ಪುಟ:Elu Suthina Kote.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

XXi ಅಣುಬಾಂಬಿನವತಾರಕ್ಕೆ ಪ್ರಾಥಿಸುತ್ತಾಳೆ. ಗೌರಿಶಂಕರವನ್ನೇರಿದ ಸಾಹಸಿಗಳಂತೆ ವಿಜ್ಞಾನ, ಪ್ರಾಪಂಚಿಕ ಜೀವನದ ಸೌಖ್ಯದ ಕಡೆಗೆ ಗಮನಕೊಟ್ಟು ಪ್ರಗತಿ ಸಾಧಿಸಿದೆ. ಆದರೆ ಆತ್ಮಪಾರಿಶುದ್ಧ ಮತ್ತು ಜೀವನಸಾಮರಸ್ಯದ ಕಡೆ ಪ್ರಪಂಚದ ತೀಕ್ಷ್ಮಮತಿಗಳು ತಮ್ಮ ವಿಚಾರವನ್ನು ಸಾಕಷ್ಟು ಹರಿಸುತ್ತಿಲ್ಲ. ನಿರಾಶಯ ಆಳದಿಂದ ನೋಡುವ ಕವಿಯ ಕಣ್ಣಿಗೆ ಜನರು ತಮ್ಮನ್ನು ತಾವೇ ಕೊಂದು ಹೂಳುತ್ತಿರುವ ದೃಶ್ಯ ಕಾಣುತ್ತದೆ. ಜಡಿ ಮಳಯು ಪ್ರಲಯವೃಷ್ಟಿಯಂತೆ ಭಾಸವಾಗುತ್ತದೆ. ಒಂದುಕಡೆ “ಟಪ ಟಪ ಟಪ್ಪ” ಎಂದ ಅದರ ಸುತ್ತಿಗೆಯೇಟು, ಇನ್ನೊಂದು ಕಡೆ “ಹಸಿಯದಂಯಲ್ಲಿ ಕಹಿನೆನಹ ಮೊಳಕೆಗಳು.” ಮಳೆಯು ಮಾಡುತ್ತಿರುವ ಧ್ವಂಸಕ್ಕೆ ಜನರು ಅರ್ಹರೆಂಬ ಧ್ವನಿ ಇಲ್ಲಿ ಹೊಮ್ಮುತ್ತದೆ. ಆದರೆ ಜನರ ಸಂಕಟಕ್ಕೆ ಪಡಿನುಡಿಯಾಗಿ ಏಳುವ ಬೀದಿಯಲ್ಲಿ ನೆನೆಯುತ್ತಿರುವ ಮುದಿ ನಾಯಿಯ ನರಳುವಿಕೆಯ ವರ್ಣನೆಯಲ್ಲಿ ಕವಿಯ ಮನಸ್ಸಿನ ಅನುಕಂಪ ವ್ಯಕ್ತವಾಗುತ್ತದೆ. ಕವಿಯ ನಿರಾಶ ಕಳೆಯುವ ಸೂಚನೆಗಳು ಎರಡು ಮುರು ಕವಿತೆಗಳಲ್ಲಿ ಬರದೆ ಇಲ್ಲ. ಗೌರಿಶಂಕರವನ್ನು ಹತ್ತಿದನೆಂದು ಬೀಗುವ ಮನುಷ್ಯ ತನ್ನ ಆಂತರಿಕ ಭೀತಿ ದೌರ್ಬಲ್ಯಗಳ ಪರ್ವತವನ್ನು ಏರಬೇಕೆಂದರಿತು ಕೊಂಡು ನಮ್ರನಾಗುತ್ತಾನೆ. ನಾಡಿನ ಜನರು ಧೀರಶೂರರಾಗಲೆಂದು ದುರ್ಗಿಯ ವರದಿಂದ ಬೊಂಬೆಗಳಿಗೂ ಜೀವವನಿತ ದೌಪದಿಯಲ್ಲಿ ಕವಿ ಬೇಡುತ್ತಾನೆ. ಹೇಡಿ ತರ ಕಡೆಗೆ ಫಲುಣನಿಗೆ ಸಾರಥಿಯಾಗಿ ಯುದ್ಧ ಭೂಮಿಗೆ ಹೋಗುತ್ತಾನೆ. ಕವಿಯ ದೂರದೃಷ್ಟಿಗೆ ರಾಮರಾಜ್ಯ ಮರಳಿ ಮರಳಿ ಭೂಮಿಯಲ್ಲಿ ಸ್ಥಾಪಿತವಾಗುವಂತೆ ಕಾಣುತ್ತದೆಯೆಂದು “ಕೂಡೆಟಾ' ಎಂಬ ಕವಿತೆಯ ಆಧಾರದ ಮೇಲೆ ಹೇಳಬಹುದು. ಈ ಸುಂದರ ಕವನದಲ್ಲಿ ಆಷಾಢ ಮೇಘಗಳ ಸಂಚಿಗೆ ಸಿಕ್ಕಿ ಚಂದ್ರ ಸರಯಾಗುತ್ತಾನೆ. ಕ್ರಾಂತಿವೃಷ್ಟಿ ಮೊದಲು ಹಿತವಾಗಿ ಕಡೆಗೆ ಇತಿಮಿತಿಯಿಲ್ಲದೇ ಸುರಿಯುತ್ತಾ ವಿನಾಶಕಾರಿಯಾಗುತ್ತದೆ. ಕಡೆಗೆ, ಮಾತನಾಡಿ ಆಡಿ ಆಡಿ ಮೂಕನಾದ ಮನುಜನಂತೆ ಬಿಡದೆ ಸುರಿದ ಮಳೆಯು ಕೊನೆಗು ಸುಮ್ಮನಾಯಿತು... ಮತ್ತೆ ಸೃಷ್ಟಿ, ಮತ್ತೆ ಅದೇ ಸುಧಾ ವೃಷ್ಟಿ! ಹಿಟ್ಲರ್ ನರಕಾಸುರರು ಧ್ವಂಸವಾಗಿ ಮತ್ತೆ ಹರ್ಷ “ದೀಪಾವಳಿ” ಯಲ್ಲಿ ಧರ ಬೆಳಗುತ್ತದೆ. ಈ ನವ್ಯಕತೆಗಳನ್ನು ಸಾಹಿತ್ಯ ಪ್ರೇಮಿಗಳು ಸ್ವಾಗತಿಸುವರೆಂಬ ಭರವಸೆ ನನಗಿದೆ. ಸಂಪ್ರದಾಯ, ಕ್ರಾಂತಿ, ಮಾರ್ಗಗಳು ಮಾತ್ರ ಗಮ್ಯ, ಜೀವಂತ ಕಾವ್ಯ ಯಾವ ಮಾರ್ಗದಲ್ಲಿ ರಚಿತವಾದರೂ ಕಾವ್ಯ ಉತ್ತಮವಾದುದಾದರೆ ಸರಿ. ಕಾವ್ಯ