ಪುಟ:Elu Suthina Kote.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

XX ಸಂಕೇತಗಳ ಸಂಯೋಜನೆಯಲ್ಲಿ ನಾಟಕೀಯತೆಯ ಗುಣವಿರುತ್ತದೆಂದು ಮೇಲೆ ಹೇಳಿತಷ್ಟ ಇದಕ್ಕೆ ಅನುಗುಣವಾಗಿ ಛಂದಸ್ಸು ಸ್ವತಂತ್ರವಾಗಬೇಕಾಗುತ್ತದೆ. ಹಳೆಯ ಮಾತಾಗಣಗಳನ್ನೇ ಅನಿರ್ದಿಷ್ಟ ಸಂಖ್ಯೆಯಲ್ಲಿ ಉಪಯೋಗಿಸಿಕೊಳ್ಳುತ್ತಾ ಪಂಕ್ತಿಗಳನ್ನು ಹಿಗ್ಗಿಸಿ ಕುಗ್ಗಿಸಿ ಓಡಿಸಿ ಕುಂಟಿಸಿ ಶರ್ಮರು ತಮ್ಮ ಅರ್ಥದ ಅಭಿವ್ಯಕ್ತಿಗೆ ಛಂದಸ್ಸನ್ನು ಅಳವಡಿಸಿಕೊಂಡಿದ್ದಾರೆ. ಕೆಳಗಿನ ಸಾಲುಗಳಲ್ಲಿ ಬೀಳಿನ ಮತ್ತು ಸಾವಿನ ಅರ್ಥಕ್ಕೆ ಪದಪ್ರಮಾಣದ ಪಂಕ್ತಿಗಳು ಎಷ್ಟು ಚೆನ್ನಾಗಿ ಹೊಂದುತ್ತವೆ! ಚಿಕ್ಕೆ ಮುಟ್ಟಿದ ಹಕ್ಕಿ ರಕ್ಕೆ ಸುಟ್ಟುದನರಿತು ಬುವಿಗೆ, ದೊಪ್ಪನೆ ಬಿತ್ತು ಸತ್ತು! ಈ ಸ್ವತಂತ್ರ ಛಂದೋರೂಪದಲ್ಲಿ ಅಂತ್ಯಪ್ರಾಸಗಳು ಹಲವು ಸಲ ಬರುತ್ತವೆ. ಒಮ್ಮೊಮ್ಮೆ ಪಂಕ್ತಿಯೋಳಗೇ ಆಂತರಿಕಪ್ರಾಸಮಾಲೆಯೇ ಬರಬಹುದು; ಅಂಗರಾಗವ ಬಳಿದು ಆಂಗನೆಯ ಅಂಗಾಂಗಶೃಂಗಾರಕೆಳಸಿದ್ದ ನೇಸರಿನ ಬಂಗಾರ ಕಚಗುಳಿಗೆ ಧವಳಗಿರಿ ಮನದಣಿಯ ನಗುತಿಹುದು! ಇಲ್ಲಿ ಶೃಂಗಾರ ಚೇಷ್ಟೆಯ ವರ್ಣನೆಗೆ ಈ ಶೈಲಿ ಉಚಿತವಾಗಿದೆ. “ದುರ್ಗಾಷ್ಟಮಿ” ಎಂಬ ಕವನದಲ್ಲಿ ಆರತಿ ಎತ್ತುವ ಹುಡುಗಿಯ ಚಿತ್ರದೊಡನ ಆರತಿಯ ಹಾಡೇ ಬರುತ್ತದೆ. ಕೆಲವು ಕಡೆ ನಾಲ್ಕು ಪಂಕ್ತಿಯ ಪದ್ಯಗಳು ದೃಶ್ಯಾಂತರಕ್ಕೆ ಸೇತುವಾಗಿ ಬರುತ್ತವೆ. ಅರ್ಥ, ಚಲಿಸುವ ವಸ್ತು; ಛಂದಸ್ಸು, ಅದರ ಛಾಯೆ. ಶರ್ಮರು ಕಲಾಸುಂದರಿಯ ಪ್ರಣಯಕೇಳಿಯಲ್ಲಿ ಜಗತ್ತಿನ ಜೀವನವನ್ನು ಮರಯುವಂತಹವರಲ್ಲ. ಅವರ “ಕಲೆಗಾರ-ಕನಸು” ಎಂಬ ಕವಿತೆಯಲ್ಲಿ ಸುಂದರವಾದ ಒಂದು ಕಲ್ಪನೆಯನ್ನು ರೂಪಿಸುವುದರಲ್ಲಿ ಜೀವನದ ಸಾವು ನೋವುಗಳನ್ನು ಮರತ ಕಲೆಗಾರ ಕಟ್ಟಕಡೆಗೆ ಎಚ್ಚತ್ತು ತಾನು ನಿರ್ಮಿಸಿದ್ದ ಶಿಲ್ಪವನ್ನೇ ಒಡೆದು ಕೆಡಹುತ್ತಾನೆ. ಕವನ ರಚನೆ ಮಾಡುವಾಗ ಏಕಾಗ್ರಚಿತ್ತತೆ ಬೇಕಾಗುತ್ತದೆ. ನಿಜ. ಆದರೆ ಕವನದ ಸ್ಫೂರ್ತಿ ಜೀವನ. ಇದನ್ನೇ ಮರತರ ಹೇಗೆ? ಶರ್ಮರು ತಮ್ಮ ತಾರುಣ್ಯದಲ್ಲಿಯೇ ಜೀವನದ ವಿಷಯವಾಗಿ ಆಳವಾಗಿ ಯೋಚಿಸಿದ್ದಾರೆ. ಒಟ್ಟಿನಲ್ಲಿ ಇಂದಿನ ಪ್ರಪ೦ಚ ಪರಿಸ್ಥಿತಿ ಅವರ ದೃಷ್ಟಿಯಲ್ಲಿ ನಿರಾಶಾದಾಯಕವಾಗಿದೆಯೆಂದು ಹೇಳಬಹುದು. “ಬೆಳವ, ಉಳಿವ” ಬಡವರ ಕೋಟಿಕೋಟಿಗಳ ಸಮಸ್ಯೆಗೆ ಬೇರೆ ಪರಿಹಾರವೇ ತೋರದ ನೆಲದಾಯಿ”