ಪುಟ:Elu Suthina Kote.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

xvii

ಕಲ್ಪನೆ ಬಂದಾಗ ಆಧ್ಯಾತ್ಮಿಕವಾದ ಪರ್ವತಾಗ್ರ ತಾಯೊಗದಂತೆ ಕಾಣುತ್ತದೆ. ಒಂದೇ ಸಂಕೇತದ ಬೇರೆ ಬೇರೆ ಮುಖಗಳು ಬೇರೆ ಬೇರೆ ಸಂದರ್ಭಗಳಲ್ಲಿ ಕಾಣುತ್ತವೆ. “ಕೊನೆಗಳಿ” ಎಂಬ ಕವಿತೆಯಲ್ಲಿ ಸಂಭೋಗದ ಮೈ ಮರವು ಮರಣಕ್ಕೆ ಸಂಕೇತವಾಗಿ, “ಗಂಡಿಂಗೆ ಹೆಣ್ಣಾಗಿ” ಮೃತ್ಯುಮಾಯೆ ಮನುಷ್ಯನನ್ನು ಕಾಡುವುದನ್ನೂ ಇಲ್ಲಿ ಜ್ಞಾಪಿಸಿಕೊಳ್ಳಬಹುದು.

ಗುಪ್ತಚಿತ್ತದಲ್ಲಿ ಭಾವಗಳು ಕ್ರಿಯೆಗಳು ಚಿತ್ರಗಳು ಸ್ಮೃತಿಗಳು ಹೆಣೆದುಕೊಳ್ಳುವ ಬಗೆಯಲ್ಲಿ ಅನ್ಯಾದೃಶವಾದ ನಾಟಕೀಯತೆಯಿದೆ. ನವ್ಯ ಕವಿ ತನ್ನ ವಿಚಾರವನ್ನು ನೇರವಾಗಿ ಮಂಡಿಸದೆ ಸಂಕೇತಗಳ ದೃಶ್ಯಾವಳಿಯನ್ನು ಮುಂದಿರಿಸುತ್ತಾನೆ. “ತಾಯಿ- ಮಗ” ಎಂಬ ಕವಿತೆಯಲ್ಲಿ ಕವಿಗೂ ಭಿಕ್ಷುಕನಿಗೂ ನಡೆಯುವ ಸಂಭಾಷಣೆಗಳಾಗಲಿ ಸಾವಿನ ಕರಿ ಬಸ್ಸಿನಲ್ಲಿ ಪ್ರವೇಶಕ್ಕಾಗಿ ಭಿಕ್ಷುಕನು ಮಾಡುವ ವ್ಯರ್ಥ ಪ್ರಯತ್ನದ ಈ ಚಿತ್ರವಾಗಲಿ ಎಷ್ಟು ನಾಟಕೀಯವಾಗಿದೆ!

ಅದೋ ಬಸ್ಸು ಕರಿ ಬಸ್ಸು!
(ಕರುಣೆ ಕುಡಿ ಕಾಲನೆದ ಕಲ್ಲಲ್ಲು ಚಿಗುರಿತು)
ಅದೊ ಬಂತು, ಬಂತು!
ಕೊರಳೆತ್ತಿ ಕೈಯೆತ್ತಿ ಕೂಗು; ಹೋಲ್ಡಾನು!
(ನಡುನೀರಿನೊಳಗೆನ್ನ ಕೈಯ ಬಿಡುವನೆ ಕೃಷ್ಣ)
ಹೋಲ್ಡಾನು, ಹೋಲ್ಡಾನು!
ಬಂತು.
ಅಯ್ಯೋ ಹೋಯ್ತು!
ತೆರವಿದ್ದರೂ ಬಸ್ಸು ನಿಲದೆ ಉರುಳಲು ಮುಂದೆ
ಕನಸ ಗೋಪುರದಂತೆ ಎಲುಬು ಕೈ ಕುಸಿಯಿತು.
ಒಲ್ಲದಿನ್ನೊಬ್ಬ ನರ ನಡದಿರಲು ಬಸ್ವವನ
ಹಿಮಗಿರಿಯ ಕಂದರಕೆ ಕರೆದೊಯ್ದಿತು!

“ಜರ ಜರೋ....” “ಢಮ ಢಮಾ” ಇತ್ಯದಿ ಅನುಕರಣ ಶಬ್ದಗಳನ್ನು ಶರ್ಮರು ಹೆಚ್ಚಾಗಿ ಬಳಸಿಕೊಳ್ಳುತ್ತಾರೆ. ಅವರ ಕವನಗಳ ತುಂಬಾ ಅವರು ಕಾಣಿಸುವ ನೋಟಗಳು, ಕೇಳಿಸುವ ದನಿಗಳು, ನನಸುವ ನುಡಿಗಳು, ಚಿತ್ರಿಸುವ ಕ್ರಿಯೆಗಳು, ಮಾಡುವ ಉದ್ಧಾರಗಳು.

ಗುಪ್ತಚಿತ್ತದ ಆಳದಲ್ಲಿ ಮನುಷ್ಯನ ಸಮಗ್ರ ಅನುಭವೂ ಇಳಿದು ಅಡಗುತ್ತದೆ. ಅವನ ಇಂದಿನ ಅನುಭವಗಳೂ ಹಿಂದಿನ ನೆನಪುಗಳು ಓದಿದ ಉದ್ಗ್ರಂಥಗಳೂ