ಪುಟ:Elu Suthina Kote.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಳು ಸುತ್ತಿನ ಕೋಟೆ ಎಲ್ಲ ಬಗೆ ರೋಗಗಳ ಪೋಸ್ಟರನು ಮೆರೆಯುವೆವು ಮೈಯ ಮೇಲೆ. ನಾವು ಸರ್ವತ್ರವ್ಯಾಪಕರಯ್ಯ; ಇಳೆಯ ಹುಳುಗಳ ಬಾಳ ದುಃಖೋಷ್ಟಮಾಪಕರು! ಹೆರೆದಷ್ಟು ಬೆಳೆವಂಥ ಮುಖದ ಕೂದಲಿನಂತೆ, ಹಲ್ಲಿ ಬಾಲದಂತೆ ಇದು ಬೆಳೆವ, ಉಳಿವ ಪಡೆ. ಇದಕಿರದು, ತಿಳಿಯೋ, ತಡೆ! ಜಗದಗಲ, ಯುಗದಗಲ ನಮ್ಮದೇ ಸಂತಾನ ಕಾಣ ಸಿಗುವುದು ನಿನಗೆ ಇಲ್ಲಿ, ಅಲ್ಲಿ. ಚರ್ಚು ದೇಗುಲದಲ್ಲಿ ನಿಲ್ದಾಣದಲ್ಲಿ! 'ದ್ಯಾವಾ ಪೃಥಿವ್ಯೂರಿದಮಂತರಂ ಹಿ ವ್ಯಾಪ್ತಂ ತ್ವಯೇಕೇನ ದಿಶಶ್ಚ ಸರ್ವಾಃ ಓ, ವಿಶ್ವರೂಪಿ! ಚರ್ಚು, ದೇಗುಲವೆಂದೆ..... ನಿನದೆಂಥ ಬೇಡಿಕೆ? ಯಾರ ಬೇಡುವೆ ನೀನು?' 'ದೇವಾಧಿದೇವನೊಳು ಬಿಕ್ಕೆ ಬೇಡುವ ಜನವ; ಕೋಡು ಮೂರು ಕಾಸ ಮಡಗು ಬಡವನ ಮೇಲೆ ಈಟಿಸ್ವಾಸ! ಬಿಕ್ಕೆ ನೀಡುವನಲ್ಲಿ; ದಯೆಯಿಡೋ, ದಯಾಮಯ ಕರೆದೊಯ್ಯ ಬಾರ, ಅಂತವಿರದಾನಂದವಿರುವ ಆ ಮಂದಿರಕೆ ಹಿಮಗಿರಿಯ ಕಂದರಕೆ ಕರೆದೊಯ್ಯ ಬಾರ!