ಪುಟ:Ekaan'gini.pdf/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಏಕಾಂಗಿನಿ ೯೩

ತಿರುಗಿ ಅವರು ಕೇಳಿದರು.

 ಎಷ್ಟು ಹೊತ್ತಿಗೆ ಬರ್‍ಲಿ ಸುನಂದಾ ?”
 ದಿನವನ್ನೆಲಾ ಇಲ್ಲಿಯೇ ಕಳೆಯಬಯಸಿದ ಸುನಂದಾ ಅಂದಳು:
"ಏಳೆಂಟು ಗಂಟೆ ಹೊತ್ತಿಗೆ ಬಾ, ಸಾಲ್ದೆ?”
"ಹೂಂ..

....ಸರಸ್ವತಿ ಮನೆಯ ಉದ್ದಗಲಕ್ಕೂ ಓಡಾಡಿದಳು. ಐದು ನಿಮಿಷ ಗಳಲ್ಲೇ ಆತ್ಮೀಯನಾಗಿದ್ದ ಶ್ಯಾಮನ ಮೇಲೆ ಕುಳಿತು ಕುದುರೆ ಸವಾರಿ ಮಾಡಿದಳು.

ಸುನಂದೆಯ ದೃಷ್ಟಿ ಕಿಟಕಿಯನ್ನು ಹಾದು ತನ್ನ ಮನೆಯತ್ತ ಸರಿಯಿತು. ಆ ಮನೆ!..ಅದರಾಚೆಗಿನ ಬರಿಬಯಲಲ್ಲಿ ಈಗ ಹೊಸದಾಗಿ ಮನೆ ಕಟ್ಟಲು ಅಡಿಪಾಯ ಹಾಕಿದ್ದರು. ವಿಷಮ ದಾಂಪತ್ಯದ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಿದ ತಮಿಳು ಕೂಲಿಗಳಿದ್ದುದು ಆ ಬಯಲಿನಲ್ಲೇ. ಆ ಬಳಿಕ ಶ್ಯಾಮ ಅದನ್ನು ಕ್ರಿಕೆಟ್ ಗ್ರೌಂಡಾಗಿ ಮಾರ್ಪಡಿಸಿದ್ದ.

ಶಾಮನತ್ತ ನೋಡಿ ಸುನಂದಾ ಕೇಳಿದ್ದಳು :

“ಈಗ ಕ್ರಿಕೆಟ್ ಎಲ್ಲಾಡ್ತೀರಾ ಶ್ಯಾಮೂ”
“ಈಗೆಲ್ಲಾ ಸ್ಕೂಲ್ನಲ್ಲೆ ಅತ್ತೆ,” ಎಂದ ಶ್ಯಾಮ.
ರಾಮಯ್ಯನವರು ಆಫೀಸಿಗೂ ಹುಡುಗರು ಶಾಲೆಗೂ ಹೋದ ಬಳಿಕ ಮನದಣಿಯೆ ಮಾತನಾಡಲು ರಾಧಮ್ಮ ಮತ್ತು ಸುನಂದಾ ಇಬ್ಬರೇ ಉಳಿದರು. ಆದರೆ ಕುಸುಮಾ ತನ್ನ ಗಂಡನನ್ನು ಕಳುಹಿಸಿದ ಬಳಿಕ, ಸುನಂದೆಗೆ ಎರಡು ಸಾರೆ ಕರೆ ಬಂತು. ಮಗುವನ್ನೆತ್ತಿಕೊಂಡು ಸುನಂದಾ ಅವರ ಮನೆಗೆ ಹೋದಳು.
 ಕುಸುಮಳ ಮುದ್ದುಮಗು....
 "ಹೆಸರು ಏನಿಟ್ಟಿದೀರಾ?" ಎ೦ದಳು ಸುನಂದಾ.
 "ಸೋಮನಾಥ_ಅಂತ".
 "ಎಷ್ಟು ಪೌಂಡಿದೆ?”
 ಹಾಗೆ ಪ್ರಶ್ನೆ ಕೇಳುತ್ತ ನಗೆ ಬಂತು ಸುನಂದೆಗೆ.
“ಹನ್ನೆರಡು.ಯಾಕ ನಗ್ತಿದೀರಾ?"