ಪುಟ:Elu Suthina Kote.pdf/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದುರ್ಗಾಷ್ಟಮಿ-ವಿಜಯದಶಮಿ

ದುರ್ಗಾಷ್ಟಮಿಯ ಸಂಜೆ; ಕೆಂಪೇರ ಮುಗಿಲೊಂದು ಕರ್ಪುರದ ಬೊಂಬೆ! ಮನೆಮನೆಯೊಳೂ ಮುಗ್ಧ ಮನ ತುಂಬಿ ನಿಂತಿರುವ ಚಂದನದ ಮಾಟ- ದಿಟ, ಬಲು ಚಂದ ನೋಟ. ನೀತಿ ಬಲಿದುದೊ, ಶಾಂತಿ ರೂಪಾಯೊ ಎನುವಂತೆ ನಿಂತವನು ಬಾಹುಬಲಿ; ನೆರೆಗೆಲ್ಲುಮಿತ್ತನಖಿಳೊರ್ವಿಯನ್‌! ಇವನು ಕಲಿ. ಹೊಯ್ ಸಳನೆ ನುಡಿಗುಡುಗನೊಡಗೂಡಿ ಮಿಂಚೊಂದು ಥಳಥಳನೆ ನುಗ್ಗಿ ಬರಲುಳಿವುಂಟೆ? ಕೊಲಬಂದ ಹೆಬ್ಬುಲಿ ಸತ್ತು ಬಿದ್ದಿದೆ ನೋಡು ಸಳನ ಮುಂದೆ. ಇವನು ಭಾರ್ಗವ. ಕ್ಷಾತ್ರವಧೆಗೆಂದೆ ಸಿಡಿದೆದ್ದುದದೆ ಮುನಿವರನ ಗಂಡುಗೊಡಲಿ. ಇದು ಟ್ಯಾಂಕು, ಮೋಟಾರು ಬಾಂಬರ್ ಇದು ಫೈಟರು. ಬೂಟುಕಾಲಿನ ಸೇನೆ ರಣರಂಗದೆಡೆಗೆ ಮೊಗ ತಿರುಹಿ ನಿಂತಿದೆ ನೋಡು! ಕಿವಿಗೊಟ್ಟು ಕೇಳು; ಸರಸ ವೀಣಾಧ್ವನಿಯ ಮಂಜುಳದ ಹಾಡು! ಅರೆಘಳಿಗೆ ತಾಳು. ಆರತಿ ಎತ್ತಿರೆ ನಾರಿಯ ರಮಣಗೆ ಸಮರಕೆ ಹೊರಟ ಧುರಂಧರೆಗೆ