ಪುಟ:Ekaan'gini.pdf/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ಪುಟ್ಟಿ ಕೂಸು ಸರಸ್ವತಿ : ಅದು ತನ್ನ ಅಸಹಾಯತೆಯನ್ನು ಹೆಚ್ಚಿಸಿರುವ ಇನ್ನೊಂದು ಅಂಶ. ಆದರೂ ತನಗೆ ಪ್ರಿಯವಾದುದು. ಹಿಂದೆಯೊಮ್ಮೆ ದಾಂಪತ್ಯದುಃಖದ ಮಾತು ಬಂದಿದ್ದಾಗ ತಂದೆಯೊಡನೆ ಸುನಂದಾ ಅಂದಿ ದ್ದಳು:'ಮಗುಗೋಸ್ಕರ ಸಹಿಸ್ಕೊಂಡಿದೀನಿ ಅವ್ವಾ, ನಮ್ಮ ಸಂಸಾರದ ವಿಷಯ ಬೇದಿ ಮಾತಾಗ್ಟಾರದು, ನಾನು ಹುಟ್ಟಿದ ಮನೆಗೆ ಕೆಟ್ಟ ಹೆಸರು ಬಾರದು, ಅಂತ ಸಹಿಸ್ಕೊಂದೀನಿ ..' ಆದರೂ ಸಹೆನೆಗೊಂದು ಮಿತಿ? ಆಗ ತಂದೆ ಆಂದಿದ್ದರು: " ಗಂಡಸು ಏನು ತಪ್ಪು ಮಾಡಿದರೂ ನಡೆದು ಹೋಗುತ್ತೆ. ನರಕ ಅನುಭವಿಸ್ಟೇಕಾದ್ದು ಹೆಂಗಸೊಬ್ಬಳೇ. ನೀನು ತುಂಬಾ ಹುಷಾರಾಗಿರ್‍ಬೇಕಮ್ಮ.' ಸುನಂದಾ ಹುಷಾರಾಗಿಯೇ ಇದ್ದಳು. ಆದರೂ ಏನಾಯಿತು? ... ಇಂತಹ ವಿಷಯದಲ್ಲಿ ಯಾವಾಗಲೂ ಹೆಚ್ಚಿನ ಜನ ಹೆಣ್ಣನ್ನೇ ದೂರು ವುದು ಆಶ್ಚರ್ಯಕರವಾಗಿತ್ತು. ಗಂಡಸರು ತನ್ನ ಗಂಡನ ಪರ ವಾದಿಸಿದ್ದರೆ ಅದು ವಿಚಿತ್ರವೆನಿಸುತ್ತಿರಲಿಲ್ಲ.ಆದರ ಹೆಂಗಸರು? ಅವರ ದೃಷ್ಟಿಯಲ್ಲೂ ಕೆಟ್ಟಿರುವುದು ತನ್ನ ನಡತೆಯೇ, ತನಗೆ ಅನ್ಯಾಯವಾಗಿರಬಹುದೆಂದು, ಅವರು ಯೋಚಿಸುವುದೇ ಇಲ್ಲ. ನಿಜ ಸಂಗತಿಯನ್ನು ತಿಳಿದವರು ಯಾರೂ ಇರಲಿಲ್ಲವೆಂದಲ್ಲ, ರಾಧಮ್ಮ, ಕುಸುಮಾ, ಚಂಪಾ ... ಹೀಗೆಯೇ ಬೇರೆ ಕೆಲವರು. ಆದರೆ ಇವರ ಸಂಖ್ಯೆ ಕಡಮೆ.ತಿಳಿದು ಸಹಾನುಭೂತಿ ತೋರುವವರಿಗಿಂತಲೂ ತಿಳಿಯದೆ ಕುಹಕ ವಾಡುವವರೇ ಹೆಚ್ಚು ಜನ. --ಇ೦ತಹ ಯೋಚನೆಯಿಂದ ಸುನಂದೆಯ ಮೆದುಳು ಬಿಸಿಯಾಯಿತು. ಆಕೆ ಮಗುವನ್ನೆತ್ತಿಕೊಂಡು ಅಂಗಳಕ್ಕಿಳಿದು, ತಣ್ಣನೆ ಬೀಸುತ್ತಿದ್ದ ಗಾಳಿಗೆ ಮುಖ ಒಡ್ಡಿದಳು. . . ಮಾರನೆಯ ದಿನ ರಾಮಕೃಷ್ಣಯ್ಯನ ಕಾಗದ ಬಂತು, ತಮಗೂ ಕೃಷ್ಣ ಪ್ಪನವರಿಗೂ ಇದ್ದ ಗೆಳೆತನವನ್ನು ತಿಳಿಯದವರೊಬ್ಬರು ತಮ್ಮಲ್ಲಿಗೆ ಬಂದು ಪುಟ್ಟಣ್ಣ ನಿಮಗೆ ಪರಿಚಯವಂತೆ; ನಮ್ಮ ಪರವಾಗಿ' ಮಾತಾಡ್ರೀರಾ ಎಂ ದಿದ್ದರಂತೆ. ನಮ್ಮ ಪರವಾಗಿ ಎಂದರೆ ಅವರ ಅವಿವಾಹಿತೆ ಮಗಳ ಸಂಬಂ