ಪುಟ:Ekaan'gini.pdf/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೨ ಏಕಾಂಗಿನಿ

ಒಲೆಯ ಮೇಲೆ ಕುದಿಯುತ್ತಿದ್ದ ಕಾಫಿ ನೀರನ್ನೂ ರಾಧಮ್ಮನವರನ್ನೂ ನೋಡುತ್ತಾ ಆಕೆ ಎಂದಳು:
ಸುನಂದಕ್ಕನನ್ನ ಇಲ್ಲೇ ಕಟ್ಟಿ ಹಾಕ್ಬೇಡಿ, ತಿಳೀತೆ? (ಸುನಂದೆಯ ಕಡೆ ತಿರುಗಿ) ಕಾಫಿ ಮುಗಿಸ್ಕೊಂಡು ನಮ್ಮನೆಗೆ ಬಂದ್ಬಿಡಿ."
ಸರಸ್ವತಿಯನ್ನು ಸುನಂದೆಯ ಕೈಗೊಪ್ಪಿಸಿ ಹೊರಬಿದ್ದು, “ಬರ್‍ತೀನಿ” ಎಂದು ಸುನಂದೆಯ ತಂದೆಗೆ ಹೇಳಿ, ಕುಸುಮಾ ತನ್ನ ಮನೆಗೆ ಹೋದಳು.
ಕೃಷ್ಣಪ್ಪನವರು ನಿಟ್ಟುಸಿರು ಬಿಟ್ಟರು. ತಮ್ಮ ಮಗಳ ವಿಷಯದಲ್ಲಿ ಅವರೆಲ್ಲ ತೋರುತ್ತಿದ್ದ ಒಲವು ಎಂತಹ ಹಬ್ಬವಾಗಿತ್ತು ಅವರ ವಯಸ್ಸಾದ ಕಣ್ಣುಗಳಿಗೆ! ಆದರೂ ಕಾಳಸರ್ಪದ ಫೂತ್ಕಾರ ಎಷ್ಟೊಂದು ಸಮೀಪ! ಇದು ನಂದನ ಎಂದು ಹೆಜ್ಜೆ ಇಟ್ಟಾಗ ಮಗ್ಗುಲಲ್ಲೆ ಕಾಣಿಸುತ್ತಿತ್ತು ನರಕ....
ಕೃಷ್ಣಪ್ಪನವರು ಎದ್ದರು.
"ನಾನು, ಮೂರು-ನಾಲ್ಕು ಘಂಟೆ ಹೊತ್ತಿಗೆ ಬರ್‍ಲೆ ಸುನಂದಾ?” ಎಂದು ಕೇಳಿದರು.
ಆಗ ರಾಧಮ್ಮ ತೋರಿದ ದುಗುಡವೊ! ನೋಡುತ್ತಿದ್ದವನನ್ನು ಮೂಕನಾಗಿ ಮಾಡಲು ಅದೊಂದೇ ಸಾಕು.
“ಇನ್ನು ಮೂರು-ನಾಲ್ಕು ದಿವಸ ಸುನಂದಾ ಎಲ್ಲಿಗೂ ಬರೋದಿಲ್ಲ!”
“ಹಾಗಲ್ಲ ತಾಯೀ ನಾಳೆ ಬೆಳಿಗ್ಗೆ ಅವನನ್ನು ನೋಡ್ಬೇಕೂಂತ ಗೊತ್ಮಾ ಡಿದೇವೆ. ಅದಕ್ಕೆ ರಾಮಕೃಷ್ಣಯ್ಯನಮನೇಲಿದ್ದು ಹೊರಡೋದೇ ಅನುಕೊಲ.”
ತಂದೆಯ ವಿವರಣೆಯನ್ನು ಸುನಂದಾ ಪುಷ್ಟೀಕರಿಸಿದಳು.
“ಹೌದು ರಾಧಮ್ನೋರೆ...”

....ರಾಧಮ್ಮ ಹೆಚ್ಚು ಒತ್ತಾಯಿಸಲಾರದೆ ಕೃಷ್ಣಪ್ಪನವರಿಗೆ ಅಂದಳು:

“ಮಧ್ಯಾಹ್ನದ ಊಟಕ್ಕಾದರೂ ನೀವೂನೂ ಇಲ್ಲಿಗೇ ಬನ್ನಿ."
ಮಗಳ ಆ ಸ್ನೇಹಲೋಕ ಅಬಾಧಿವಾಗಿಯೆ ಸಾಗಲೆಂದು ಬಯಸಿ ಕೃಷ್ಣಪ್ಪನೆಂದರು:
“ಕ್ಷಮಿಸಿ ತಾಯೀ. ಅಗತ್ಯವಾಗಿ ಮಾಡಬೇಕಾದ ಕೆಲಸ ಒಂದಿಷ್ಟು ಉಳಿದಿದೆ. ಈಗ ನಾನು ಹೋಗೇ ತೀರ್‍ಬೇಕು.”
ತಮ್ಮ ಮಾತಿಗೆ ಪ್ರತ್ಯುತ್ತರ ಬರದೆ ಇದ್ದುದನ್ನು ಕಂಡು ಮಗಳ ಕಡೆಗೆ