ಪುಟ:Elu Suthina Kote.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

& ಏಳು ಸುತ್ತಿನ ಕೋಟೆ

(ಇರಬೇಡವೇ ಅದಕೆ ಗೋಡೆಯಾಧಾರ?)
ಢಮಢಮಾ! ಢವಢವಾ ಢಮಢಮಾ!
ಅಮ್ಮಾ!
ತುಡಿಯುತಿದೆ ಎದೆ ತಬಲ!
ಚೋಮ ಬಡಿಯಲೆಂದೇ ಅಬಲೆ
ಬಾಲೆಯ ಚರ್ಮದೊಳು ತಮಟೆಯನು ಮಾಡಿ
ಕೊಟ್ಟಹರು: ಹೌದು, ಚೋಮನ ದುಡಿ!
ಥಕಥಕಿಟ ಥೈ ಥೈ ಥಕಥಕಿಟ ಥೈ ಥೈ!
ಅವೇಶದೊಳು ಬೀರು, ಟ್ರಂಕು, ಹಾಸಿಗೆ, ಕಾಗದದ ಕಂತೆ
ಕುಣಿಯತೊಡಗಿವೆ, ಅದೋ ರೆಡಿಂಡಿಯನರಂತೆ!

ಬಯಕೆಮಗು ಮೈಯನರಳಿಸುತಿರಲು
ಬಿರಿಯದೇ ದಾಳಿಂಬೆಯಂತೆ ಬಸಿರು?
ಬಲೂನದೊ ಬಳೆಬಳೆದು ಬ್ರಹ್ಮಾಂಡವಾಗಿರಲು
ಯಾವ ಪಂಥದು ಇನ್ನು ತುಂಬುತಿದೆ ಉಸಿರು?
ಎದೆ ಕೋಪದೊಳು ಸ್ವಿಚ್ಚನೊತ್ತಲು ಪ್ರಲಯ!
ಪರಮಾಣು ಸಿಡಿದರೆ?
ಹೀರೋಷಿಮಾ, ನಾಗಸಾಕಿಹೆಣ! ರಣರಣ! ಭಯಗ್ರಸ್ತ ಎದೆ ತುಡಿದರೆ
'ಬಾ' ಎಂದೆ; ಬಾಲೆ ಬಂದಳು ಒಳಗೆ.
ಮರೆಯಾಯ್ತು ಅರೆಘಳಿಗೆಯೊಳೆ ಎಲ್ಲ ಧಾಂಧಲೆ!
ಮುಗುಳ ನಕ್ಕಳು ಬಾಲೆ
ಬಲು ಚೆಲುವೆ! ಚಂಚಲೆ!

****