ಪುಟ:Ekaan'gini.pdf/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಕಾಂಗಿನಿ ಧದಲ್ಲಿ.ಒಂದು ಜಾಗ ಖಾಲಿಯಾದರೆ ಸಾವಿರ ಅರ್ಜಿ.'ಅಂತೂ ಸುನಂದೆ ಯನ್ನು ಕರಕೊಡು ಬೇಗನೆ ಬಂದುಬಿಡುವುದು ಮೇಲು' ತಾನು ಬದುಕಿದ್ದಾಗಲೇ ತನ್ನ ಗ೦ಡನಿಗೆ ಇನ್ನೊಂದು ಮದುವೆಯ ಮಾತು ಹೆಣ್ಣು ಕೊಡುವವರ ಆತುರ...ಸುನಂದೆಗೆ ನಗು ಬ೦ತು. ಆ ಕೆ ಗಟ್ಟಿಯಾಗಿ ನಕ್ಕಳು. ಕೃಷ್ಣಪ್ಪನವರಿಗೆ ದಿಗಿಲಾಯಿತು. “ಸುನಂದಾ" ಎಂದು ಮಗಳನ್ನೊಮ್ಮೆ ಹೆಸರು ಹಿಡಿದು ಕರೆದು, ಅವರೆಂದರು: " ನಾಳೆಯೇ ಬೆಂಗಳೂರಿಗೆ ಹೊರ ಡೋಣ, ಆಗದಾ?”

                ೧೧

ಬೆಂಗಳೂರು ಸಮೀಪಿಸುತ್ತಿದ್ದಂತೆ ಕೃಷ್ಣಪ್ಪನವರು ಕೇಳಿದರು

“ಎಲ್ಲಿ ಉಳ್ಳೊಳ್ಳೋಣ್ಣ ಸುನಂದಾ?"

“ರಾಮಕೃಷ್ಣಯನವರಿಗೆ ತೊಂದರೆಯಾಗೋದಿಲ್ಲ, ಅಲ್ವೆ?”

“ಅವನಿಗೇನು ತೊಂದರೆ? ಹತ್ತರ ಜೊತೀಲಿ ಹನ್ನೊಂದು," "ಹಾಗಾದರೆ ಅವರ ಮನೆಗೇ ಹೋಗೋಣ.'
“ಮಗೂನ ಕರಕೊಂಡು ಸೀನು ರಾಧಮ್ಮನವರಲ್ಲಿಗೆ ಹೋಗ್ತೆಯೇನೋ

ನೋಡು. ನಾನೊಬ್ಬ ಬೇಕಾದರೆ ಷೇಷಾದ್ರಿಪುರದಲ್ಲಿರ್ತೀನಿ." “ಪುನಃ ಹಿಂದಿನ ಮನೆ ಸಮಿಪದಲ್ಲೇ ಇರೋಕೆ ನನಗಿಷ್ಟವಿಲ್ಲಾಪ್ಪ” "ಹಾಗೇ ಆಗಲಿ". "ನಾಳೆ ಬೆಳಗ್ಗೆ ಹೋಗಿ ಒಪ್ಪತ್ತಿದ್ದು ಬಂದರಾಯ್ತು “ನಿನ್ನಿಷ್ಟ". ...ರಾಮಕೃಷ್ಣಯ್ಯನವರ ಮನೆ ಸೇರಿದಾಗ ಅವರು ಸ್ವಾಗತ ಬಯಸಿದರು. "ಬಾ ತಾಯಾ. ಸತ್ಯವಾನನ್ನ ಹುಡುಕಿಕೊಂಡು ಬಂದಿರೋ ಸಾವಿತ್ರಿ, ಬಾ!” ಅವರ ಹೆಂಡತಿಗೂ ಪರಿಚಿತಳೇ ಆದ ಸುನಂದಾ ಮನೆಯೊಳಗಿನ ಗು೦ಪಿ