ಪುಟ:Elu Suthina Kote.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

xiv ನವ್ಯ ಶೈಲಿ ನಮಗೆ ಮೊದಲು ಕಾಣುತ್ತದೆ. ಅಡಿಗರ ಕಾವ್ಯದಿಂದ ಸ್ಫೂರ್ತಿಗೊಂಡು ಅವರ ಶೈಲಿಯಲ್ಲಿ ಸೂಕ್ಷ್ಮವ್ಯತ್ಯಾಸಗಳನ್ನು ಮಾಡಿಕೊಂಡು ಉತ್ಕೃಷ್ಟವಾದ ಕವನಗಳನ್ನು ರಾಮಚಂದ್ರ ಶರ್ಮರು ಬರೆದಿದ್ದಾರೆ. ಅವರ ಇತ್ತೀಚಿನ ಕವಿತೆಗಳ ಈ ಸಂಕಲನಕ್ಕೆ ಚಾರಿತ್ರಿಕವಾಗಿಯೂ ವೈಯಕ್ತಿಕವಾಗಿಯೂ ಮಹತ್ವವಿದೆ. “ಏಳು ಸುತ್ತಿನ ಕೋಟೆ ಮತ್ತು “ತಾಯಿ-ಮಗು” ಕನ್ನಡದ ಮೆಚ್ಚಿಗೆಯ ಕವನಗಳಲ್ಲಿ ಸೇರತಕ್ಕವು. ಈ ಸಂಕಲನದ ಪ್ರಕಟಣೆಯಿಮದ ನವ್ಯಕಾವ್ಯ ಒಬ್ಬ ಕ್ರಾಂತಿಕವಿಯ ಪಂಥ ಮಾತ್ರವಲ್ಲದೆ ಒಂದು ಕಾವ್ಯ ಸಂಪ್ರದಾಯವೂ ಆಗುತ್ತಿದೆ. ಶರ್ಮರ ಸಾಹಿತ್ಯಾಭಿರುಚಿ ನೆತ್ತರಿನಲ್ಲಿ ಹರಿದುಬಂದುದು. ಅವರ ತಂದೆ ಚಂದ್ರಶೇಖರ ಶರ್ಮರು 'ಪ್ರಬೋಧಕ' ಎಂಬ ಪತ್ರಿಕೆಯನ್ನು ನಡೆಸಿ ಹೊಸಗನ್ನಡ ಸಾಹಿತ್ಯದ ಬೆಳವಣಿಗೆಗೆ ತಮ್ಮ ಸೇವೆ ಸಲ್ಲಿಸಿದರು. ಶರ್ಮರು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗ ನಾನು ಅವರನ್ನು ಮೊದಲು ಕಂಡೆ. ಅವರಿಗೆ ಇಂಗ್ಲಿಷ್ ಕಾವ್ಯವನ್ನು ಪಾಠ ಹೇಳುವ ಸುಂಯೋಗವೂ ನನಗಿತ್ತು. ಕಾಲೇಜಿನಲ್ಲಿದ್ದಾಗ ಒಂದು ಇಂಗ್ಲಿಷ್ ನಾಟಕದಲ್ಲಿ ಅವರು ನಾಯಕನ ಪಾತ್ರವನ್ನು ವಹಿಸಿದ್ದರು. ಅವರ ಅಭಿನಯದ ಜಾಣೆ ಮೆಚ್ಚುವಂತಿತ್ತು. ಈಚೆಗೆ ಅವರು ಎರಡು ನಾಟಕಗಳನ್ನು ಬರದು ಪ್ರಕಟಿಸಿದ್ದಾರೆ. ಅವರು ಒಳ್ಳೆ ಕತೆಗಾರರು. ಅಲ್ಲದೆ ನವ್ಯಕಾವ್ಯವನ್ನು ಕುರಿತು ಒಂದು ವಿಮರ್ಶಾಗ್ರಂಥವನ್ನೂ ಸಿದ್ಧಪಡಿಸುತ್ತಿದ್ದಾರೆ. ಅವರ ಮೊದಲ ಕವನ ಸಂಕಲನ, “ಹೃದಯಗೀತ”, ಹೋದ ವರ್ಷ ಪ್ರಕಟವಾಗಿತ್ತು. ಇಷ್ಟು ಬೇಗನೆ ಇನ್ನೊಂದು ಸಂಕಲನ ಬರುತ್ತಿರುವುದು ಅವರ ನೈಜ ಸ್ಫೂರ್ತಿಗೂ ಸಂತತ ಪರಿಶ್ರಮಕ್ಕೂ ಸಾಕ್ಷಿಯಾಗಿದೆ. ಆಧುನಿಕ ಮನಸಿಕಶಾಸ್ತ್ರ ಪರಿಶೋಧನೆಗಳು ಬಹುಮಟ್ಟಿಗೆ ನವ್ಯಕಾವ್ಯದ ರೂಪರೇಖೆಗಳನ್ನು ತಿದ್ದಿವೆ. ಗುಪ್ತಚಿತ್ತದಲ್ಲಿ ಹುದುಗಿರುವ ಲಿಬಿಡೋ ಅಥವಾ ಕಾಮ ವಿವಿಧ ವೇಷಗಳನ್ನು ಧರಿಸದೆ ಬುದ್ಧಿಗೋಚರವಾಗುವುದಿಲ್ಲ. ಈ ಮೂಲಕಾಮವನ್ನು ಇತರ ಮರುಷಾರ್ಥಗಳೊಡನೆ ಮೇಳವಿಸಿ ಜೀವನದಲ್ಲಿ ಸಾಮರಸ್ಯವನ್ನು ಕಮಡುಕೊಳ್ಳಬೇಕು. ಈ ರಚನತ್ಮಕ ಕಾರ್ಯವನ್ನು ಹಿಂದಿನ ಮರಾಣಕಥಗಳು ನೆರವೇರಿಸಿದವು. ಉದಾಹರಣೆಗೆ “ಏಳು ಸುತ್ತಿನ ಕೋಟೆ ಎಂಬ ಕವನದ ಅಜ್ಜಿಕತೆಯನ್ನು ತೆಗೆದುಕೊಳ್ಳಿ, ರಾಜಕುಮಾರಿ ನಲ್ಲನು ಬರಲಾರನೆಂದು ನಿರಾಶಪಟ್ಟು ಆತ್ಮಹತ್ಯೆ ಮಡಿಕೊಳ್ಳುವ ಯೋಚನೆ ಮಡುತ್ತಾಳೆ. ಆದರ ಧೀರನಾದ ಅವಳ ಪ್ರಿಯನು ಎಲ್ಲ ಅಪಾಯಗಳನ್ನೂ ದಾಟಿ ಅವಳೆಡೆಗೆ ಬರುತ್ತಾನೆ. ಅವಳನ್ನು ವರಿಸುತ್ತಾನೆ. ಈ ಕತೆಯನ್ನು ಕೇಳಿದ ಹುಡುಗ ಬೆಳೆಯುತ್ತಾ ಬೆಳೆಯುತ್ತಾ ತನ್ನಲ್ಲಿಯೆ ಆ ನಲ್ಲಿ ದೊರಗುವರನನ್ನು ಕಾಣುತ್ತಾನೆ. ಈ ಕತೆ ಪ್ರೇಮದ ಆವರಣದಲ್ಲಿ ಕಾಮವನ್ನು ಕಟ್ಟಿ ಬೆಳಸುತ್ತದೆ. ಅನುಕಂಪ ಸಾಹಸಗಳಿಂದ ಕಾಮಕ್ಕೂ ಹೊಸದೊಂದು