ಪುಟ:Elu Suthina Kote.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಳು ಸುತ್ತಿನ ಕೋಟೆ ಈ ಚೆಲುವೆ, ಬಾಲೆ! ಕೈಬೆರಳು ಸೀರೆ ಸೆರಗಿನ ತುದಿಯ ಜೊತೆಗುಂಗುರದ ಆಟವಾಡಿತ್ತು; ಅಂತೆ ಕನ್ನೆಯ ಮನಸು ಯಾವುದೋ ಬಯಕೆ ಸೆರಗಿನ ಅಂಚನೆಡೆಬಿಡದೆ ಕಾಡಿತ್ತು. ಅಯ್ಯೋ, ಅಯ್ಯೋ ಪಾಪ, ಎದೆಯ ಅಂಗಣದಲ್ಲಿ ನೂರು ಸೂ‌ರ ತಾಪ, ಕೋಪ, ಪ್ರತಾಪ ಅಬಲೆಯೆದೆ ಬಾಡಿತು; ಮುಖ ಅಜ್ಜಿ ಹೂವಾಗಿ ನೋಡಿತು ಕರುಣೆಯನು ಬೇಡಿತು! a ಮಾತಿಲ್ಲ, ಮಾತುಕತೆಯಿಲ್ಲ ನಮ್ಮ ನಡುವಿನೊಳು; ಕಣ್ಣು ನುಡಿದಿತ್ತು ಎದೆಯ ಸಿರಿಬಯಕೆಯನ್ನು! ನಿಸ್ತಂತು ವಾರ್ತಾಗ್ರಾಹಕ ನಾನು! ಮಾತಿದ್ದರೇನು? ಇರದಿದ್ದರೇನು? ನಾನಾಗ ಕಂಡೆ ಬೆತ್ತಲೆ ಹೆಣ್ಣ: ಅವಳ ನಗ್ನ ಪೂರ್ಣ, ಸಂಪೂರ್ಣ ನಗ್ನತೆಯ ಬೆಳಗಿತ್ತು ಕಣ್ಣ ಸೆಳೆಯುವ ಬಣ್ಣ ಬಣ್ಣಗಳ ನಿಯಾನ್ ದೀಪ. ತೆರೆದ ಪುಸ್ತಕದಂತೆ ಸ್ಪಷ್ಟ ರೂಪ! ಮುಚ್ಚುವರೆಯಿರಲಿಲ್ಲ; ಭಾವ ಸೂಚಿಸಲಿಲ್ಲ. ಬಿಚ್ಚಿ ನುಡಿದಿತ್ತು ಮೈ ರೋಮ ರೋಮದ ಬಯಕೆಕತೆಯನು ರಾಮ, ರಾಮ!