ಪುಟ:Elu Suthina Kote.pdf/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

80 ಏಳು ಸುತ್ತಿನ ಕೋಟೆ ದುಂಬಿ ಅರವಿಂದದೊಳು ಲೀನವಾಗುವ ಮುನ್ನ ನನ್ನೆಡೆಗೆ ಮೊಗ ತಿರುಹಿ ಕಣ್ಣ ಹೊಡೆಯಿತು ಒಮ್ಮೆ. ಮಾಮರವ ಸೆರೆಹಿಡಿದ ಬಳ್ಳಿ ಮೈ ಕುಣಿಕುಣಿಸಿ ಹೂವು ನಗೆಯೆಸೆದು ಕೆಣಕಿತು ನನ್ನ (ಅದಕೆಂಥ ಹೆಮ್ಮೆ!) ತುಂಬಿದೆದೆ ಮಲೆ ಮೇಲೆ ಸಂಜೆ ಸೂರ್ಯನ ಹೊನ್ನೆ ಬೆರಳ ಲೀಲೆ! ಹುಲ್ಲು ಹಾಸಿದೆ ಕೆಳಗೆ; ಮೇಲೆ ಬೆಳುದಿಂಗಳಿನ ಮಿದು ಹೊದಿಕೆ_ ಮರೆಯಿಂದ ಹೆಣ್ಣ ದನಿ ಮೋದದೊಳು ನಕ್ಕ ಕಿಲಕಿಲ ಚೆಂದ ಏಳು ಸುತ್ತಿನ ಕೋಟೆ. ಒಳಗೆ ರಾಜಕುಮಾರಿ. ಮಾನಸಂರಕ್ಷಣೆಗೆ ಇರುವದೊಂದೆ ದಾರಿ, ಹೊಳೆ ಬೆಂಕಿ ವಿಷ ಚೂರಿ! ಕೇಳದೇ ಆಕ್ರಂದ? ನಡೆ ಮುಂದೆ! ನಾನೆ ರಾಜಕುಮಾರ: ಇದೋ ಬಂದೆ ಮನದನ್ನೆ ಅಸುವ ನೀಗುವ ಚಿಂತೆಯೇಕಿನ್ನು ಕಾಂತೇ? ಮಗುವಾಗಿ ಬಂದವನು ಮುಗಿಲುದ್ದ ನಿಂತ! ನಾನೆ ಮಗುವಾದೆ, ಚೋಟುದ್ದವಾದೆ. ಅವನು ಬಡಿದನು ತಾಳ; ನಾ ಕುಣಿದೆ ಬೇತಾಳ! ಜಗದಗಲ ನಿಂತವನು ನೂರು ರೂಪವ ತಾಳಿ ಎಡೆಬಿಡದೆ ಕಾಡಿದ. ಮೈಯೊಳಗೆ ಮನೆ ಮಾಡಿ ಬಯಕೆ ಬಾಧೆಯು ಒಂದೆ ಎನುವಂತೆ ಮಾಡಿದ ನಾನಾದೆ ಮುಳ್ಳುಗಿಡ ಅಗ್ನಿಪರ್ವತದೊಳಗೆ ಬಯಕೆಲಾವವು ಬಂದಿ. ಮೈಯೊಳಗೆ ಸೆರೆಯಾದ ಹುಚ್ಚು ಹೊಳೆಗೆ ರವಿಯಿರವನರಿಯದಿಹ ಕಡಲ ಕೂಡುವ ಬಯಕೆ!