ಪುಟ:Elu Suthina Kote.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦ ಏಳು ಸುತ್ತಿನ ಕೋಟೆ ಇಂಥ ಲೋಕಕ್ಕೊಂದು ಮಗು ಬಂತು, ಬಂತು! 9 ಬಂತೆನಲೆ? ದೊರೆ ಬರವ ನುಡಿಯಿತೇನು ನಗಾರಿ? ಮಾರ್ಗದರ್ಶಕ ಕಾರು ಹೋಯಿತೇನು? ನೀಲಿಮೆಗೆ ಮುಗಿಲರಳೆ ಉರುಳಿದುದ ಕಂಡೆಯ? ಸುಮಕೆ ಸೌರಭ ಬಂದ ಘಳಿಗೆ ಯಾವುದು ಹೇಳು. ಬಂತೆ ಮಗು? ಅಥವ ಮನೆಯೊಳಗಿತ್ತೊ; ಅಜ್ಞಾತದಾಳದೊಳು ತಲೆ ಮರೆಸಿ ಕುಳಿತೊಂದು ನೆನಹಂತ ಆಗ ಅದು ಹೊರಬಿತ್ತೊ ಮಗು ಬಂದ ಮೇಲೆನಗೆ ಮರುಬರವಿನರಿವು. ಮುದ್ದು ಮುಖ; ಬಿಗಿಹಿಡಿದ ಕೈ; ಚೆಲುವು ಮೈ; ದೈನ್ಯ ಕನ್ನೊಳಗಿತ್ತು. 'ಬಂದೆ ನಿನ್ನನೆ ನಂಬಿ. ಇರಲು ಎಡೆಗೊಡು ಸಾಕು; ತಿನ್ನಲು ಏನು ಬೇಡ.' a. ಮಗುವಿನೊಡನಾಟ ಹಿತವೆನಿಸೆ ಮನಕೆ ದಿನ ದಿನಕೆ ಸಮೆದ ತಿಂಗಳು ಹೊಸತು ತಿಂಗಳಿಗೆ ವರುಷ ಹೊಸ ವರುಷಕ್ಕೆ ಎಡೆಗೊಟ್ಟುದೇ ಕಾಣದಾಯ್ತನ್ನ ಕಂಗಳಿಗೆ? ಅಂತವಿರದಾಯ್ತು ಎದೆಯುಂಡ ಹರುಷಕ್ಕೆ. ನನಗೆ ಹದಿನೆಂಟು ತುಂಬಿದ ದಿನಕೆ ಮಗುವಿಗೂ ಹದಿನೆಂಟು. ಘಳಿಗೆ ಘಳಿಗೆಗು ಬೆಳೆಯಿತೆಮ್ಮ ನೇಹದ ನಂತು. ಕಂಗಳುಟ್ಟವು ಗೆಳೆಯ ನೀಡಿದ ಗಾಜು. ತಿರೆ ತಳೆದ ಸಿರಿ ಚೆಲುವ ನೋಡುವದೆ ಬಲು ಮೋಜು!