ಪುಟ:Elu Suthina Kote.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೌರಿಶಂಕರ 02 'ಇದು ಎಂಥ ಕನವರಿಕೆ: ನಿನ್ನ ಎದೆ ಬಿತ್ತರದಿ ಇದೆ ಗೌರಿಶಂಕರ ಗೆಲ್ಲು, ಅದನೇರಿ ನಿಲ್ಲು!” ತುಡಿವ ತಬಲದ ಒಳಗೆ ಏನಿದೇನಿದು ಮೊಳಗು? ಹೃದಯಸಾಗರಮಥನ ಎಡೆಬಿಡದೆ ನಡೆದಿದೆ! ಯಾವ ರಾಕ್ಷಸ ಕುಲವೊ ಎದೆಗಡಲ ಕಡೆದಿದೆ! ಪಾತಾಳದಾಳದಿಂದೆದ್ದು ಬರುತ್ತಿವೆ, ನೋಡು, ನೂರಾರು ಭೀತಿಗಳು, ಲಕ್ಷ ಆಶಂಕೆಗಳು, ಕೋಟಿ ದೌರ್ಬಲ್ಯಗಳು ಪ್ರಶ್ನೆಗಳ ಜೊತೆಗೆ! ಒಂದೊಂದು ಮಲೆಯಾಗಿ ಇನ್ನೊಂದರೊಡಗೂಡಿ ಕೊನೆಗೊಂದು ಉತ್ತುಂಗ ಗೌರಿಶಂಕರವಾಯ್ತು? ಕೊರಳ ಮುರಿದರು ನರನ ನೋಟಕೆಟುಕದ ಶೃಂಗ ತೊಟ್ಟ ಮುಕುಟ ಅಚಿಂತ್ಯದಲ್ಲಿ 'ಯಾರಲ್ಲಿ? ಆ ಶೃಂಗದಲ್ಲಿ? ಬೆಳಗೊಳದ ಗೊಮ್ಮಟನ ಬೆಳಗುಮೊಗ ಹೊತ್ತವರು! ನರರೋ, ನಾರಾಯಣರೊ?” “ಅವರೆ, ಮಗು? ಉತ್ತುಂಗ ಶೃಂಗವನು ಗೆದ್ದ ಉತ್ತಮರವರು! ನರರಾಗಿ ಜನಿಸಿದರು ಕೊನೆಗೆ ನಾರಾಯಣರು! ಮುಂದೇನ ಗೆಲಲೆಂದೆ, ಇದ ಗೆಲ್ಲು. ಗೆದ್ದು ಗೆದ್ದವರ ಜೊತೆಯಾಗಿ ನಿಲ್ಲು!” 'ಕಳ್ಳು ಕುಡಿದಮಲೇರ ಈ ಬಾಯಿ ದುಡುಕಿದುದ ಕ್ಷಮಿಸು, ಓ ತಾಯಿ!