ಪುಟ:Ekaan'gini.pdf/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ೯೦

 "ರಾಧಮ್ಮ? ಓ ನೆರೆಮನೆಯೋರು,ಸರೀನಮ್ಮ.ಹೋಗಿ ಬಾ. ಆ ಮಹಾಶಯನಲ್ಲಿಗೆ ನಾಡದು ಬೆಳಗ್ಗೆ ಹೊರಟರಾಯ್ತು.”

...,ಕತ್ತಲು ಕಳೆಯುವುದು ಕಷ್ಟವಾಗಿರಲಿಲ್ಲ. ಆದರೆ ಬೆಳಕು ಬಂದಂತೆ ಬೆಂಗಳೂರಿನ ನೆನವುಗಳೂ ಬಳಿಗೆ ಧಾವಿಸಿ,'ನಮ್ಮ ಪರಿಚಯವಿದೆಯೇ? ನಮ್ಮ ಪರಿಚಯವಿದೆಯೇ?'ಎಂದು ಕೇಳಿದುವು.

 ರಾಧಮ್ಮನ ಮನೆಯಲ್ಲಿ ಮಗಳನ್ನು ಬಿಟ್ಟು ಬರಲೆಂದು ಕೃಷ್ಣಪ್ಪನವರೇ

ಹೊರಟರು.ಮೆಜೆಸ್ಟಿಕ್ಕಿನಲ್ಲಿ ಬಸ್ಸು ಬದಲಾಯಿಸಬೇಕಾಯಿತು.ಸರಸ್ವತಿ ಪಕ್ಕದಲ್ಲೆ ಕುಳಿತಿದ್ದ ಹೆಂಗಸಿನ ಸೆರೆಗೆಳೆದಳು.ಹಿಂಬದಿಯಲ್ಲೇ ಇದ್ದ ಯಾವನೋ ಗಂಡಸಿನ ನಗೆಗೆ ಮುಗುಳುನಗೆಯ ಪ್ರತ್ಯುತ್ತರವನ್ನಿತ್ತಳು, ಆದರೆ ಸುನಂದೆಯ ಗಮನವೆಲ್ಲ ತಾನು ಕುಳಿತಿದ್ದ ಬದಿಯ ಬೀದಿಯಲ್ಲೇ ನೆಟ್ಟಿತ್ತು...ಇಷ್ಟು ಹೊತ್ತಿನಲ್ಲಿ ಅವರು ಮನೆ ಬಿಡುವ ಪದ್ದತಿಯಿಲ್ಲ.ಇದು, ಮುಖಕ್ಷೌರ ಮುಗಿಸಿ ಸ್ನಾನಮಾಡಬೇಕಾದ ಸಮಯ...ಆ ಸಿನಿಮಾ ಮಂ ದಿರ,ಅಲ್ಲಿಗೇ ಇಬ್ಬರು ಜತೆಯಾಗಿ ನಾಲ್ಕಾರು ಸಾರೆಯಾದರೂ ಬಂದಿದ್ದರು.

... ಪರಿಚಿತವಾದ ಕಟ್ಟಡಗಳು ಆತನಾಗಿಯೇ ಹೇಳಿರಲಿಲ್ಲವಾದರೂ ತಾನಾಗಿ

ಕೇಳಿ ತಿಳಿದುಕೊಂಡಿದ್ದಾಳೆ.ಬೆಳಗಿನ ಹೊತ್ತು.ಬಸ್ಸಿನಲ್ಲಿ ಹೆಂಗಸರು ಮೂರೇ ಜನ. ಒಬ್ಬಾಕೆಯ ವಯಸ್ಸು ಚಿಕ್ಕದು. ಆಕೆಯ ಸಮೀಪವಾಗಿಯೇ ಗಂಡಸರ ಸೀಟಿನಲ್ಲಿ ಕುಳಿತಿರುವ ಯುವಕನ ಕಣ್ಣುಗಳಲ್ಲಿ ಒಲವು ತುಂಬಿದೆ

ಬಯಕೆಯಲ್ಲ, ಒಲವು.ದಂಪತಿಗಳಿರಬಹುದು.ಹೊಸತಾಗಿ ಮದುವೆಯಾದ
ಗಂಡು-ಹೆಣ್ಣು. 
 ಮುಂದೆಯೊಂದು ಕಡೆ ಅವರಿಬ್ಬರೂ ಇಳಿದರು_ಆ ಯುವಕ ಮತ್ತು

ಯುವತಿ.ಅವರು ದಂಪತಿಗಳೆಂದು ಸುನಂದಾ ಊಹಿಸಿದ್ದುದ್ದೇ ಸರಿಯಾ ಗಿತ್ತು_ಆದರೆ ಜತೆಯಾಗಿರಲು ದಂಪತಿಗಳೇ ಆಗಬೇಕೆಂದುಂಟೆ ?...ಎಂಧ ಯೋಚನೆ! ಸುನಂದೆಯ ಮೈ ನಡುಗಿತು. ಸೀಟಿನ ಮೇಲೆ ನಿಂತು ಹೊರ ನೋಡತೊಡಗಿದ್ದ ಸರಸ್ವತಿಯನ್ನು ಆಕೆ ಗಟ್ಟಿಯಾಗಿ ಹಿಡಿದುಕೊಂಡಳು ಮತ್ತು ಕೈ ಹೊರಹಾಕದಂತೆ ಆ ಕಡೆಗೇ ಲಕ್ಷ್ಯ ನೆಟ್ಟಳು... ...ಮನೆಗೆ ಬಂದ ಸುನಂದೆಯನ್ನು ರಾಧಮ್ಮ ಆದರದಿಂದ ಬರಮಾಡಿ ಕೊಂಡರು.