪ ಹೊತ್ತಿದ್ದು ಆಕೆ ಹೊರಟು ನಿಂತಳು. “ಈ ಊರಲ್ಲಿ ನೀನು ಇರುವಷ್ಟು ಕಾಲವೂ ನಮ್ಮ ಮನೆಗೆ ಆಗಾಗ್ಗೆ ಬರಬಾರ್‍ದೆ ಸುನಂದಾ?” ಎಂದು ಕೇಳಿದಳು. “ಇನ್ನೆಷ್ಟು ದಿನ ಇಲ್ಲಿರ್‍ತಿನೋ?” “ಯಾಕೆ ಬೆಂಗಳೂರಿಗೆ ಹೋಗ್ಬೇಕೂಂತಿದಿಯೇನು?" “ಮಾಡೋ ಯತ್ನವೆಲ್ಲಾ ಮಾಡ್ಬೇಕಲ್ಲ ಚಂವಾ?” “ನಿಜವೇ. ಆದರೂ ಹೋಗೋಕ್ಮುಂಚೆ ಬಾ.” “ಆಗ್ಲಿ. ನೀನೂ ವಾರಕ್ಕೊಮ್ಮೆ ಬರ್‍ತಿರು." ...ಗೆಳತಿ ಬಂದಾಗ ಸುನಂದೆಗೆ ಸಂತೋಷವಾಗಿತ್ತು, ಆದರೆ ಆಕೆ, ಹೊರಟು ಹೋದ ಬಳಿಕ, ಸುನಂದೆಯ ಮನಸ್ಸನ್ನು ದುಃಖ ಆವರಿಸಿತು. ಚಂಪಾ ವಿದ್ಯಾರ್ಥಿ ದೆಸೆಯಲ್ಲಿ ಪುಸ್ತಕ ಕೀಟವಾಗಿದ್ದಳೇ ಹೊರತು ಎಂದೂ ದಿಟ್ಟೆಯೆಂದು ಹೆಸರು ಪಡೆದಿರಲಿಲ್ಲ, ಆದರೆ ಬದುಕಿನ ಸುತ್ತಿಗೆ-ಪೆಟ್ಟು ಆಕೆ ಯನ್ನು ಉಕ್ಕಾಗಿ ಹದಗೊಳಿಸಿತ್ತು. ವಿದ್ಯಾಭ್ಯಾಸವನ್ನು ಮುಂದುವರಿಸಿ ಅಧ್ಯಾಪಿಕೆಯಾಗಿ ಯಾರಿಗೂ ಹೊರೆಯಾಗದೆಯೇ ಇರುವ ಅಪೇಕ್ಷೆ...ಅದು ಯೋಗ್ಯವಾಗಿತ್ತು, ಪ್ರಶಂಸನೀಯವಾಗಿತ್ತು. ತನಗಾದರೋ ಅದೂ ಇಲ್ಲ. ಒತ್ತರಿಸಿ ಬರುತ್ತಿದ್ದ ನಿರಾಸೆಯ ಸುಳ್ಳಿ ಯಲ್ಲಿ ಸಿಲುಕಿ -ಸುನಂದಾ ಮೌನವಾಗಿ ಗೋಳಾಡಿದಳು. ತನಗಿಂತಲೂ ವಿಧವೆಯಾದ ಚಂಪಾ ವಾಸಿ: ಈ ಅಪಮಾನಿತ ಬದುಕಿಗಿಂತಲೂ ವೈಧವ್ಯ ಮೇಲು...