ಪುಟ:Elu Suthina Kote.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Xxii ಉತ್ತಮವಾಗಲೆಂದೇ, ಕಾವ್ಯದಲ್ಲಿ ಜೀವ ಸೆಲೆಯೊಡೆಯಲೆಂದೇ, ಕ್ರಾಂತಿಕವಿಯೂ ಸಂಪ್ರದಾಯವನ್ನು ಬಿಡುವುದು. ಆಳವಾಗಿ ಯೋಚಿಸಿ ನೋಡಿದರೆ ಸಂಪ್ರದಾಯವನ್ನು ನಿರ್ಜೀವವಾಗಿ ಅನುಕರಿಸುವ ಪದ್ಯಕರ್ತನಿಗಿಂತಲೂ ಸಂಪ್ರದಾಯಸ್ತೋತವನ್ನೇ ತಿರುಗಿಸಿ ಹರಿಸಿಕೊಂಡು ಹೋಗುವ, ಜೀವಂತ ಕಾವ್ಯದಿಂದ ಸಂಪ್ರದಾಯವನ್ನು ಬೆಳೆಸುತ್ತ ಹೋಗುವ ಕ್ರಾಂತಿಕವಿಯೇ ಸಂಪ್ರದಾಯದ ರಕ್ಷಕನೆಂಬ ಹೆಸರಿಗೆ ಹೆಚ್ಚು ಅರ್ಹ. ಕನ್ನಡದ ಜೀವಂತ ಕಾವ್ಯದ ಸಂಪ್ರದಾಯ ನವ್ಯ ಕವಿಗಳ ಕೈಯಲ್ಲಿ ಮುಂದುವರಿಯುತ್ತಿದೆ. ಕೆ. ನರಸಿಂಹಮೂರ್ತಿ