ಪುಟ:Elu Suthina Kote.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬ ಏಳು ಸುತ್ತಿನ ಕೋಟೆ ಬಿಲ್ಲು ಬಾಣವನಿಟ್ಟು, ಉಕ್ಕು ಕವಚವನುಟ್ಟು ಹೊರಟಾನೋ ಓಗೊಟ್ಟು ಧರ್ಮದ ಕರೆಗೆ. ಹಣೆಗೆ ಕುಂಕುಮವಿಟ್ಟು ಹರಸುವರು ಕನೈಯರು! ಸೀರೆ ಜರತಾರಿ ಲಂಗದ ಅಗ್ನಿಜಸ್ಯೆಯರು! 9 'ಶತಮಾನಗಳನೆಡವದೆಯೆ ದಾಟಿ ದ್ವಾಪರಕೆ ಈ ಮರಕೆ ಬಾ.' “ಓ, ವ್ಯಾಸ ಸಾಕು ಪರಿಹಾಸ ಸವಿಗನಸ ಲಾಸ. ಜಲಧಿ ಮಧ್ಯದ ಕುರುವವೋ ಮೇಣ್ ಇದು ಪಟ್ಟಣವೊ?' 'ಪಾಂಚಾಲನಗರವಿದು. ನಡೆ ಮುಂದೆ. ಇದು ದ್ರುಪದನರಮನೆ.' 'ಯಾರವಳು ಧ್ಯಾನಮಗ್ನೆ? ಸಕಲ ಸೃಷ್ಟಿಗೆ ಕಳಸದಂತಿರುವ ಲಾವಣ್ಯವತಿ ಕನ್ಯ!” “ಅವಳೆ ಪಾಂಚಾಲಿ, ಅಗ್ನಿ ಜನ್ಯ' 'ಪಾರ್ಥಾರ್ಥಮೇವ ಹಿ ಮಯ್ಸಷ ಕೃತಃ ಪ್ರಯತ್ನ ಜನಕನಿದ ನುಡಿವ ರಸಘಳಿಗೆ ಬಾರದೆ ಎಂದೆ ದೌಪದಿಯ ಚಿಂತೆ? ಚಂದನದ ಈ ಮಾಟವೇಕೆ? ಫಲ್ಗುಣನು ಸಿಗದಿರಲು ಬರಿ ಬೊಂಬೆ ಸಾಕೆ?' 'ಗರಿ ಕಂಡ ಕಲ್ಪನೆಯು ಮರಳಿ ಗೂಡಿಗೆ ಬಂತೆ? ಪಾಂಚಾಲಿಕೆಯು ದುರ್ಗೆ; ಪಾಂಚಾಲಿ ಭಕ್ತ. ಕನ್ಯ ಧ್ಯಾನಾಸಕ್ತ ನುಡಿವ ಮಂತ್ರವ ಕೇಳು; ಅಸುನೀತೇ ಪುನರಸ್ಮಾಸು ಚಕ್ಷುಃ ಪುನಃ ಪ್ರಾಣಮಿಹನೋ ದೇಹಿ ಭೋಗಮ್! ಜ್ಯೋಕ್ಷಶ್ಯಮ ಸೂರೆಮುಚ್ಚರಂತಮನುಮತೇ ಮೃಳಯಾನಃ ಸ್ವಸ್ತಿ! ಪ್ರಾಣದಾಯಿನಿ ದೇವಿ ಮೈ ತಳೆದು ಬಾ