ಪುಟ:Ekaan'gini.pdf/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೪ ಏಕಾಂಗಿನಿ

 “ಹಿಂದೆ, ಸರಸ್ವತಿ ಎಷ್ಟು ಪೌಂಡೂಂತ ನೀವು ಕೇಳಿದ್ರಿ, ನಾನು ಪೆಚ್ಚಾಗಿದ್ದೆ."
 “ಓ!” ಎಂದಳು ಕುಸುಮಾ ಅದರ ನೆನವಾಗಿ...
...ಅಲ್ಲಿ ಊಟ. ಇಲ್ಲಿ ಕಾಫಿ ತಿಂಡಿ, ಎರಡೂ ಕಡೆ ಮಾತು. ಕೊನೆಯೇ ಇಲ್ಲವೇನೋ ಎನ್ನಿಸುವಷ್ಟು.
 ಅವರು ಅತ್ಯಂತ ಕಡಮೆ ಮಾತನಾಡಿದ ಒಂದು ವಿಷಯವಿತ್ತು ; ಅದು ಸುನಂದೆಯ ವೈವಾಹಿಕ ಜೀವನದಲ್ಲಿ ಉದ್ಭವಿಸಿದ್ದ ತೊಡಕು.
 ಇಂತಹ ಸ್ನೇಹವಿರುವಷ್ಟು ಕಾಲ ತನ್ನ ವೈಯಕ್ತಿಕ ಸಂಕಟವೆಲ್ಲ ಹುಲ್ಲು ಕಡ್ಡಿಗೆ ಸರಿ_ಎಂದು ತೋರುವಹಾಗಾಯಿತು ಸುನಂದೆಗೆ.
ಆಕೆ ಒಮ್ಮೆಯೂ ಅಳಲಿಲ್ಲ.


ಏಕಾಂಗಿಯಾಗಿ ಹೊಟೆಲಿನಲ್ಲೆ ಉಳಿದರೆ ಹುಡುಕಿಕೊಂಡು ಬರುವವರು ಬಹಳ ಮಂದಿ. ಒಳ್ಳೆಯ ಹೆಣ್ಣಿದೆ, ಬನ್ನಿ-ಎನ್ನುವ ತಲೆ ಹಿಡುಕರು; ರೂಪ ಗುಣ ಸಂಪನ್ನೆಯಾದ ಕನ್ಯೆ ಇದಾಳೆ-ಎನ್ನುವ ಮದುವೆ ದಳ್ಳಾಳಿಗಳು ಮಗಳ ಕೈ ಹಿಡಿದು ಉದ್ದರಿಸಿ_ಎಂದು ಪಾರ್ಧಿಸುವ ಕನ್ಯಾ ಪಿತೃಗಳು ಹೀಗೆ.
ದೇಹಬಯಸಿದಾಗ ಬೆಲೆವೆಣ್ಣಿನ ಬಳಿಗೆ ಹೋಗುತ್ತಿದ್ದ ಪುಟ್ಟಣ್ಣ. ಆತ, ಕೈಗೆ ನಾಲ್ಕು ಕಾಸು ಕೊಡಲು ಸಿದ್ಧನಿದ್ದನೇ ಹೊರತು, ಕೊರಳಿಗೆ ತಾಳಿ ಕಟ್ಟುವುದಕ್ಕಲ್ಲ.
 ಪುಟ್ಟಣ್ಣನ ದೃಷ್ಟಿಯಲ್ಲಿ ಆತನ ವಿವಾಹ ಪ್ರಕರಣವೊಂದು ದುರ್ಘಟನೆ. ಎಷ್ಟು ಬೇಗ ಎಷ್ಟು ಸುಲಭವಾಗಿ ಅದು ಮುಕ್ತಾಯವಾಗುವುದೋ ಅಷ್ಟು ಸಮಾಧಾನ ಅವನಿಗೆ. ಬಹುಮಟ್ಟಿಗೆ ಆತ ತನ್ನ ಸಾತಂತ್ರ್ಯವನ್ನು ಸಾಧಿಸಿದ್ದ, ಆದರೂ ಕೆಲಕ್ರಿಯೆಗಳು ಇನ್ನೂ ಉಳಿದಿದ್ದುವು. ತಾನಾಗಿ ಏನನ್ನೂ ಆ ದಿಕ್ಕಿನಲ್ಲಿ

ಮಾಡಬೇಕಾದ್ದಿಲ್ಲವೆನ್ನುವುದು ಅವನ ಅಭಿಪ್ರಾಯವಾಗಿತ್ತು.