ಪುಟ:Elu Suthina Kote.pdf/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

x


ನನ್ನ ಮಾತು

ನನ್ನ ಮೊದಲ ಕವನ ಸಂಕಲನ 'ಹೃದಯಗೀತ' ಪ್ರಕಟವಾಗಿದ್ದು ನವೆಂಬರ್
೧೯೫೨ರಲ್ಲಿ. ಇದು ನನ್ನ ಎರಡನೆಯ ಕವನಸಂಕಲನ.
'ಹೃದಯಗೀತ'ದಲ್ಲಿರುವ 'ನಿರಾಶೆಯ ಆಳದಿಂದ ಮತ್ತು 'ಕೋಭೆ' ಕವನಗಳಿಗೆ
ಇಲ್ಲಿ ಎಡೆಕೊಟ್ಟುದಕ್ಕೆ ಕಾರಣ ಇಷ್ಟು : ಆ ಸಂಕಲನದ ಮೊದಲ ಹಲವು
ಕವನಗಳಲ್ಲಿ ಒಂದು ಹೊಸ ಅಭಿವ್ಯಕ್ತಿಕ್ರಮದೆಡೆಗೆ ಕವಿಯ ಜೀವ ತುಡಿಯುತ್ತಿದ್ದುದರ
ಸೂಚನೆ ಧಾರಾಳವಾಗಿ ಕಾಣಸಿಗಬಹುದಾದರೂ ನವ್ಯ ಕಾವ್ಯಮಾರ್ಗವನ್ನು
ಆಲಿಂಗಿಸಿಕೊಂಡಿದ್ದು ನಿರಾಶೆಯ ಆಳದಿಂದ' ಕವನವನ್ನು ಬರೆಯುವ ಹೊತ್ತಿಗೆ
ಎಂದೇ ಆ ಕವನಕ್ಕೂ ಅದಾದ ಮೇಲೆ ಬರೆದ 'ಕೋಭೆ'ಗೂ ಈ ಸಂಕಲನದಲ್ಲಿ
ಎಡೆ.
ಉಳಿದ ಕವನಗಳನ್ನು ನಾನು ಬರೆದದ್ದು ಈ ವರುಷದ ಹನ್ನೊಂದು
ತಿಂಗಳ ಅವಧಿಯಲ್ಲಿ ; ಜೋಡಣೆಯ ಕ್ರಮ ಬರೆದ ಕ್ರಮವನ್ನೇ ಅನುಸರಿಸಿಕೊಂಡಿದೆ.
ಈ ಕವನಗಳು ಆಗ, ಈಗ ಪತ್ರಿಕೆಗಳಲ್ಲಿ ಅಚ್ಚಾಗಿವೆ. ಅವುಗಳನ್ನು ತಮ್ಮ

ಪತ್ರಿಕೆಗಳಲ್ಲಿ ಪ್ರಕಟಿಸಿದ 'ಜಯಕರ್ನಾಟಕ', 'ದೀಪದಾನ', 'ಪ್ರಜಾವಾಣಿ', 'ಚಿತ್ರಗುಪ್ತ,
'ಲೇಖಕ' ಮತ್ತು 'ಜನಪ್ರಗತಿ'ಗಳ ಸಂಪಾದಕರಿಗೆ ನಾನು ಕೃತಜ್ಞ

ಅಕ್ಟೋಬರ್ ೧೬ರ ಸಂಜೆ ಶ್ರೀ ಕೆ.ವಿ. ಪುಟ್ಟಪ್ಪನವರ ಅಧ್ಯಕ್ಷತೆಯಲ್ಲಿ
ಮೈಸೂರಿನ ಆಲ್ ಇಂಡಿಯಾ ರೇಡಿಯೋ ಕೇಂದ್ರದವರು ಏರ್ಪಡಿಸಿದ್ದ ಕವಿ
ಸಮ್ಮೇಲನದಲ್ಲಿ ಭಾಗವಹಿಸಿದವರಲ್ಲಿ ನಾನು ಒಬ್ಬ. ಆಗ ನಾನು ಓದಿದ ಕವನ
'ದುರ್ಗಾಷ್ಟಮಿ-ವಿಜಯದಶಮಿ'. ಅದನ್ನು ಇಲ್ಲಿ ಅಚ್ಚು ಮಾಡಲು ಒಪ್ಪಿಗೆ ಕೊಟ್ಟ
ರೇಡಿಯೋ ಕೇಂದ್ರದ ಅಧಿಕಾರವರ್ಗದವರಿಗೆ ನನ್ನ ವಂದನೆಗಳು.
ನನ್ನ ಗೆಳೆಯರ ಪ್ರೋತ್ಸಾಹ ಬೆಂಬಲಗಳಿಲ್ಲದ ಹೋಗಿದ್ದರೆ ಈ ಕವನ
ಸಂಕಲನ ಸಾಧ್ಯವಾಗುತ್ತಿರಲಿಲ್ಲ. ನನ್ನ ಎಲ್ಲ ಉದ್ಯಮಗಳಲ್ಲೂ ನೆರವಾದ,
ನೆರವಾಗುತ್ತಿರುವ ಶ್ರೀಯುತರಾದ ಎಚ್ಚೆಸ್ಕೆ, ಜೀವಿ, ವೈ.ಎನ್.ಕೆ., ಅಡಿಗ ಮತ್ತು
ಜಯಾನಂದ-ಇಂತಹ ಗೆಳೆಯರು ನನಗೆ ದೊರಕಿರುವದು ನನ್ನ ಭಾಗ್ಯ ಅವರ
ಸ್ನೇಹವನ್ನು ನಾನು ಈ ಸಂದರ್ಭದಲ್ಲಿ ಕೃತಜ್ಞತೆಯಿಂದ ನೆನೆಯುತ್ತೇನೆ.
ಈ ಸಂಕಲನಕ್ಕೆ ತಮ್ಮ ಅಮೂಲ್ಯವಾದ ಮುನ್ನುಡಿಯನ್ನು ಬರೆದು ಕೊಟ್ಟು
ಕಳೆ ಕಟ್ಟಿದವರು ಶ್ರೀ ಕೆ. ನರಸಿಂಹಮೂರ್ತಿ, ದೇಶವಿದೇಶಗಳ ನವ್ಯ ಸಾಹಿತ್ಯದ