ಪುಟ:Elu Suthina Kote.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

O ಏಳು ಸುತ್ತಿನ ಕೋಟೆ (ಮುಗಿಲು ಮುತ್ತುವ ಮರದ ತುಟ್ಟ ತುದಿಗಿದೆ ಹದ್ದು) ನರಪ್ರಕೃತಿಗಳ ನಡುವೆ ನಡೆದ ಸಮರದ ಅಂತ. ನರ ಗೆದ್ದ ಪಟ್ಟಾಭಿಷೇಕಕಣಿಮಾಡಿಯಾಯ್ತಿ? ವಾದ್ಯಮಂಗಳವೆಲ್ಲಿ? ನುಡಿಯಿರಿ. ಬಾಂದಳವು ಬಿರಿವವೋಲು ಮದ್ದಲೆಯ ಬಡಿಯಿರಿ! 2 ಬುವಿ ಬಾನ ಕೂಡಿಸಿತು ನರಕುಲದ ಜಯಕಾರ. ಹೊಗಳು ಮಾತಿನ ಗಾಳಿ ಕುಡಿದ ನರನೆದೆಚೀಲ ಬರಬರನೆ ಉಬ್ಬಿತು. ಬಳಬಳೆದು ಬ್ರಹ್ಮಾಂಡವಾಗಿ ಮಾನವಕುಲವ ಬರಸೆಳೆದು ತಬ್ಬಿತು. ಹೋ, ಆನಂದಂ! ಪೇರಾನಂದಂ! ತಿರೆವೆಣ್ಣೆ ನೀನು ನನ್ನವಳಿನ್ನು, ಅಬಲೆ ನಿನ್ನ ಗೆದ್ದಾಯ್ತು. ಮುಂದೇನ ಗೆಲಲೆ? ಸೂಜಿಮೊನೆ ಗಾಳಿ ಎದೆಬಲೂನನು ನೂರು ಕಡೆ ಭೇದಿಸಿತು. ಹಿಗ್ಗಿದೆದೆ ಕುಗ್ಗಿತು. ಸಂಭೋಗದಾವೇಗ ಅರಘಳಿಗೆಯುನ್ಮಾದ! ಬಯಕೆ ಕಾವಿಗೆ ಅರಳಿದೆದೆ ಮೈ ನೆಲಕುರುಳಿ ರೋದಿಸಿತು. ಗದ್ದುಗೆಯನೇದ್ದವನು ದೊರೆಯಲ್ಲ, ಕಿಂಕರ! ಶಂಕೆ ಮೂಡಿದ ಚಣವೆ ಗೌರಿಶಂಕರ ಶೃಂಗ ನೆಲಕೆ ಕುಸಿಯಿತು, ಒಂದೆ ಅಳಿನೆತ್ತರವಾಯ್ತು; ಕೈಗೆ ಹತ್ತಿರವಾಯ್ತು! 'ಯಾರಲ್ಲಿ? ನಗಬೇಡಿ. ದಮ್ಮಯ್ಯ, ನಿಮ್ಮ ಹೆಸರೇನು ಹೇಳಿ? 'ಸಿಳ್ಳು ಹೊಡೆದಿದೆ ಗಾಳಿ. ಹೆಣ್ಣು ಕನವರಿಸುತಿದೆ; ಅವಳು ಬಲು ಮಾತಾಳಿ. ಅದಕಿಷ್ಟು ಬೆದರಬೇಕೆ?'