ಪುಟ:Elu Suthina Kote.pdf/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨ ಏಳು ಸುತ್ತಿನ ಕೋಟೆ ಹತ್ತಿ ಹೆಜ್ಜೆಯನಿಡುತ ಎದೆಯ ಬಳಿ ಸುಳಿದವಳು ಮನೆಯ ಹೆಬ್ಬಾಗಿಲನು ಹೊರ ಜಗತ್ತಿನ ಮೊಗಕೆ ಅಪ್ಪಳಿಸಿ ಮದುಮಗನ ಎದೆ ತುಂಬಿ ನಿಂತಳು. 'ಆನಂದ ಕಾಣೆಯ? ಅವನ ಹೆಂಡತಿ, ಭಾಗ್ಯ ಏಳು ಮಕ್ಕಳ ತಾಯಿ ತಿರೆ ತೊರೆದಳು!” 'ಓ, ಪಾಪ!” ಮರುಕ ಕಿರುದೆರೆಯಾಟ ಅರೆಘಳಿಗೆವರೆಗೆ, ಮನೆಗೆ ಮರಳಿತು ಮನವು ಮನೆ ತುಂಬಿ ನಿಂತವಳ ಮೈ ಚೆಲುವ ಧ್ಯಾನಕ್ಕೆ! ನೇಹ ಮೋಹ ನಗುವು ಅಳುವು ಇಲ್ಲದೊಂದು ಬೀಡಿಗೆ ಬೇಡ ಹೋದ ಕಾಡಿಗೆ. ವಾಕ್ಚತುರನ ಅರ್ಥತರ್ಕಪೂರ್ಣ ವಾದಸರಣಿಯಂತೆ ಹಗಲು ಇರುಳು ಬೆಳಕು ನೆರಳು ಒಂದರ ಬೆನ್ನೋಂದು ಹಿಡಿದು ಅನಂತದತ್ತ ನಡೆದವು! ಹತ್ತು ದೆಸೆಗು ಎದ್ದು ನಿಂತ ಹುತ್ತವವನ ಮುತ್ತಿತು. ಮನವು ಮನದ ಕಡಲ ನೀರ ಲಕ್ಷ ಪದರದಾಳದೊಳಗೆ ಏನನೋ ಹುಡುಕುತಿತ್ತು! ಉತ್ತಿಷ್ಟೋತ್ತಿಷ್ಠ ಭದ್ರಂ ತೇ ತಪ್ತಂ ತೇ ಸುಮಹತ್ ತಪಃ ಅನುಜ್ಞೆ ಬರುವವರೆಗು ಪ್ರಾಣ ರಾಮನಾಮಧ್ಯಾನಲೀನ? 2 ಟಕ್ ಟಕ್ ಟಕ್ ಟಕ್ಕ! ಉಳಿಯ ಏಟು ಕಲ್ಲಿಗೆ. ಕಲ್ಲು ತುಣುಕ ನೂರು ಹಾರು; ತೆರವ ತುಂಬಲೆದೆಯ ಚೂರು. ಟಕ್ ಟಕ್ ಟಕ್ ಟಕ್ಕ! ಹಗಲು ಇರುಳು ಒಂದೆ ಸದ್ದು ಮುಗಿಲಿನೆಡೆಗೆ ಎದ್ದು ಶಿಲ್ಪಿ ಎದೆಯ