ಪುಟ:Elu Suthina Kote.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೌರಿಶಂಕರ

ತೆರದ ಅಂಗಡಿ ತೆರದಿ ಮಲಗಿಹಳು ತರಳೆ; ಸುಖನಿದ್ರೆ ಮೈಮರೆತ ಮುಗುದೆ ಮೈ ಮೇಲೆ ನಗೆ ಬಿಳಿಯರಳು. ಮಗ್ಗಲಿಗೆ ಮೈಯೆಲ್ಲ ಕಣ್ಣಾಗಿ ನಿಂತವನ ಗೆದ್ದ ಹುಂಜದ ನೋಟ! ಅದನರಿಯದಿವಳು, ದಿಟ, ಸ್ವಪ್ನಮುಗ್ಧ ಮೊಲೆಕೋಡುಗಳು ಹೊಟ್ಟೆಯಿಳಿಜಾರು ತೊಡೆಕಣಿವೆ. ಹೆಣ್ಣ ಮೈ ಕಟ್ಟಕಡೆ ಗುಟ್ಟಿನರಿವೆಯ ತೊಡೆದು ಮಲಗಿರಲು ನೋಡುವದು ದಣಿವೆ! ಸಿರಿಚೆಲುವ ವಿಸ್ತರಕೆ ಸಾರ್ವಭೌಮನು ನಾನು! ರತಿ ಪ್ರಕೃತಿ ನನ್ನ ಸತಿ. ಜಗದ ಶತಮಾನಗಳ ನೀರಡಿಕೆ ಇಂದಾರದೇನು? ಸುವ್ಯಕ್ತ ಗುಹ್ಯ ಹೇ, ಅಬಲೆ ನಿನ್ನ ಗೆದ್ದಾಯ್ತು. ಮುಂದೇನ ಗೆಲಲೆ? 9 ಗೌರಿಶಂಕರವೊಂದು ಉತ್ತುಂಗ ಶೃಂಗ. ಅಂಗರಾಗವ ಬಳಿದು ಆಂಗನೆಯ ಅಂಗಾಂಗ ಶೃಂಗಾರಕೆಳಸಿದ್ದ ನೇಸರಿನ ಬಂಗಾರ ಕಚಗುಳಿಗೆ ಧವಳಗಿರಿ ಮನದಣಿಯ ನಗುತಿಹುದು! ಎಲ್ಲೆಲ್ಲು ಬಿಳಿ ಹಲ್ಲು, ನಕ್ಕ ಕಿಲಕಿಲ ಸದ್ದು. ಕೋಡುಗದ್ದುಗೆಯೇರಿ, ನೋಡು, ಮಾನವ ನಿಂತ!